ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಮಹತ್ವಾಕಾಂಕ್ಷೆಯ ಜಾತಿ ಜನಗಣತಿಯು ಬ್ರಾಹ್ಮಣ ಸಮುದಾಯದ ಜನಸಂಖ್ಯೆಯನ್ನು ಕೃತಕವಾಗಿ ವಿಭಜಿಸಲಾಗಿದೆ. ಇದರಿಂದ ಅವರ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತಿದೆ ಹಾಗೂ ಪ್ರಾತಿನಿಧ್ಯವನ್ನು ವಿರೂಪಗೊಳಿಸುತ್ತಿದೆ. ಹಾಗಾಗಿ ನಮ್ಮ ಸಮಾಜಕ್ಕೆ ಅನ್ಯಾಯವಾಗುತ್ತಿದ್ದು, ಈ ಕೂಡಲೇ ಕಾಲಂ ನಂಬರ್ 210 ಮಾತ್ರ ಉಳಿಸಿ ಇನ್ನುಳಿದ ಕಾಲಂಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಬ್ರಾಹ್ಮಣ ಅಭಿವೃದ್ಧಿ ಮಹಾಸಭಾ ಸಂಘದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮಹತ್ವಾಕಾಂಕ್ಷೆಯ ಜಾತಿ ಜನಗಣತಿಯು ಬ್ರಾಹ್ಮಣ ಸಮುದಾಯದ ಜನಸಂಖ್ಯೆಯನ್ನು ಕೃತಕವಾಗಿ ವಿಭಜಿಸಲಾಗಿದೆ. ಇದರಿಂದ ಅವರ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತಿದೆ ಹಾಗೂ ಪ್ರಾತಿನಿಧ್ಯವನ್ನು ವಿರೂಪಗೊಳಿಸುತ್ತಿದೆ. ಹಾಗಾಗಿ ನಮ್ಮ ಸಮಾಜಕ್ಕೆ ಅನ್ಯಾಯವಾಗುತ್ತಿದ್ದು, ಈ ಕೂಡಲೇ ಕಾಲಂ ನಂಬರ್ 210 ಮಾತ್ರ ಉಳಿಸಿ ಇನ್ನುಳಿದ ಕಾಲಂಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಬ್ರಾಹ್ಮಣ ಅಭಿವೃದ್ಧಿ ಮಹಾಸಭಾ ಸಂಘದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.ಈ ವೇಳೆ ಬ್ರಾಹ್ಮಣ ಸಮಾಜದ ಮುಖಂಡ ಬಿ.ಪಿ.ಕುಲಕರ್ಣಿ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವೈಜ್ಞಾನಿಕವಾಗಿ ನಡೆದಿಲ್ಲ. ಬ್ರಾಹ್ಮಣರ ಮನೆಗಳಿಗೆ ಭೇಟಿ ನೀಡದೆಯೇ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಆದ್ದರಿಂದ, ಬ್ರಾಹ್ಮಣರ ಜಾತಿಗಣತಿಯನ್ನು ವೈಜ್ಞಾನಿಕವಾಗಿ ನಡೆಸಬೇಕು. ಈಗಾಗಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕ್ರಮ ಸಂಖ್ಯೆ 209ರಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, ಕ್ರಮ ಸಂಖ್ಯೆ 883ರಲ್ಲಿ ಬ್ರಾಹ್ಮಣ ಮುಜಾವರ ಮುಸ್ಲಿಂ, ಕ್ರಮ ಸಂಖ್ಯೆ 1384 ರಲ್ಲಿ ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್ ಎಂಬುದನ್ನು ವರ್ಗೀಕರಣ ಮಾಡಿ ವರದಿ ಬಿಡುಗಡೆ ಮಾಡಲಾಗಿದೆ. ಇದು ಎಲ್ಲ ಗೊಂದಲಗಳಿಗೆ ಕಾರಣವಾಗಿದೆ ಎಂದು ಕಿಡಿ ಕಾರಿದರು.