ಹೊಳೆಹೊನ್ನೂರು ಪ.ಪಂ.ನಲ್ಲಿ ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸಿ: ಮನೋಹರ್‌

| Published : Feb 11 2024, 01:48 AM IST

ಹೊಳೆಹೊನ್ನೂರು ಪ.ಪಂ.ನಲ್ಲಿ ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸಿ: ಮನೋಹರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ವಿಚಾರದಲ್ಲಿ ನಮಗೆ ಉದಾಹರಣೆ ಹಾಗೂ ಕಾರಣಗಳು ಬೇಕಾಗಿಲ್ಲ. ಉತ್ತಮ ಫಲಿತಾಂಶ ಮಾತ್ರ ಮುಖ್ಯ. ಪಟ್ಟಣ ಪಂಚಾಯಿತಿಯೂ ಅಪ್ ಗ್ರೇಡ್ ಆಗುತ್ತಿದೆ. ಹೀಗಿರುವಾಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತವೆ. ಇಂತಹ ಸಂದರ್ಭ ಕನಿಷ್ಠ ತಿಂಗಳಿಗಾದರೂ ಒಂದು ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಗೆ ದಿಢೀರ್‌ ಭೇಟಿ ವೇಳೆ ಹೇಳಿದ್ದಾರೆ.

ಹೊಳೆಹೊನ್ನೂರು: ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ವಿಚಾರದಲ್ಲಿ ನಮಗೆ ಉದಾಹರಣೆ ಹಾಗೂ ಕಾರಣಗಳು ಬೇಕಾಗಿಲ್ಲ. ಉತ್ತಮ ಫಲಿತಾಂಶ ಮಾತ್ರ ಮುಖ್ಯ ಎಂದು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಹೇಳಿದರು.

ಇಲ್ಲಿಯ ಪಟ್ಟಣ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ, ವ್ಯವಸ್ಥೆಗಳ ಪರಿಶೀಲಿಸಿದ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣ ಪಂಚಾಯಿತಿಯೂ ಅಪ್ ಗ್ರೇಡ್ ಆಗುತ್ತಿದೆ. ಹೀಗಿರುವಾಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತವೆ. ಇಂತಹ ಸಂದರ್ಭ ಕನಿಷ್ಠ ತಿಂಗಳಿಗಾದರೂ ಒಂದು ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಭದ್ರಾನದಿಯ ನೀರನ್ನು ಕುಡಿಯಲು ನೀಡುತ್ತಿದ್ದು, ಅದರ ಶುದ್ಧೀಕರಣ ದುಸ್ಥತಿಯಲ್ಲಿದೆ. ಇದರ ಟೆಂಡರ್ ₹6 ಲಕ್ಷಕ್ಕೆ ಮಂಜೂರಾಗಿದ್ದು, ಇದನ್ನು 8ರಿಂದ 10 ದಿನದೊಳಗೆ ಬಗೆಹರಿಸಬೇಕಾಗಿದೆ. ಪಟ್ಟಣದ ಪೇಟೆ ಬೀದಿ ರಸ್ತೆಯ ಒತ್ತುವರಿ ಜಾಗವನ್ನು ಸರ್ವೇ ಮಾಡಿ, ತಕ್ಷಣವೇ ಆಕ್ರಮಿತ ಜಾಗವನ್ನು ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದರು.

ಆಸ್ತಿ ತೆರಿಗೆ ಸರ್ಕಾರದ ವಿಧಿಸಿದ ದಂಡವಾಗಿದ್ದು, ಅದನ್ನು ಯಾರೂ ಬದಲಾಯಿಸಲು ಬರುವುದಿಲ್ಲ. ಸರ್ಕಾರವೇ ನಿರ್ಧರಿಸಬೇಕಾಗಿದೆ. ಸಾರ್ವಜನಿಕರಿಗೆ ಅಧಿಕೃತ ಸ್ವತ್ತುಗಳಿಗೆ ಇ-ಆಸ್ತಿ ಸೌಲಭ್ಯ ತಕ್ಷಣವೇ ನೀಡಬೇಕು. ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತೆ ಮಾಡಬಾರದು ಎಂದರು.

ಸ್ವತ್ತಿನ ಮಾಲೀಕರಿಗೆ ಅಥವಾ ವಾರಸುದಾರರಿಗೆ ಯಾವುದೇ ತಿಳಿವಳಿಕೆ ನೀಡದೇ ದಂಡ ಮಾಡುವಂತಿಲ್ಲ. ಜನರಿಗೆ ಯಾವುದೇ ರೀತಿಯ ಅನುಕೂಲ ಮಾಡದೇ ಕಾರ್ಯನಿರ್ವಹಿಸಬೇಕು. ಪಟ್ಟಣದ ಚರಂಡಿ ಹಾಗೂ ಕಸ ವಿಲೇವಾರಿಯನ್ನು ಬಗೆಹರಿಸಬೇಕು. ಅಧಿಕಾರಿಗಳು ಒಬ್ಬರ ಮೇಲೆ ಇನ್ನೊಬ್ಬರು ಹೇಳದೇ ಕಾರ್ಯನಿರ್ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಆರ್.ಉಮೇಶ್, ಹರೀಶ್, ನಾಗೇಶ್, ಜಗದೀಶ್, ನಟರಾಜ್ ಇನ್ನಿತರರು ಹಾಜರಿದ್ದರು.

- - - -09ಎಚ್‍ಎಚ್‍ಆರ್ ಪಿ1:

ಹೊಳೆಹೊನ್ನೂರಿನ ಪಟ್ಟಣ ಪಂಚಾಯಿತಿಗೆ ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಭೇಟಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.