ಅರೆಸೇನಾ ಪಡೆಗೆ ನೇಮಕ: ವಿಸ್ಮಯಗೆ ಅಭಿನಂದನೆ

| Published : Sep 02 2025, 01:01 AM IST

ಸಾರಾಂಶ

ವಿಸ್ಮಯ ಅವರು ಭಾರತೀಯ ಅರೆಸೇನಾ ಪಡೆಗೆ ನೇಮಕಗೊಂಡಿದ್ದು ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

7ನೇ ಹೊಸಕೋಟೆಯ ತೊಂಡೂರ್ ನಿವಾಸಿ ದಾಸು ಹಾಗೂ ಬಿಂದು ದಂಪತಿ ಪುತ್ರಿ ವಿಸ್ಮಯ ಅವರು ಭಾರತೀಯ ಅರೆಸೇನಾಪಡೆಗೆ ನೇಮಕಗೊಂಡಿದ್ದು ಅವರನ್ನು ಪೊಲೀಸ್ ಮುಖ್ಯ ಪೇದೆ ಹಾಗೂ ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿ ಗೌರವಿಸಿದರು. ಗ್ರಾಮಸ್ಥರಾದ ಅಬ್ದುಲ್ ರಜಾಕ್, ರಫೀಕ್, ಉಷಾ ಶ್ರೀಧರ್, ಉಸ್ಮನ್ ಹಾಗೂ ಸುಂಟಿಕೊಪ್ಪ ಠಾಣೆಯ ಪೊಲೀಸ್ ಸಿಬ್ಬಂ ಆಶಾ ಅಭಿನಂದಿಸಿ ಗೌರವಿಸಿದರು.

-------------------------------------

ಗೊಂದಲದ ಹೇಳಿಕೆ ಸಲ್ಲದು: ಮಾಜಿ ಸಚಿವ ಹೆಚ್ ವಿಶ್ವನಾಥ್

ಕುಶಾಲನಗರ: ಚಾಮುಂಡಿ ಬೆಟ್ಟ ಚಾಮುಂಡೇಶ್ವರಿ ದೇವಾಲಯದ ಬಗ್ಗೆ ಗೊಂದಲದ ಹೇಳಿಕೆಗಳು ಸಲ್ಲದು ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಹಾರಾಜರು ಜನರಿಗೋಸ್ಕರ ಬಳುವಳಿಯಾಗಿ ಉಳಿಸಿ ಹೋಗಿರುವ ಆಸ್ತಿ ಅದಾಗಿದ್ದು ಇದೀಗ ಅದು ನಾಡ ಜನರ ಆಸ್ತಿ ಆಗಿದೆ. ಇದರಲ್ಲಿ ರಾಜಕಾರಣಿಗಳ ಸಾಧನೆ ಏನೂ ಇಲ್ಲ ಎಂದರಲ್ಲದೆ ಅದನ್ನು ಗೊಂದಲವಿಲ್ಲದೆ ಕಾಪಾಡುವ ಕೆಲಸ ಮಾತ್ರ ಸರ್ಕಾರದ್ದಾಗಿದೆ ಎಂದರು.ಜಾತಿ ಧರ್ಮದ ಹೆಸರಿನಲ್ಲಿ ವಿಶ್ವದಾದ್ಯಂತ ಪೈಪೋಟಿ ನಡೆಯುತ್ತಿದ್ದು ಇದು ಇತ್ತೀಚಿನ ದಿನಗಳಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆ ತಕ್ಷಣ ಅಂತ್ಯಗೊಳ್ಳಬೇಕು, ಯಾವುದೇ ಅಂಜಿಕೆ ಇಲ್ಲದೆ ಸರ್ಕಾರಕ್ಕೆ ತಕ್ಷಣ ವರದಿ ಸಲ್ಲಿಸುವಂತೆ ಆಗಬೇಕು ಎಂದು ಹೇಳಿದರು.ರಾಜ್ಯ ಸರ್ಕಾರದ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ ವಿಶ್ವನಾಥ್ ಮೂಲ ಕಾಂಗ್ರೆಸಿಗರಾದ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯ ಅವಕಾಶ ಸಿಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬರಲು ಡಿಕೆಶಿ ಅವರ ಪಾತ್ರ ಪ್ರಮುಖವಾಗಿದೆ.

ಸಿದ್ದರಾಮಯ್ಯ ಅವರು ಪಕ್ಷಕ್ಕೆ ಬಂದು ಸೇರಿಕೊಂಡ ರಾಜಕಾರಣಿ ಎನ್ನುವುದನ್ನು ಮರೆಯುವಂತಿಲ್ಲ ಎಂದರು.