ಸಾರಾಂಶ
ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಮುಂದಾಗಿದ್ದಾರೆ ಎಂದು ಮನವಿಯಲ್ಲಿ ದೂರಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಸ್ಲಿಂ ಮುತ್ತಹಿದಾ ಕೌನ್ಸಿಲ್ ಶಾಖೆ ಮುದ್ದೇಬಿಹಾಳ ಹಾಗೂ ಮಹಿಳಾ ಪರ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು ತಹಸೀಲ್ದಾರ ಬಲರಾಮ ಕಟ್ಟಿಮನಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಎಲ್ಲ ಧರ್ಮ, ಜಾತಿಯವರು ಸಮಾನರಾಗಿ ಜೀವಿಸುವ ಹಕ್ಕು ಸಂವಿಧಾನ ನೀಡಿದೆ. ಭಾರತ ಸೌಹಾರ್ದತೆಗೆ ಹೆಸರಾಗಿದೆ. ಆದರೆ, ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಮುಂದಾಗಿದ್ದಾರೆ ಎಂದು ಮನವಿಯಲ್ಲಿ ದೂರಿದರು.ಈ ವೇಳೆ ಮುಸ್ಲಿಂ ಕೌನ್ಸಿಲ್ ತಾಲೂಕು ಅಧ್ಯಕ್ಷ ಡಿ.ಎಂ ಚೌದ್ರಿ, ಮೌಲನಾ ಹುಸೇನ್ ಉಮರಿ, ಡಾ. ಯಾಸೀನ್ ಮುಲ್ಲಾ, ಮೌಲಾನಾ ಅಲ್ಲಾಭಕ್ಷ ಖಾಜಿ, ಕಾರಿ ಇಶಕ್ ಮಾಗಿ, ಮುನ್ನಾ ಹಡಗಲಿ, ನೊರೆ ಆಯೆಮ ಖಾನ್, ನಿಸಾರ ಮಕಾಂದಾರ, ಮಲಿಕ್ ನದಾಫ, ಬಾಪ್ ಧವಳಗಿ, ಮಹಮ್ಮದ್ ಸಮಿಉಲ್ಲಾ ಹುಣಚಗಿ, ಇಬ್ರಾಹಿಂ ತಪಾಲ್, ವಕೀಲೆ ಹಸೀನಾ ಅನಂತಪುರ್, ಸಿಸ್ಟರ್ ಶೋಭಾ, ಮುಸರತ್ ನದಾಫ್, ರಜಿಯಾ ಅಬಾಲೆ, ಖುರ್ಷಿದಾ ನದಾಫ್, ಆಯಿಷಾ ಮಕಾನ್ದಾರ, ತಯ್ಯಬಾ ಬಡೆಖಾನ್, ಸಮೀರಾ ಬೀಳಗಿ ಸೇರಿದಂತೆ ಹಲವರು ಇದ್ದರು.
-೧ಎಂಬಿಎಲ್೨: ಮುದ್ದೇಬಿಹಾಳ ಪಟ್ಟಣದ ಮುಸ್ಲಿಂ ಮುತ್ತಹಿದಾ ಕೌನ್ಸಿಲ್ ಶಾಖೆ ಹಾಗೂ ಮಹಿಳಾ ಪರ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು ತಹಶಿಲ್ದಾರ ಬಲರಾಮ ಕಟ್ಟಿಮನಿಯವರ ಮೂಲಕ ಮುಖ್ಯಮಂತ್ರಿ ಸಿದ್ರಾಮಯ್ಯನವರಿಗೆ ಮನವಿ ಸಲ್ಲಿಸಿದರು.