ರ್‍ಯಾಂಕ್‌ ವಿಜೇತರಿಗೆ ಕೆಎಲ್‌ಇ ವಿದ್ಯಾರ್ಥಿಗಳಿಗೆ ಕೋರೆ ಅಭಿನಂದನೆ

| Published : Jul 20 2024, 12:46 AM IST

ರ್‍ಯಾಂಕ್‌ ವಿಜೇತರಿಗೆ ಕೆಎಲ್‌ಇ ವಿದ್ಯಾರ್ಥಿಗಳಿಗೆ ಕೋರೆ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವದಲ್ಲಿ ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್. ಶೇಷಗಿರಿ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆಗೈದು ಸಂಸ್ಥೆ ಹಾಗೂ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವದಲ್ಲಿ ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್. ಶೇಷಗಿರಿ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆಗೈದು ಸಂಸ್ಥೆ ಹಾಗೂ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

ಬಿ.ಇ. ಸಿವಿಲ್ ಎಂಜಿನಿಯರಿಂಗ್‌ ನಲ್ಲಿ ಸಾಹಿಲ್ ಎಂ.ಸೋಮನಾಚೆ ಪ್ರಥಮ ರ‍್ಯಾಂಕ್‌ದೊಂದಿಗೆ 12 ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದಿದ್ದರೆ, ಬಯೋಮೆಡಿಕಲ್ ಎಂಜಿನಿಯರಿಂಗ್‌ನಲ್ಲಿ ಕೀರ್ತಿ ಎಸ್. ಸೊಲಂಕಿ ಪ್ರಥಮ ರ‍್ಯಾಂಕ್‌ದೊಂದಿಗೆ ಚಿನ್ನದ ಪದಕ, ಸ್ನೇಹಲ್ ಎಸ್. ಜಬಡೆ ದ್ವಿತೀಯ ರ‍್ಯಾಂಕ್ ಹಾಗೂ ಅಂಕಿತಾ ಎ. ಗರಡೆ 7ನೇ ರ‍್ಯಾಂಕ್ ಪಡೆದಿದ್ದಾರೆ. ಕೆಮಿಕಲ್ ಎಂಜಿನಿಯರಿಂಗ್‌ ನಲ್ಲಿ ಜೀವನ್‌ ತೃತೀಯ ರ‍್ಯಾಂಕ್, ನಿಖಿತಾ ಎಂ. ಗಾವಡೆ 5ನೇ ರ‍್ಯಾಂಕ್, ಜಾಹ್ನವಿ ವಿ. ಜೀರಂಕಳಿ 6ನೇ ರ‍್ಯಾಂಕ್ ಹಾಗೂ ಸಾಹಿಲ್ ಮುಲ್ಲಾ 7ನೇ ರ‍್ಯಾಂಕ್ ಪಡೆದಿದ್ದಾರೆ. ಎಲೆಕ್ಟ್ರಾನಿಕ್ಸ್ ಆ‍್ಯಂಡ್ ಕಮ್ಯೂನಿಕೇಷನ್ಸ್ ಎಂಜಿನಿಯರಿಂಗ್‌ದಲ್ಲಿ ಆದಿತ್ಯಾ ವಿ. ಕುಲಕರ್ಣಿ 10ನೇ ರ‍್ಯಾಂಕ್ ಪಡೆದಿದ್ದಾನೆ.

ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಕೆಎಲ್‌ಇ ಪ್ರಧಾನ ಕಚೇರಿಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಎಲ್ಲರೂ ಸ್ನಾತಕೋತ್ತರ ಶಿಕ್ಷಣ ಪಡೆದು ಬಲಿಷ್ಠ ರಾಷ್ಟ್ರನಿರ್ಮಾಣದಲ್ಲಿ ಕೈಜೋಡಿಸಬೇಕು. ಈ ಸಾಧನೆಯು ನಿರಂತರವಾಗಿ ಮುಂದುವರೆಯಬೇಕೆಂದು ಕರೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ. ದೇಸಾಯಿ, ಕಾಲೇಜಿನ ಪ್ರಾಚಾರ್ಯ ಡಾ.ಸುಭಾಷ ಎಫ್. ಪಾಟೀಲ ಉಪಸ್ಥಿತರಿದ್ದರು.