ತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವಮಠ(ಗೋಸ್ವರ್ಗ)ದಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶ್ರೀ ರಾಮಚಂದ್ರಾಪುರಮಠದ ಗೋಫಲ ಟ್ರಸ್ಟ ಸಹಭಾಗಿತ್ವದಲ್ಲಿ ಸಾವಯವ ಕೃಷಿಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವಮಠ(ಗೋಸ್ವರ್ಗ)ದಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶ್ರೀ ರಾಮಚಂದ್ರಾಪುರಮಠದ ಗೋಫಲ ಟ್ರಸ್ಟ ಸಹಭಾಗಿತ್ವದಲ್ಲಿ ಸಾವಯವ ಕೃಷಿಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಎಸ್.ಎಂ. ಉಮಾ ಹಾಗೂ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಅರುಣ ಪಾಲ್ಗೊಂಡು ಸಾವಯವ ಕೃಷಿಯ ಮಹತ್ವ ವಿವರಿಸಿ ಸಾವಯವ ಕೃಷಿಯಿಂದ ಮಣ್ಣಿನ ಫಲವತ್ತತೆ ವೃದ್ಧಿಸುತ್ತದೆ. ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಪದಾರ್ಥಗಳು ಆರೋಗ್ಯಪೂರಕವಾಗಿರುತ್ತವೆ ಎಂದರು. ಮುಖ್ಯ ಅತಿಥಿಗಳಾಗಿ ಹವ್ಯಕ ಮಹಾಮಂಡಲದ ಪ್ರಮುಖರಾದ ಆರ್.ಎಸ್. ಹೆಗಡೆ ಹರಗಿ, ಗೋಸ್ವರ್ಗ ಸಮಿತಿಯ ಅಧ್ಯಕ್ಷ ಎಂ.ಜಿ. ರಾಮಚಂದ್ರ ಮರ್ಡುಮನೆ, ವಿವಿಧ ಸಮಿತಿಗಳ ಪ್ರಮುಖರಾದ ಡಾ.ವೈ.ವಿ. ಕೃಷ್ಣಮೂರ್ತಿ, ಮಹೇಶ ಚಟ್ನಳ್ಳಿ ಇತರರು ಪಾಲ್ಗೊಂಡಿದ್ದರು. ಗೋಫಲ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕ ಬಾಲಸುಬ್ರಹ್ಮಣ್ಯ ಭಟ್ಟ ಶ್ರೀಮಠದ ಉತ್ಪನ್ನವಾದ ದಶಸಾರ, ಸ್ವರ್ಗಸಾರದ ತಯಾರಿ, ಅದರ ವಿಶೇಷತೆ ತಿಳಿಸಿದರು. ಈ ಸಂದರ್ಭ ಸ್ವರ್ಗಸಾರ ಮತ್ತು ದಶಸಾರ ಬಳಸಿ ಕೃಷಿಯಲ್ಲಿ ಹೆಚ್ಚಿನ ಸಾಧನೆಗೈದ ಪ್ರಭಾಕರ ಹೆಗಡೆ ಮಾವಿನಗುಂಡಿ, ಗಣಪತಿ ಹೆಗಡೆ ಹಣಜೀಬೈಲ, ಸುಬ್ರಾಯ ಶಂಭಯ್ಯ ಹೆಗಡೆ ಮುಸವಳ್ಳಿ, ಶ್ರೀಕಾಂತ ಹೆಗಡೆ ಕಾಳಮಂಜಿ, ಎಂ.ಎನ್. ಹೆಗಡೆ ಚಪ್ಪರಮನೆ, ಶ್ರೀಕಾಂತ ಹೆಗಡೆ ಗುಡ್ಡೆಕಣ, ಪ್ರಸನ್ನ ಹೆಗಡೆ ಕೆರೆಕೈ, ಟಿ.ಆರ್. ನಾಗರಾಜ ತೊರೆಮನೆ, ಪ್ರಶಾಂತ ನಾಯ್ಕ ಹೊಸೂರ, ಸೀತಾರಾಮ ಗಣಪತಿ ಹೆಗಡೆ ಸುಳಗಾರು, ಎಸ್.ಜಿ. ಹೆಗಡೆ ಭತ್ತಗೆರೆ, ಶ್ರೀಕಾಂತ ಭಟ್ಟ ಮುತ್ತಿಗೆ-ಭುವನಗಿರಿ, ಮಂಜುನಾಥ ಹೆಗಡೆ ಮುಂಗ್ರಾಣಿ, ಸೀತಾರಾಮ ಹೆಗಡೆ ಸುಂಕತ್ತಿ ಮುಂತಾದವರನ್ನು ಗೌರವಿಸಲಾಯಿತು.

ಗುರುಕೃಪಾದ ರಾಘವೇಂದ್ರ ಹೆಗಡೆ ಮುಸವಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಪೂರಕವಾಗಿ ರೈತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಸಂಘಟಕ ರಾಘವೇಂದ್ರ ಹೆಗಡೆ ಮುಸವಳ್ಳಿ ದಂಪತಿಗಳನ್ನು ಅತಿಥಿಗಳು ಗೌರವಿಸಿದರು.