ಸಾರಾಂಶ
ನಾಡಿನ ಹಿರಿಯ ಅನುಭಾವಿ, ಶರಣ, ಶತಾಯುಷಿ ವಿ.ಸಿದ್ದರಾಮಣ್ಣ ಶರಣರು ಸೋಮವಾರ ಮಧ್ಯಾಹ್ನ ನಿಧನರಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ತೀವ್ರ ಸಂತಾಪ ಸೂಚಿಸಿದೆ.
ದಾವಣಗೆರೆ: ನಾಡಿನ ಹಿರಿಯ ಅನುಭಾವಿ, ಶರಣ, ಶತಾಯುಷಿ ವಿ.ಸಿದ್ದರಾಮಣ್ಣ ಶರಣರು ಸೋಮವಾರ ಮಧ್ಯಾಹ್ನ ನಿಧನರಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ತೀವ್ರ ಸಂತಾಪ ಸೂಚಿಸಿದೆ.
ಬಸವ ಕಲ್ಯಾಣದ ಅನುಭವ ಮಂಟಪ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದ ಸಿದ್ದರಾಮಣ್ಣ ಶರಣರು ಹಲವಾರು ಬಸವ ತತ್ವಜ್ಞಾನದ ಗ್ರಂಥಗಳನ್ನು ರಚಿಸಿ, ಸಮಾಜಕ್ಕೆ ಮಹದುಪಕಾರ ಮಾಡಿದವರು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರೆ ಪದಾಧಿಕಾರಿಗಳು ಸ್ಮರಿಸಿದ್ದಾರೆ.ಶರಣರ ಚರಿತ್ರೆಯ ನಾಟಕಗಳನ್ನು, ರಚಿಸಿ ನಿರ್ದೇಶನ ಮಾಡಿದ ಸಿದ್ದರಾಮಣ್ ಶರಣರು ನಾಡು ಕಂಡ ಅಪರೂಪದ ಅನುಭಾವಿಗಳು. ಶಿವಯೋಗ ಸಾಧಕರು, ಅನುಪಮ ಪ್ರವಚನಕಾರರಾದ ಸಿದ್ದರಾಮಣ್ಣ ಶರಣರ 104 ವರ್ಷಗಳ ಆಯುಷ್ಯವೆಲ್ಲಾ ಬಸವಾರ್ಪಿತವಾದದ್ದು. ಇಂತಹ ದಿವ್ಯಾತ್ಮಕ್ಕೆ ಬಸವಾದಿ ಪ್ರಮಥರು ಲಿಂಗೈಕ್ಯವ ಕರುಣಿಸಲಿ ಎಂದು ಕಸಾಪ ಸಂತಾಪ ವ್ಯಕ್ತಪಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ.
- - - -12ಕೆಡಿವಿಜಿ19: ವಿ.ಸಿದ್ದರಾಮಣ್ಣ