ಸಮಾಜದ ಎಲ್ಲಾ ಸ್ಥರದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಿದ ಅಪರೂಪದ ರಾಜಕಾರಣಿ ನಮ್ಮ ಸಿದ್ದರಾಮಯ್ಯ. ಶಿಸ್ತುಬದ್ದ ಆರ್ಥಿಕ ನೀತಿ ಮತ್ತು ಎಲ್ಲರನ್ನೂ ಒಳಗೊಂಡಿರುವುದು ಸಿಎಂ ಅವರ ಆಡಳಿತದ ಯಶಸ್ಸಿನ ಗುಟ್ಟು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಡಿ.ದೇವರಾಜ ಅರಸು ಅವರ ಆಡಳಿತ ಅವಧಿ ದಾಖಲೆ ಮುರಿದು ಸುದೀರ್ಘ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭಕೋರಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಯಿತು.

ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಟ್ಟಣದ ಶ್ರವಣಬೆಳಗೊಳ ರಸ್ತೆಯ ಸುವರ್ಣ ನಿಂಗೇಗೌಡ ಸಮುದಾಯ ಭವನದಲ್ಲಿ ಬಹಿರಂಗ ಸಭೆ ನಡೆಸಿ ಮುಖ್ಯಮಂತ್ರಿಗಳ ಸಾಧನೆಗಳನ್ನು ಬಣ್ಣಿಸಿದರು.

ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮಾತನಾಡಿ, ಸಮಾಜದ ಎಲ್ಲಾ ಸ್ಥರದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಿದ ಅಪರೂಪದ ರಾಜಕಾರಣಿ ನಮ್ಮ ಸಿದ್ದರಾಮಯ್ಯ. ಶಿಸ್ತುಬದ್ದ ಆರ್ಥಿಕ ನೀತಿ ಮತ್ತು ಎಲ್ಲರನ್ನೂ ಒಳಗೊಂಡಿರುವುದು ಸಿಎಂ ಅವರ ಆಡಳಿತದ ಯಶಸ್ಸಿನ ಗುಟ್ಟು ಎಂದರು.

ಬಹಿರಂಗ ಸಭೆ ನಂತರ ಪಟ್ಟಣದ ಹೊರವಲಯದ ಮಾತೃಭೂಮಿ ವೃದ್ದಾಶ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭಕೋರಿ ಅನ್ನದಾಸೋಹ ನಡೆಸಲಾಯಿತು. ಕರ್ನಾಟಕ ನಗರ ಮೂಲ ಸೌಕರ್ಯ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಜಿಪಂ ಮಾಜಿ ಸದಸ್ಯ ಎಲ್.ಕೆ.ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ನಂಜುಂಡೇಗೌಡ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಶಶಿಧರ್, ಮುಖಂಡರಾದ ಜಿ.ಕೆ.ರುಕ್ಮಾಂಗದ, ಮಾದಾಪುರ ಡಾ.ರಾಮಕೃಷ್ಣೇಗೌಡ, ಟಿ.ಎನ್.ದಿವಾಕರ್, ರಾಜಯ್ಯ, ಎಲ್.ಪಿ.ನಂಜಪ್ಪ, ಲೋಲಾಕ್ಷಿ, ಶಿವಮ್ಮ, ವಿನುತ, ಲತಾಮಣಿ, ಮಡುವಿನಕೋಡಿ ಗೌಸ್ ಖಾನ್ ಸೇರಿದಂತೆ ಹಲವರಿದ್ದರು.