ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಶೈಕ್ಷಣಿಕ, ತಾಂತ್ರಿ​ಕ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಆದರೆ ಜನರು ಸುಖಿಗಳಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುತ್ತಿದ್ದರು. ಆದರೆ ಇಂದು ​ಒಂದನೇ ತರಗತಿಯಿಂದಲೇ ಇಂಗ್ಲಿಷ್​ ಮಾಧ್ಯಮದಲ್ಲಿ ಕಲಿಸಲಾಗುತ್ತದೆ. ಬುದ್ಧಿವಂತ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸುತ್ತಾರೆ, ಆದರೆ ಸಾಧಾರಣ ಮಕ್ಕಳಿಗೆ ಇಂಗ್ಲಿಷ್​ ಶಿಕ್ಷಣ ಕಬ್ಬಿಣದ ಕಡಲೆಯಂತಾಗಿ ಗಲಿಬಿಲಿಗೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಹಿನ್ನಡೆಯಾಗಿದೆ ಎಂದು ಮಕ್ಕಳ ​ಸಾಹಿತಿ ಇಂದಿರಾ ಹಾಲಂಬಿ ಹೇಳಿದರು.

ಕನ್ನಡಪ್ರಭ ವಾರ್ತೆ : ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಶೈಕ್ಷಣಿಕ, ತಾಂತ್ರಿ​ಕ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಆದರೆ ಜನರು ಸುಖಿಗಳಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುತ್ತಿದ್ದರು. ಆದರೆ ಇಂದು ​ಒಂದನೇ ತರಗತಿಯಿಂದಲೇ ಇಂಗ್ಲಿಷ್​ ಮಾಧ್ಯಮದಲ್ಲಿ ಕಲಿಸಲಾಗುತ್ತದೆ. ಬುದ್ಧಿವಂತ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸುತ್ತಾರೆ, ಆದರೆ ಸಾಧಾರಣ ಮಕ್ಕಳಿಗೆ ಇಂಗ್ಲಿಷ್​ ಶಿಕ್ಷಣ ಕಬ್ಬಿಣದ ಕಡಲೆಯಂತಾಗಿ ಗಲಿಬಿಲಿಗೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಹಿನ್ನಡೆಯಾಗಿದೆ ಎಂದು ಮಕ್ಕಳ ​ಸಾಹಿತಿ ಇಂದಿರಾ ಹಾಲಂಬಿ ಹೇಳಿದರು.ಅವರು ಭಾನುವಾರ ಸಂಜೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಮಲಬಾರ್​ ಗೋಲ್ಡ್​ ಅಂಡ್​ ಡೈಮಂಡ್ಸ್​ ಆಶ್ರಯದಲ್ಲಿ​ ನೀಡಿದ ‘ಮಲಬಾರ್​ ವಿಶ್ವಸಾಹಿತ್ಯ ಪುರಸ್ಕಾರ’ ಸ್ವೀಕರಿಸಿ ಮಾತನಾಡಿದರು.ಇಂದಿರಾ ಹಾಲಂಬಿ, ಸಾಹಿತಿ ಡಾ. ಬೈರಮಂಗಲ ರಾಮೇಗೌಡ, ರಾಷ್ಟ್ರಪತಿ ಅಬ್ದುಲ್​ ಕಲಾಂ ಶಿಷ್ಟಾಚಾರ ಅಧಿಕಾರಿಯಾಗಿದ್ದ ಜಯಪ್ರಕಾಶ್​ ಪುತ್ತೂರು ಅವರಿಗೆ ವಿಶ್ವಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.

ನಾಡೋಜ ಪ್ರೊ. ಕೆ. ಪಿ. ರಾವ್​ ಸಭಾಧ್ಯಕ್ಷತೆ ವಹಿಸಿದ್ದರು, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ. ನಿರಂಜನ ಚೋಳಯ್ಯ, ಉದ್ಯಮಿ ವಿಶ್ವನಾಥ ಶೆಣೈ, ವಿಶ್ವಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಶಂಕರ್​, ಮಲಬಾರ್​ ಗೋಲ್ಡ್​ ಶಾಖಾ ಮುಖ್ಯಸ್ಥ ವಿಜಯಕುಮಾರ್​, ಸಂಧ್ಯಾ ಶೆಣೈ ಉಪಸ್ಥಿತರಿದ್ದರು.ಪ್ರತಿಷ್ಠಾನ ಕಾರ್ಯದರ್ಶಿ ರವಿರಾಜ್​ ಎಚ್​.ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಜನಾರ್ದನ್​ ಸ್ವಾಗತಿಸಿದರು. ರಾಜೇಶ್​ ಪಣಿಯಾಡಿ ನಿರೂಪಿಸಿದರು.