ಸಾರಾಂಶ
ಕುರುಬ ಸಮಾಜದಲ್ಲಿ ವಧು-ವರರ ಅನ್ವೇಷಣೆ ಇಂದು ಕಷ್ಟದಾಯಕವಾಗಿರುವುದರಿಂದ ಇಂತಹ ಸಮಾವೇಶದಿಂದ ಪಾಲಕರಿಗೆ ಒಂದೇ ವೇದಿಕೆಯಲ್ಲಿ ಹಲವಾರು ಅವಕಾಶಗಳು ಹಾಗೂ ಹಣ ಮತ್ತು ಸಮಯದ ಉಳಿತಾಯವಾಗಲಿದೆ ಎಂದು ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಹೇಳಿದರು.
ಗದಗ: ಕುರುಬ ಸಮಾಜದಲ್ಲಿ ವಧು-ವರರ ಅನ್ವೇಷಣೆ ಇಂದು ಕಷ್ಟದಾಯಕವಾಗಿರುವುದರಿಂದ ಇಂತಹ ಸಮಾವೇಶದಿಂದ ಪಾಲಕರಿಗೆ ಒಂದೇ ವೇದಿಕೆಯಲ್ಲಿ ಹಲವಾರು ಅವಕಾಶಗಳು ಹಾಗೂ ಹಣ ಮತ್ತು ಸಮಯದ ಉಳಿತಾಯವಾಗಲಿದೆ ಎಂದು ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಹೇಳಿದರು.
ಅವರು ಗದಗ ನಗರದ ಕನಕಭವನದಲ್ಲಿ ಹಾಲುಮತ ಮಹಾಸಭಾ ಜಿಲ್ಲಾ ಘಟಕ ಗದಗ ಹಾಗೂ ಕುರುಬರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಜರುಗಿದ 7ನೇ ರಾಜ್ಯಮಟ್ಟದ ವಧು-ವರರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸಮಾವೇಶದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಿವೃತ್ತ ಪೊಲೀಸ್ ಅಧಿಕಾರಿ ಡಿ.ಡಿ. ಮಾಳಗಿ ಅವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಈ ಸಮಾವೇಶ ಕೌಟುಂಬಿಕ ಕಾರ್ಯಕ್ರಮವಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗದಗ ಜಿಲ್ಲೆಯಲ್ಲಿ ಸಮಾಜ ಬಾಂಧವರು ವಧು-ವರರಿಗೆ ಉಡಿ ತುಂಬಿವ ಮೂಲಕ ಗೌರವಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದ ಅವರು, ನಮ್ಮಲ್ಲಿ ಉಪ ಪಂಗಡಗಳಲ್ಲಿ ತಾರತಮ್ಯವಿದೆ. ಅದೇರೀತಿ ಬೇರೆ ಸಮುದಾಯದಲ್ಲಿ ಉಪ ಪಂಗಡಗಳನ್ನು ಮರೆತು ಒಂದಾಗುತ್ತಿರುವ ಸಮಯದಲ್ಲಿ ನಾವುಗಳ ಕೂಡಾ ತಾರತಮ್ಯ ಮರೆತು ನಾವೆಲ್ಲರೂ ಕುರುಬರು ಎಂದು ಸಮಾಜವನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮುಂತಾದವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ಡಾ. ಬಿ.ಎಫ್. ದಂಡಿನ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸ್ಲಂ ಬೋರ್ಡನ ರಾಜ್ಯ ನಿರ್ದೇಶಕ ರಾಮಕೃಷ್ಣ ರೊಳ್ಳಿ ಅವರನ್ನು ಸನ್ಮಾನಿಸಲಾಯಿತು.ಈ ಸಮಾವೇಶದಲ್ಲಿ ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಯ್ಯ ಸ್ವಾಮಿಗಳು, ವೈ.ಡಿ. ಜಡದೆಲಿ, ಕುರುಬರ ಸಂಘದ ತಾಲೂಕು ಅಧ್ಯಕ್ಷ ನಾಗಪ್ಪ ಗುಗ್ಗರಿ, ಹಾಲುಮತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಸುವರ್ಣ ನಾಗರಾಳ, ಉಮಾ ದ್ಯಾವನೂರ, ಹಾಲಪ್ಪ ಹೊಂಬಳ, ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಜಿಲ್ಲಾಧ್ಯಕ್ಷ ಬಸವರಾಜ ನೀಲಗಾರ, ಸೋಮನಗೌಡ ಪಾಟೀಲ, ಮುತ್ತು ಜಡಿ, ರಾಘು ವಗ್ಗನವರ, ಸತೀಶ ಗಿಡ್ಡಹನುಮಣ್ಣವರ, ಕುಮಾರ ಮಾರನಬಸರಿ, ಮಲ್ಲೇಶ ಬಿಂಗಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಲ್ಪಾ, ಸೌಮ್ಯಾ ಹಾಗೂ ಸಂಜನಾ ಪ್ರಾರ್ಥಿಸಿದರು. ಮೋಹನ ಇಮರಾಪೂರ ನಿರೂಪಿಸಿದರು.