ಬ್ರಾಹ್ಮಣ ಸಮುದಾಯದವರ ಮನೆಗಳಿಗೆ ಭೇಟಿ ನೀಡದಿದ್ದರೂ, ಜಾತಿಗಣತಿ ನಡೆದಿದೆ ಎನ್ನುವುದು ಸೂಕ್ತವಲ್ಲ. ಜಾತಿಗಣತಿಯನ್ನು ಇನ್ನೊಂದು ಸಾರಿ ವೈಜ್ಞಾನಿಕವಾಗಿ ಮಾಡಬೇಕು. ಸದ್ಯ ಮಾಡಿರುವ ಜಾತಿ ಗಣತಿಯ ವರದಿ ಆಧರಿಸಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್) ಕೇಂದ್ರ ಸರ್ಕಾರ ನೀಡಿರುವ ಶೇ.10ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿ ಮಾಡಬೇಕು. ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡಬೇಕು. ಅಲ್ಪಸಂಖ್ಯಾತರ ಧಾರ್ಮಿಕ ಕ್ಷೇತ್ರಗಳಲ್ಲಿ ಮತ ಪ್ರಚಾರವಾಗುವಂತೆ ನೋಡಿಕೊಳ್ಳಬೇಕು. ಸಮುದಾಯದ ಸದಸ್ಯರು ಬ್ರಾಹ್ಮಣ ಎಂದು ನೋಂದಾಯಿಸಿಕೊಳ್ಳಬೇಕು, ಇಲ್ಲವಾದರೇ ತಪ್ಪಾಗಿ ನಮೂದಿಸಿದರೆ ಸಮುದಾಯದ ಸಂಖ್ಯೆಗಳನ್ನು ಮತ್ತು ಸರಿಯಾದ ಸೌಲಭ್ಯಗಳು ಮತ್ತು ಮನ್ನಣೆಯನ್ನು ಕಸಿದುಕೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಸಾಂಪ್ರದಾಯಿಕವಾಗಿ, ಸಮುದಾಯವನ್ನು ಮೂರು ಪ್ರಮುಖ ಪಂಗಡಗಳಾಗಿ ವಿಂಗಡಿಸಲಾಗಿದೆ. ಆದರೆ ಜನಗಣತಿಯು ಅವರನ್ನು ನಿರಂಕುಶವಾಗಿ ವಿಭಜಿಸಿದೆ. ಸಮುದಾಯವು ಈಗಿರುವುದಕ್ಕಿಂತ ದುರ್ಬಲವಾಗಿ ಕಾಣುತ್ತದೆ. ಈ ವರ್ಗೀಕರಣದಿಂದ ನಮ್ಮ ಜನಸಂಖ್ಯಾ ಶಕ್ತಿಯನ್ನು ವಿರೂಪಗೊಳಿಸುವುದಲ್ಲದೆ, ನಮ್ಮ ಸಾಮಾಜಿಕ,ಆರ್ಥಿಕ ಪ್ರಾತಿನಿಧ್ಯವನ್ನು ದುರ್ಬಲಗೊಳಿಸುತ್ತದೆ. ನಮ್ಮ ಬ್ರಾಹ್ಮಣ ಸಮುದಾಯದಲ್ಲಿ ಯಾವುದೇ ಉಪಜಾತಿ ಒಳಪಂಗಡಗಳಿಲ್ಲ. ಹೀಗಾಗಿ ಸರ್ಕಾರ ಇನ್ನುಳಿದ ಒಳಪಂಗಡಗಳನ್ನು ರದ್ದು ಪಡಿಸಿ 210 ಕ್ರಮ ಸಂಖ್ಯೆ ಕಾಲಂ ಮಾತ್ರ ಉಳಿಸಿ ಬ್ರಾಹ್ಮಣ ಎನ್ನುವ ಜಾತಿ ಬರೆಯಲು ಅನುಕೂಲ ಮಾಡಿಕೊಡಬೇಕು, ಸಮೂದಾಯದವರು ಅಂತಹ ತಪ್ಪು ನಿರ್ಧಾರವನ್ನು ಕೈಬಿಟ್ಟು ಬ್ರಾಹ್ಮಣ ಎಂದು ಮಾತ್ರ ನಮೂದಿಸಬೇಕು ಎಂದು ಮನವಿ ಮಾಡಿದ್ದಾರೆ.ಈ ವೇಳೆ ಎಲ್.ಆರ್.ದೇಶಪಾಂಡೆ, ವಿ.ಎಸ್.ಕುಲಕರ್ಣಿ, ಎಂ.ಆರ್.ದೇಶಪಾಂಡೆ, ಪಿ.ಎಂ.ದೇಶಪಾಂಡೆ, ಅನೀಲ ಕುಲಕರ್ಣಿ, ಪುಟ್ಟು ಕುಲಕರ್ಣಿ, ಗುರುರಾಜ ಕುಲಕರ್ಣಿ, ವಾಸುದೇವ ಬಸಾಲವಾಡಗಿ, ಪ್ರದೀಪ ಕುಲಕರ್ಣಿ, ಬಲವಂತ್ರಾಯ ದೇಶಪಾಂಡೆ, ಎಂ.ಕೆ.ಕುಲಕರ್ಣಿ, ಉಲ್ಲಾಸ ಕುಲಕರ್ಣಿ, ಅರವಿಂದ ಕುಲಕರ್ಣಿ, ಕೃಷ್ಣಾ ಕುಲಕರ್ಣಿ, ಆನಂದ ಜಂಬಗಿ ಸೇರಿ ಹಲವರು ಇದ್ದರು.