ಚಿಕ್ಕಮಗಳೂರುಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಪಡೆದು ನಂತರ ಸಕ್ರಿಯವಾಗಿ ರಾಜಕಾರಣ ದಲ್ಲಿ ತೊಡಗಿಸಿಕೊಂಡ ತಮ್ಮನ್ನು ಪ್ರಾಮಾಣಿಕ ಪಕ್ಷನಿಷ್ಠೆ ಮತ್ತು ಸಂಘಟನೆ ಕೆಲಸವನ್ನು ಗುರುತಿಸಿ ಅಧಿಕಾರ ನೀಡಿದೆ ಎಂದು ವಿಧಾನಪರಿಷತ್‌ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಪಡೆದು ನಂತರ ಸಕ್ರಿಯವಾಗಿ ರಾಜಕಾರಣ ದಲ್ಲಿ ತೊಡಗಿಸಿಕೊಂಡ ತಮ್ಮನ್ನು ಪ್ರಾಮಾಣಿಕ ಪಕ್ಷನಿಷ್ಠೆ ಮತ್ತು ಸಂಘಟನೆ ಕೆಲಸವನ್ನು ಗುರುತಿಸಿ ಅಧಿಕಾರ ನೀಡಿದೆ ಎಂದು ವಿಧಾನಪರಿಷತ್‌ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು.

ವಿಧಾನಪರಿಷತ್ತಿಗೆ ಇತ್ತೀಚಿಗೆ ಆಯ್ಕೆಗೊಂಡ ಗಾಯತ್ರಿ ಶಾಂತೇಗೌಡ ಅವರನ್ನು ಜಿಲ್ಲಾ ಕಾಂಗ್ರಸ್‌ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ನಿಂದ ಗುರುವಾರ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ತು ಸದಸ್ಯೆ ಗಾಯತ್ರಿ ಶಾಂತೇಗೌಡರು, ಸಂಘಟನೆ ಮೂಲಕ ತಳಮಟ್ಟದಿಂದಲೇ ಪಕ್ಷವನ್ನು ಬಲಪಡಿಸಿ ಸಾರ್ವಜನಿಕ ಪರವಾಗಿ ಉತ್ತಮ ಕೆಲಸಗಳನ್ನು ಅಂದಿನಿಂದ ಇಂದಿನ ವರೆಗೂ ಮಾಡಿಕೊಂಡು ಬಂದಿದ್ದೇನೆ ಎಂದರು.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಿಕಟಪೂರ್ವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜಕಾರಣದಲ್ಲಿ ತಮ್ಮ ನಾಯಕರೊಂದಿಗೆ ನಡೆದುಕೊಳ್ಳುವ ಉತ್ತಮ ನಡವಳಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ನಾಡಿನ ಭವಿಷ್ಯವನ್ನು ಉಜ್ವಲಗೊಳಿಸುವ ದೂರದೃಷ್ಟಿ ಹೊಂದಿರುವ ನಿಜವಾದ ಧೀಮಂತ ನಾಯಕರು ಎಂದು ಶ್ಲಾಘಿಸಿದರು.ಶಾಸಕ ಎಚ್.ಡಿತಮ್ಮಯ್ಯ ಮಾತನಾಡಿ ಚಿಕ್ಕಮಗಳೂರಿನ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯಿತ್ರಿ ಶಾಂತೇಗೌಡ ಅವರಿಗೆ ಅಭಿನಂದಿಸಿದರು. ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಪಿ ಮಂಜೇಗೌಡ ಮಾತನಾಡಿ, ಗಾಯಿತ್ರಿ ಶಾಂತೇಗೌಡ ಅವರು, ಕಾಂಗ್ರೆಸ್ ಪಕ್ಷದ ದೊಡ್ಡ ಶಕ್ತಿಯಾದ ಅವರನ್ನುಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ಸಲಹೆ ಸಹಕಾರವನ್ನು ಪಡೆದು ಒಗ್ಗಟ್ಟಿನಿಂದ ಶ್ರಮಿಸಿ ಕಾಂಗ್ರಸ್ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು ಎಂದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಲ್. ಮೂರ್ತಿ ಮಾತನಾಡಿ ಭೂಮಿಯ ಮೇಲಿರುವ ಪ್ರತಿ ಯೊಬ್ಬರು ಒಂದೇ ಗಾಳಿ, ಬೆಳಕು ನೀರನ್ನು ಸೇವಿಸುತ್ತಿದ್ದೇವೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದಾ÷್ವನಿಯ ರಾಮಲೀಲಾ ಮೈದಾನದಲ್ಲಿ ಭಾಗವಹಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಗಂಗಜಲ ದಿಂದ ಶುದ್ಧೀಕರಣ ಮಾಡಲಾಯಿತು. ಇದು ಜಾತಿ ತಾರತಮ್ಯ ಮತ್ತು ಅವರ ಮಾನಸಿಕ ಅಸ್ವಸ್ತತೆ ಎದ್ದುತೋರುತ್ತಿದೆ ಎಂದು ಆರೋಪಿಸಿದರು. ಮೊದಲು ಅವರ ಮನಸ್ಸನ್ನು ಶುದ್ಧಿಕರಿಸಬೇಕು ಎಂದರು.

