ಸಾರಾಂಶ
ಮೂಲ್ಕಿ ಸಮೀಪದ ಅಂಗರಗುಡ್ಡೆ ಅಲ್ ಮದ್ರಸತುಲ್ ಬದ್ರಿಯಾ ಜುಮ್ಮಾ ಮಸೀದಿ ಹಾಗೂ ಎಸ್‌ಕೆ ಎಸ್‌ಬಿವಿ ಅಂಗರಗುಡ್ಡೆ ಮದರಸ ಮಕ್ಕಳ ವತಿಯಿಂದ ಮದರಸ ಹಾಲ್‌ನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸಾಧಕ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯ ಅಭಿನಂದನೀಯವಾಗಿದ್ದು, ಗೌರವ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಗೌರವಿಸಿದವರನ್ನು ಸದಾ ನೆನಪಿನಲ್ಲಿಡಬೇಕೆಂದು ಅಂಗರಗುಡ್ಡೆ ಬದ್ರಿಯಾ ಜುಮ್ಮಾ ಮಸೀದಿ ಖತೀಬರು ಹಾಗೂ ಮುದರ್ರಿಸ್ ಬಹು। ಜಾಬೀರ್ ಫೈಝೀ ಹೇಳಿದರು.ಮೂಲ್ಕಿ ಸಮೀಪದ ಅಂಗರಗುಡ್ಡೆ ಅಲ್ ಮದ್ರಸತುಲ್ ಬದ್ರಿಯಾ ಜುಮ್ಮಾ ಮಸೀದಿ ಹಾಗೂ ಎಸ್‌ಕೆ ಎಸ್‌ಬಿವಿ ಅಂಗರಗುಡ್ಡೆ ಮದರಸ ಮಕ್ಕಳ ವತಿಯಿಂದ ಮದರಸ ಹಾಲ್‌ನಲ್ಲಿ ನಡೆದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಂಗರಗುಡ್ಡೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ನಿಸಾರ್ ಅಹ್ಮದ್ ವಹಿಸಿದ್ದರು. ಅಂಗರಗುಡ್ಡೆ ಬದ್ರಿಯಾ ಜುಮ್ಮಾ ಮಸೀದಿ ಉಪಾಧ್ಯಕ್ಷ ಮಯ್ಯದ್ದಿ ಪುನರೂರು, ಕೋಶಾಧಿಕಾರಿ ಯಾಸೀರ್, ಜೊತೆ ಕಾರ್ಯದರ್ಶಿ ಇಕ್ಸಾಲ್ ಎನ್.ಬಿ.ಎಂ., ಸದಸ್ಯರಾದ ಅಬ್ದುಲ್ ಖಾದರ್, ಮುಬಾರಕ್ ಪುನರೂರು, ಹಸೈನಾರ್ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ ಜಮಾತಿನ ವಿದ್ಯಾರ್ಥಿ- ವಿದ್ಯಾರ್ಥಿನಿಯವರನ್ನು ಗೌರವಿಸಲಾಯಿತು.