ಸಾರಾಂಶ
ಹಾವೇರಿ: ಶ್ರೀ ಅಕಾಡೆಮಿಯ ಪರಿವರ್ತನಾ ಪಿಯು ಕಾಲೇಜಿನ ವತಿಯಿಂದ ನೀಡ್ ಟು ವಿನ್ ವಿಚಾರ ಸಂಕಿರಣ (ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನ) ಕಾರ್ಯಕ್ರಮವನ್ನು ಇತ್ತೀಚೆಗೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳು ತಮ್ಮ ವೃತ್ತಿಜೀವನವನ್ನು ಆಯ್ಕೆ ಮಾಡಲು ಬಹಳ ಗೊಂದಲದ ಸ್ಥಿತಿಯಲ್ಲಿದ್ದಾರೆ. ೯, ೧೦, ೧೧ ಮತ್ತು ೧೨ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು ಹಾಗಾಗಿ ಈ ಕಾರ್ಯಕ್ರಮವನ್ನು ವಿಶೇಷವಾಗಿ ಪೊಲೀಸರು ಮತ್ತು ಅವರ ಮಕ್ಕಳಿಗಾಗಿ ಆಯೋಜಿಸಿದ್ದೇವೆ. ಆದ್ದರಿಂದ ಎಲ್ಲಾ ಪೊಲೀಸರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು.ಶ್ರೀ ಅಕಾಡೆಮಿಯ ಅಧ್ಯಕ್ಷ ಮತ್ತು ಸಿಇಒ ಆಚಂಟಾ ಶ್ರೀರಾಮ ಮಾತನಾಡಿ, ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಮತ್ತು ಕೌಶಲ ಪ್ರಾವೀಣ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಗುಣಮಟ್ಟ ಶೈಕ್ಷಣಿಕ ಅನುಭವಗಳನ್ನು ಒದಗಿಸಲು ಶ್ರೀ ಅಕಾಡೆಮಿಯು ಹಗಲಿರುಳು ಶ್ರಮಿಸುತ್ತಿದೆ. ವಿದ್ಯಾರ್ಥಿಗಳ ಬೆನ್ನೆಲುಬಾಗಿ ನಿಂತು ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂಬ ಕನಸು ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಅರ್ಚನಾ ನವಲೆ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರಿಂದ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೇ ಅಧ್ಯಯನ ಮಾಡಬಹುದು. ನೀಟ್ ದೀರ್ಘಾವಧಿಯ ಕೋಚಿಂಗ್ ಜೂ.೧ರಿಂದ ಪ್ರಾರಂಭವಾಗಲಿದೆ. ನೀಟ್ ಲೆವೆಲ್ ಪರೀಕ್ಷೆಯಲ್ಲಿ ಕನಿಷ್ಠ ೫೦೦ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ಇದಲ್ಲದೇ ವಿದ್ಯಾರ್ಥಿಯು ಬಾರ್ಡರ್ ಅಂಕಗಳನ್ನು ಗಳಿಸದಿದ್ದರೆ ಒಟ್ಟು ಶುಲ್ಕವನ್ನು ನೀಡಲಾಗುವುದು ಎಂದು ಹೇಳಿದರು. ಕಾರ್ಯಾಗಾರದಲ್ಲಿ ಪರಿವರ್ತನ ಪಿಯು ಕಾಲೇಜಿನ ನಿರ್ದೇಶಕ ಸಂತೋಷ್ ನವಲೆ, ಕೆಎಸ್‌ಆರ್‌ಡಿಪಿಆರ್ ಗದಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚಂದ್ರಪ್ಪ, ಬಾರಂಗಿ, ಬಸವರಾಜ ಟೀಕೆಹಳ್ಳಿ, ಡಿ.ಬಿ. ಸೋಮಶೇಖರ್ ಗೌಡ, ನಾಫಿಜ್ ಶೇಖ್, ಪರಮೇಶ್ವರ ಬಾಳಿಕಾಯಿ, ಗಾಯಿತ್ರಿ ಹೆಗಡೆ ಇದ್ದರು.