ಚಿಕ್ಕಮಗಳೂರು ಶಾಸಕ ಎಚ್‌.ಡಿ. ತಮ್ಮಯ್ಯ ಕಾಂಗ್ರೆಸ್‌ ಹಿರಿಯ ಮುಖಂಡ ಡಾ.ವಿಜಯ್‌ ಕುಮಾರ್‌, ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಹಾಗೂ ಸಿಡಿಎ ಅಧ್ಯಕ್ಷ ಮಂಜೇಗೌಡ ಸೇರಿದಂತೆ ವಿವಿಧ ಮುಖಂಡರು ಕಾರ್ಯಕರ್ತರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ವಿಜಯ್‌ಕುಮಾರ್, ನಗರಾಧ್ಯಕ್ಷ ತನೋಜ್ ನಾಯ್ಡು, ಮಾಜಿ ಸಿಡಿಎ ಅಧ್ಯಕ್ಷ ನಯಾಜ್‌ ಅಹ್ಮದ್, ಗ್ರಾರಂಟಿ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ, ತಾ.ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲೇಶ್ ಸ್ವಾಮಿ, ಮುಖಂಡರಾದ ಮೊಹಮ್ಮದ್, ಅತಿಕ್, ರಮೇಶ್, ಕಾಂಗ್ರೆಸ್‌ ಜಿಲ್ಲಾ ವಕ್ತಾರ ರೂಬೆನ್ ಮೋಸಸ್, ಜಿಲ್ಲಾ ಕಿಸಾನ್‌ ಸೆಲ್‌ ಅಧ್ಯಕ್ಷ ಸಿ.ಎನ್.ಅಕ್ಮಲ್, ಉಪಾಧ್ಯಕ್ಷ ಕೆಂಗೇಗೌಡ, ಒಬಿಸಿ ಅಧ್ಯಕ್ಷ ಜಯರಾಜ್‌ ಅರಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್, ಹಿರೇಗೌಜ ಶಿವಕುಮಾರ್, ನಗರಸಭೆ ಸದಸ್ಯರಾದ ಶಾದಾಬ್, ಪ್ರವೀಣ್ ಬೆಟ್ಟಗೆರೆ, ಹಿರೇಮಗಳೂರು ರಾಮಚಂದ್ರ ಉಪಸ್ಥಿತರಿದ್ದರು.----ಬಾಕ್ಸ್‌---

