ಎಸ್ಎಸ್‌ಎಲ್‌ಸಿ ನಂತರ ಗೊಂದಲ ನಿವಾರಣೆ ಅಗತ್ಯ

| Published : Aug 05 2024, 12:45 AM IST

ಸಾರಾಂಶ

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಕಾಡೆಮಿಕ್ ಇಗ್ನಿಷನ್ ಟು ದ ಪ್ರೊ ಮೈಂಡ್ಸ್ ಪ್ರೋಗ್ರಾಮನ್ನು ರಾಜು ಆರ್.ಎಸ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಎಸ್ಎಸ್ಎಲ್‌ಸಿ ನಂತರ ಪಿಸಿಎಂಬಿಗೆ ಸೇರಬೇಕೊ ಅಥವಾ ಪಿಸಿಎಂಸಿ ತೆಗೆದುಕೊಳ್ಳಬೇಕೋ ಎನ್ನುವ ಗೊಂದಲ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕಾಡುವುದು ಸಹಜ. ಇಂತಹ ತಾಕಲಾಟವನ್ನು ನಿವಾರಿಸುವ ಸಣ್ಣ ಪ್ರಯತ್ನ ಮಾಡಲಾಗುವುದು ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಚೀಫ್ ಅಕಾಡೆಮಿಕ್ ಸಂಯೋಜಕ ರಾಜು ಆರ್.ಎಸ್ ಹೇಳಿದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ಪಾರ್ಕ್ ಅಕಾಡೆಮಿ ಇಗ್ನಿಷನ್ ಟು ದ ಪ್ರೊ ಮೈಂಡ್ಸ್ ಪ್ರೋಗ್ರಾಂ ಉದ್ಘಾಟಿಸಿ ಮಾತನಾಡಿದ ಅವರು ಹತ್ತನೆ ತರಗತಿ ನಂತರದ ಗೊಂದಲಕ್ಕಿಂತ ಹೊಸ ವಿಚಾರಗಳ ಅಪ್‍ಡೇಟ್ ಆಗುವುದು ತುಂಬಾ ಮುಖ್ಯ. ಕಟ್ ಆಫ್ ಮಾರ್ಕ್ಸ್ ಪ್ರತಿ ವರ್ಷವೂ ಬದಲಾವಣೆಯಾಗುತ್ತಿರುತ್ತದೆ. ಪೋಷಕರಿಗೆ ಒತ್ತಡ ಹಾಕುವುದು ಅನಿವಾರ್ಯ. ಎಷ್ಟು ಸಾಧ್ಯವೋ ಅಷ್ಟು ಗೊಂದಲಗಳನ್ನು ನಿವಾರಣೆಗೊಳಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಪ್ರೋಗ್ರಾಂ ಉದ್ದೇಶ ಎಂದು ತಿಳಿಸಿದರು.

ಅರ್ಜಿ ಯಾವಾಗ ಕರೆಯುತ್ತಾರೆ. ಏನೇನು ದಾಖಲೆ ಸಲ್ಲಿಸಬೇಕು. ಪರೀಕ್ಷೆ ಯಾವಾಗ, ಫಲಿತಾಂಶ ಪ್ರಕಟಿಸುವುದು ಯಾವಾಗ ಎನ್ನುವ ಮಾಹಿತಿಯನ್ನು ವಿದ್ಯಾರ್ಥಿಗಳು ತಿಳಿದುಕೊಂಡಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡಾಗ ಅನೇಕ ಪ್ರಶ್ನೆಗಳು ಎದುರಾಗುತ್ತದೆ. ಪರೀಕ್ಷೆ ಬಗ್ಗೆ ಅಡಿಪಾಯ ಹಾಕುವುದಕ್ಕಾಗಿ ವಾರದಲ್ಲಿ ನಾಲ್ಕು ಪಿರಿಯಡ್‌ನಂತೆ ನಲವತ್ತು ನಿಮಿಷಗಳ ತರಬೇತಿ ನೀಡಲಾಗುವುದು. ಸ್ಟಾಫ್ ಸೆಲೆಕ್ಷನ್ ಕಮಿಟಿ, ರೈಲ್ವೆ ಬೋರ್ಡ್, ಕೇಂದ್ರ ಲೋಕಸೇವಾ ಆಯೋಗ, ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಿ ಈಗಿನಿಂದಲೆ ತಯಾರಿ ಮಾಡಲಾಗುವುದು.

ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ ಸಿಬಿಎಸ್‌ಸಿ ಅಕಾಡೆಮಿಕ್ ವೀಕ್ಷಕಕರಾದ ಡಾ.ಕೆ.ಪಿ.ನಾಗಭೂಷಣ್‍ ಶೆಟ್ಟಿ, ಡಾ.ಜಿ.ಬಿ.ರಾಜಪ್ಪ, ಎಸ್ಎಲ್‌ವಿ ಪಿಯು ಕಾಲೇಜ್ ಆಫ್ ಎಎಸ್ ಅಂಡ್ ಸಿ ಪ್ರಾಂಶುಪಾಲ ಕೇಶವಮೂರ್ತಿ, ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‍ನ ಪ್ರಾಚಾರ್ಯ ತಿಪ್ಪೇಸ್ವಾಮಿ ಆರ್.ಸಿ, ಸಿಬಿಎಸ್ಇ ಪ್ರಾಂಶುಪಾಲ ಆಂಟೋನಿ ಮ್ಯಾಥ್ಯು ವೇದಿಕೆಯಲ್ಲಿದ್ದರು .