(ಓಕೆ) ಪ್ರಧಾನಿಗಳಿಂದ ಅಭಿನಂದನಾ ಪತ್ರ
KannadaprabhaNewsNetwork | Published : Oct 20 2023, 01:00 AM IST
(ಓಕೆ) ಪ್ರಧಾನಿಗಳಿಂದ ಅಭಿನಂದನಾ ಪತ್ರ
ಸಾರಾಂಶ
ಕನ್ನಡಪ್ರಭ ವಾರ್ತೆ ನವಲಗುಂದಪ್ರಧಾನಿಗಳಿಂದ ಆಯೋಜಿತಗೊಂಡಿದ್ದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ತಾಲೂಕಿನ ನಾವಳ್ಳಿ ಗ್ರಾಮದ ಬಸವರಡ್ಡಿ ಫಕೀರರರಡ್ಡಿ ಚಾಕಲಬ್ಬಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ವಿನುತಾ ಎಂ. ಹಿರೇಮಠ ಪ್ರಸ್ತುತ ಪಡಿಸಿದ್ದ ಪರೀಕ್ಷೆ ಪದ್ಧತಿ ಉತ್ತಮಗೊಳಿಸುವುದು ಹಾಗೂ ನಕಲು ತಡೆ ಎಂಬ ಪ್ರಬಂಧಕ್ಕೆ ಪ್ರಧಾನಿ ಮೋದಿ ಅಭಿನಂದನಾ ಪತ್ರ ಕಳುಹಿಸಿದ್ದಾರೆ. ಶಿಕ್ಷಕಿ ವಿನುತಾ ಈ ಕುರಿತು ಸಂತಸ ವ್ಯಕ್ತಪಡಿಸಿದ್ದು, ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.
ಕನ್ನಡಪ್ರಭ ವಾರ್ತೆ ನವಲಗುಂದ ಪ್ರಧಾನಿಗಳಿಂದ ಆಯೋಜಿತಗೊಂಡಿದ್ದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ತಾಲೂಕಿನ ನಾವಳ್ಳಿ ಗ್ರಾಮದ ಬಸವರಡ್ಡಿ ಫಕೀರರರಡ್ಡಿ ಚಾಕಲಬ್ಬಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ವಿನುತಾ ಎಂ. ಹಿರೇಮಠ ಪ್ರಸ್ತುತ ಪಡಿಸಿದ್ದ ಪರೀಕ್ಷೆ ಪದ್ಧತಿ ಉತ್ತಮಗೊಳಿಸುವುದು ಹಾಗೂ ನಕಲು ತಡೆ ಎಂಬ ಪ್ರಬಂಧಕ್ಕೆ ಪ್ರಧಾನಿ ಮೋದಿ ಅಭಿನಂದನಾ ಪತ್ರ ಕಳುಹಿಸಿದ್ದಾರೆ. ಶಿಕ್ಷಕಿ ವಿನುತಾ ಈ ಕುರಿತು ಸಂತಸ ವ್ಯಕ್ತಪಡಿಸಿದ್ದು, ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಅಭಿನಂದನೆ, ಶಿಕ್ಷಕ ಸಹೋದ್ಯೋಗಿಗಳ ಆಲೋಚನೆ ಸ್ವೀಕರಿಸಿದ್ದು ಸಂತಸ ನೀಡಿದೆ. ರಾಷ್ಟ್ರ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಯ ಬಗ್ಗೆ ನಿಮ್ಮ ಅಭಿಪ್ರಾಯ ಅಮೂಲ್ಯವಾಗಿದ್ದು, ಭಾಗವಹಿಸಿದ್ದಕ್ಕೆ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಶಿಕ್ಷಕಿ ವಿನುತಾ ಹಿರೇಮಠ ಹೇಳಿದರು.