ಮೌಢ್ಯಾಚರಣೆ ರಹಿತ ಗ್ರಾಮದೇವತೆ ಉತ್ಸವ ನಡೆಸಿ: ಕದಸಂ ಸಮಿತಿ ಆಗ್ರಹ

| Published : Feb 23 2025, 12:32 AM IST

ಮೌಢ್ಯಾಚರಣೆ ರಹಿತ ಗ್ರಾಮದೇವತೆ ಉತ್ಸವ ನಡೆಸಿ: ಕದಸಂ ಸಮಿತಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮಾ.18 ರಿಂದ 22ರವರೆಗೆ ನಡೆಯುವ ಹರಿಹರದ ಗ್ರಾಮದೇವತೆ ಉತ್ಸವವನ್ನು ಮೌಢ್ಯಾಚರಣೆ ರಹಿತವಾಗಿ ಆಚರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ತಾಲೂಕು ಘಟಕದಿಂದ ತಹಸೀಲ್ದಾರ್ ಗ್ರೇಡ್-2 ಪುಷ್ಪಾವತಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

- ಕೋಣಬಲಿ, ಬೇವಿನ ಉಡುಗೆ ಹರಕೆ ನಿಷೇಧಕ್ಕೆ ಒತ್ತಾಯ- - - ಹರಿಹರ: ಮಾ.18 ರಿಂದ 22ರವರೆಗೆ ನಡೆಯುವ ಹರಿಹರದ ಗ್ರಾಮದೇವತೆ ಉತ್ಸವವನ್ನು ಮೌಢ್ಯಾಚರಣೆ ರಹಿತವಾಗಿ ಆಚರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ತಾಲೂಕು ಘಟಕದಿಂದ ತಹಸೀಲ್ದಾರ್ ಗ್ರೇಡ್-2 ಪುಷ್ಪಾವತಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಐದು ದಿನಗಳ ಉತ್ಸವದಲ್ಲಿ ನಗರದ ದೇವಸ್ಥಾನ ರಸ್ತೆಯಲ್ಲಿ ರಚಿಸಲಾಗುವ ಚೌಕಿಮನೆ ಸಮೀಪ ಮಹಿಳಾ ಹಾಗೂ ಪುರುಷರು ಭಕ್ತರು ಹರಕೆ ಹೆಸರಲ್ಲಿ ಅರೆಬೆತ್ತಲೆ, ಬೇವಿನ ಉಡುಗೆ ಸೇವೆಯೆಂಬ ಮೌಢ್ಯ ಆಚರಿಸುತ್ತಾರೆ. ಅದನ್ನು ನಿಲ್ಲಿಸಬೇಕು. ಬೇವಿನ ಸೇವೆ ಅನಿವಾರ್ಯವಾದರೆ ಉಟ್ಟುಡುಗೆಯ ಮೇಲೆಯೇ ಬೇವನ್ನು ಸುತ್ತಿಕೊಂಡು ಹರಕೆ ನೆರೆವೇರಿಸಬಹುದು. ಮಹಿಳೆಯರು ನಿರ್ವಸ್ತರಾಗಿ ಬೇವಿನ ಉಡುಗೆ ಆಚರಣೆ ನಿಷೇಧಿಸಬೇಕು ಎಂದರು.

ಕೋಣಗಳ ಬಲಿ ನಿಷೇಧ:

ಕಾನೂನು, ನಿಬಂಧನೆಗಳ ಅನ್ವಯ ದೇವ, ದೇವಿಯ ಹೆಸರಲ್ಲಿ ಕೋಣ ಬಲಿ ನೀಡುವಂತಿಲ್ಲ. ಹೀಗಾಗಿ, ಈ ಉತ್ಸವದಲ್ಲಿ ಕೋಣಗಳ ಬಲಿ ಕಟ್ಟುನಿಟ್ಟಾಗಿ ತಡೆಯಬೇಕಾಗಿದೆ. ಗ್ರಾಮದೇವತೆ ಉತ್ಸವದಲ್ಲಿ ಭಕ್ತಿ, ಭಾವದ ಪರಾಕಾಷ್ಟೆ ಇರಲಿ. ಆದರೆ, ಮೌಢ್ಯಾಚರಣೆಗಳು ತೊಲಗಬೇಕು. ಈ ನಿಟ್ಟಿನಲ್ಲಿ ತಾಲೂಕು ಮತ್ತು ಜಿಲ್ಲಾಡಳಿತ ಬೀದಿನಾಟಕ, ಕರಪತ್ರ ವಿತರಣೆ, ಧ್ವನಿವರ್ಧಕದ ಮೂಲಕ ವ್ಯಾಪಕ ಜನಜಾಗೃತಿಯ ಪ್ರಚಾರ ಕಾರ್ಯ ನಡೆಸಬೇಕು ಎಂದರು.

ಈ ಸಂದರ್ಭ ಸಮಿತಿ ಮುಖಂಡರಾದ ಕಡ್ಲೆಗೊಂದಿ ತಿಮ್ಮಣ್ಣ, ಸಂಜೀವ್, ಅಂಜನಪ್ಪ, ಪರಶುರಾಮ್, ಧನು ಕುಮಾರ್, ಬಸವರಾಜ್ ಇದ್ದರು.

- - - -21ಎಚ್‍ಆರ್‍ಆರ್01:

ಹರಿಹರದಲ್ಲಿ ಮಾ.18 ರಿಂದ ಮೌಢ್ಯರಹಿತ ಗ್ರಾಮದೇವತೆ ಉತ್ಸವ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ದಸಂಸ ವತಿಯಿಂದ ತಹಶೀಲ್ದಾರ್ ಗ್ರೇಡ್-2 ಪುಷ್ಪಾವತಿ ಅವರಿಗೆ ಮನವಿ ಸಲ್ಲಿಸಲಾಯಿತು.