ಡಿಸೆಂಬರ್‌ ವೇಳೆ ಜಿಪಂ,ತಾಪಂ, ಗ್ರಾಪಂ ಚುನಾವಣೆ: ಎಚ್‌.ಡಿ.ತಮ್ಮಯ್ಯ

ಡಿಸೆಂಬರ್ ಒಳಗಾಗಿ ಗ್ರಾಪಂ, ತಾಪಂ, ಜಿಪಂ ಮೂರು ಚುನಾವಣೆ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ಸಮಾರಂಭದಲ್ಲಿ ಮಾತನಾಡಿ ಈಗಾಗಲೇ ಜಿಪಂ, ತಾಪಂ ಹಾಗೂ ಗ್ರಾಪಂ ಅಧಿಕಾವಧಿ ಪೂರ್ಣ ಗೊಂಡಿದೆ. ಜತೆಗೆ ರಾಜ್ಯ ಚುನಾವಣಾ ಆಯೋಗದಿಂದ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳ ಲಾಗುತ್ತಿದ್ದು, ಡಿಸೆಂಬರ್‌ ವೇಳೆಗೆ ಚುನಾವಣೆ ನಡೆಸಲಿದೆ. ಅದಕ್ಕೆ ಪಕ್ಷದ ಸಂಘಟನೆ ಮಾಡಬೇಕು ಎಂದರು.

ಇನ್ನೂ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) 270 ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಮತದಾರರ ಮತಗಳು ಅಮೂಲ್ಯ. ಎಸ್‌ಐಆರ್ ಮತದಾರರು ಮತದಾರರ ಪಟ್ಟಿಯಿಂದ ಕೈ ಬಿಡದಂತೆ ನೋಡಿಕೊಳ್ಳುವ ಜವಾಬ್ದಾರಿ ಬೂತ್‌ ಅಧ್ಯಕ್ಷರು ಸೇರಿದಂತೆ ಪ್ರಮುಖ ಮುಖ್ಯಸ್ಥರ ಜವಾಬ್ದಾರಿ ಎಂದರು.

ಕರಡು ಮತದಾರರ ಪಟ್ಟಿಯಿಂದಕೈಬಿಟ್ಟ ಮತದಾರರನ್ನು ಪರಿಷ್ಕರಣೆ ನಡೆಸಿ ನೋಟಿಸ್ ನೀಡಲಾಗುತ್ತದೆ, ಅಂತವರು ಸೆ.5ರಂದು ನಡೆಯುವ ವಿಚಾರಣೆಯಲ್ಲಿ ಭಾಗವಹಿಸಿ ಸರಿಯಾದ ದಾಖಲೆ ನೀಡುವ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವಂತೆ ತಿಳಿಸಿದರು.ಮುಖ್ಯ ಮಂತ್ರಿಡಿ.ಕೆ ಶಿವಕುಮಾರ್, ನಿಕಟಪೂರ್ವ ಮುಖ್ಯ ಮಂತ್ರಿ ಸಿದ್ಧರಾಮಯ್ಯ ರವರುನೇತೃತ್ವದರಾಜ್ಯ ಸರ್ಕಾರ ಘೋಷಿಸಿರುವ ಯುವ ಸಬಲೀಕರಣದ ಪ್ರಮುಖಯೋಜನೆಯಾದ ಭಾರತ್‌ ಜೋಡೋ ಕಾರ್ಯಕ್ರಮದ ಮೂಲಕ ಪ್ರತಿ ಗ್ರಾಮಗಳಲ್ಲಿಯೂ 100 ಜನ ಸದಸ್ಯರನ್ನೊಳಗೊಂಡ ಸಂಘ ಕಟ್ಟುವ ಮೂಲಕ ಹಲವಾರುಯುವಕರಿಗಾಗಿ ನೂತನ ಕಾರ್ಯಕ್ರಮ ನೀಡಲಿದೆ ಎಂದರು.

(ತಮ್ಮಯ್ಯ ಫೋಟೋ ಬಳಸಿ)