ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಮನ್ಮುಲ್ ನಿರ್ದೇಶಕರಾಗಿ ಆಯ್ಕೆಯಾದ ಡಿ.ಕೃಷ್ಣೇಗೌಡರನ್ನು ಕಿರುಗಾವಲು ಹೋಬಳಿ ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದು ಫಲಿತಾಂಶ ಘೋಷಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ನಂತರ ತಡಯಾಜ್ಞೆ ತೆರವುಗೊಳಿಸಿ ಫಲಿತಾಂಶ ಪ್ರಕಟಿಸಿತು. ನಿರ್ದೇಶಕರಾಗಿ ಆಯ್ಕೆಯಾದ ಡಿ.ಕೃಷ್ಣೇಗೌಡ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನ್ಯಾಯಾಲಯದ ಮೂಲಕ ದೊರೆತ ಗೆಲುವು ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಗೆಲುವಾಗಿದೆ. ಎಲ್ಲರ ವಿಶ್ವಾಸದೊಂದಿಗೆ ರೈತರ ಹಿತಕಾಯುವ ಕೆಲಸ ಮಾಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಕೆ.ಜೆ.ದೇವರಾಜು ಮಾತನಾಡಿ, ನೂತನ ನಿರ್ದೇಶಕ ಡಿ.ಕೃಷ್ಣೇಗೌಡ ತಾಲೂಕಿನ ಡೈರಿಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ರೈತರಿಗೆ ಉತ್ತಮ ಸೇವೆ ನೀಡಲಿ ಎಂದರು.ಈ ವೇಳೆ ಕಿರುಗಾವಲು ಗ್ರಾಪಂ ಉಪಾಧ್ಯಕ್ಷ ಎಂ.ಮಾದೇಗೌಡ, ಮುಖಂಡರಾದ ಕೃಷ್ಣಮೂರ್ತಿ, ಮುತ್ತುರಾಜ್, ಜಲೀಲ್, ರಿಯಾಜ್, ಮಹೇಶ್, ಮಸೂದ್, ನಾರಾಯಣ ಇದ್ದರು.
ಲೋಕೋಪಯೋಗಿ ಸಚಿವರಿಗೆ ಅಭಿನಂದನೆಮಂಡ್ಯ: ಕಾರ್ಯ ನಿಮಿತ್ತ ನಗರಕ್ಕೆ ಭೇಟಿ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸಂವಿಧಾನ ರಕ್ಷಣಾ ಪಡೆ ವತಿಯಿಂದ ಅಭಿನಂದಿಸಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ರಕ್ಷಣಾ ಪಡೆ ಮುಖಂಡರು ಸಚಿವರನ್ನು ಭೇಟಿ ಮಾಡಿ, ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಎದುರಿಸುತ್ತಿರುವ ಸಮಸ್ಯೆಗಳ ಸಚಿವ ಗಮನಕ್ಕೆ ತಂದಿರು. ನಂತರ ಸಚಿವರನ್ನು ಸನ್ಮಾನಿಸಲಾಯಿತು. ಈ ವೇಳೆ ಶಾಸಕ ಪಿ.ರವಿಕುಮಾರ್, ರಕ್ಷಣಾ ಪಡೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆನಂದ, ಯುವ ಮುಖಂಡ ಪ್ರವೀಣ್ ಕುಮಾರ್, ಜಿ.ಆರ್.ಆದಿತ್ಯ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿರಘುನಂದನ್, ಮುಖಂಡ ಯೋಗೇಶ್ ಇದ್ದರು.