ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಸದಸ್ಯ ಯಾಕುಬ್ ಅಭಿನಂದನೆ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶನಿವಾರ ಸಂತೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಸದಸ್ಯ ಯಾಕುಬ್ ಅಭಿನಂದನೆ ಸಲ್ಲಿಸಿದ್ದಾರೆ.ಈ ವೇಳೆ ಮಾತನಾಡಿದ ಯಾಕುಬ್, ಕರ್ನಾಟಕ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆಯಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಹೊಸ ವಿಶ್ವಾಸ ಮತ್ತು ಹೊಸ ಚೈತನ್ಯ ಮೂಡಿಸಿದೆ. ವಿದ್ಯಾರ್ಥಿ ಜೀವನದಿಂದಲೇ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಜನಸಾಮಾನ್ಯರ ಹಕ್ಕುಗಳಿಗಾಗಿ ಹೋರಾಟದ ಹಾದಿಯನ್ನು ಆಯ್ಕೆ ಮಾಡಿಕೊಂಡಿರುವ ಬಿ.ಕೆ. ಹರಿಪ್ರಸಾದ್ ಅವರು, ತಮ್ಮ ದೀರ್ಘ ರಾಜಕೀಯ ಬದುಕಿನಲ್ಲಿ ತತ್ವ, ನಿಷ್ಠೆ ಮತ್ತು ಬದ್ಧತೆಯ ಪ್ರತೀಕವಾಗಿ ಬೆಳೆದಿದ್ದಾರೆ. ಹುದ್ದೆಗಳಿಗಾಗಿ ರಾಜಕೀಯ ಮಾಡದೆ, ಸಿದ್ಧಾಂತಗಳಿಗಾಗಿ ರಾಜಕೀಯ ಮಾಡಿದ ಅಪರೂಪದ ನಾಯಕರಲ್ಲಿ ಒಬ್ಬರು ಎಂದರುವೈಯಕ್ತಿಕವಾಗಿ ಬಿ.ಕೆ. ಹರಿಪ್ರಸಾದ್ ಅವರ ಬಗ್ಗೆ ವಿಶೇಷ ಅಭಿಮಾನ ಮತ್ತು ಗೌರವವಿದೆ. ಅವರ ಸರಳತೆ, ನಿಸ್ವಾರ್ಥ ಮನೋಭಾವ, ಕಾರ್ಯಕರ್ತರ ಮೇಲಿನ ಪ್ರೀತಿ ಮತ್ತು ಪಕ್ಷದ ಮೇಲಿನ ಅಚಲ ಬದ್ಧತೆ ಸದಾ ನನ್ನನ್ನು ಪ್ರೇರೇಪಿಸಿವೆ. ಹೋರಾಟಗಳಿಂದ ರೂಪುಗೊಂಡ ನಾಯಕತ್ವವು ಸಂಘಟನೆಯನ್ನು ಹೊಸ ಎತ್ತರಗಳಿಗೆ ಕೊಂಡೊಯ್ಯುತ್ತದೆ ಎಂಬ ನಂಬಿಕೆ ನನಗಿದೆ. ಹರಿಪ್ರಸಾದ್ ನಾಯಕತ್ವದಲ್ಲಿ ಕರ್ನಾಟಕ ಕಾಂಗ್ರೆಸ್ ಇನ್ನಷ್ಟು ಬಲಿಷ್ಠವಾಗಿ ಬೆಳೆದು, ಸಾಮಾಜಿಕ ನ್ಯಾಯ, ಸಮಾನತೆ, ಸೌಹಾರ್ದತೆ ಮತ್ತು ಪ್ರಗತಿಯ ಮೌಲ್ಯಗಳನ್ನು ಜನರ ನಡುವೆ ಇನ್ನಷ್ಟು ಗಟ್ಟಿಯಾಗಿ ತಲುಪಿಸಲಿ ಎಂದು ಯಾಕುಬ್ ಹೇಳಿದರು.