ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆಗಳು ಸಾಬೀತಾಗುತ್ತಿವೆ. ಬರುವ ದಿನಗಳಲ್ಲಿ ಭಾರತೀಯ ಜನತಾ ಪಕ್ಷ ಬೆಂಬಲಿಸದಿದ್ದರೇ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಬ್ಯಾಡಗಿ: ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆಗಳು ಸಾಬೀತಾಗುತ್ತಿವೆ. ಬರುವ ದಿನಗಳಲ್ಲಿ ಭಾರತೀಯ ಜನತಾ ಪಕ್ಷ ಬೆಂಬಲಿಸದಿದ್ದರೇ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ತಾಲೂಕು ಮಂಡಳದ ವಿವಿಧ ಮೋರ್ಚಾಗಳಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಆದೇಶ ಪ್ರತಿಗಳನ್ನು ವಿತರಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಮುಗಿದ ಅಧ್ಯಾಯ. ಉಚಿತ ಘೋಷಣೆಗಳಿಂದ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ ಅಧಿಕಾರಕ್ಕೆ ಬರುತ್ತಿದೆ, ಇದೊಂದು ಬದ್ಧತೆಯಿಲ್ಲದ ಪಕ್ಷವಾಗಿದ್ದು, ಕುಟುಂಬ ರಾಜಕಾರಣದ ಪರಮಾವಧಿಯನ್ನು ತಲುಪಿದೆ ಎಂದರು.ಗ್ಯಾರಂಟಿ ಹೆಸರಲ್ಲಿ ಜನರಿಗೆ ಮಂಕು ಬೂದಿ: ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮಂಕು ಬೂದಿ ಎರಚುತ್ತಿರುವ ಕಾಂಗ್ರೆಸ್ ರಾಜ್ಯ ಬೊಕ್ಕಸವನ್ನು ಲೂಟಿ ಹೊಡೆಯುತ್ತಿದೆ. ಯಾರ ದುಡ್ಡಾದರೇನು ಜನರ ತೆರಿಗೆ ನುಂಗಲು ಇವರಿಗೆ ಏನೊಂದು ಸಾಕಾಗುತ್ತಿಲ್ಲ. ವಾಲ್ಮೀಕಿ ನಿಗಮದ ಹಣವನ್ನು ನುಂಗಿದ ಸರ್ಕಾರ ಹಿಂದುಳಿದ ವರ್ಗಗಳಿಗೆ ಮೀಸಲಿದ್ದಂತಹ 40 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿಗೆ ಬಳಕೆ ಮಾಡುತ್ತಿದ್ದು, ಇಂತಹ ಭ್ರಷ್ಟ ಸರ್ಕಾರವನ್ನು ರಾಜ್ಯದ ಜನರು ಹಿಂದೆಂದೂ ಕಂಡಿಲ್ಲ ಎಂದರು.
ಹಿಂದೂ ವಿರೋಧಿ ಧೋರಣೆ: ಓಲೈಕೆ ರಾಜಕಾರಣದಿಂದ ರಾಜ್ಯದ ಬಹುತೇಕ ಜನರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಕೈಬಿಡಲಿದ್ದಾರೆ. ಅಹಿಂದ ನಾಯಕ ಎಂದು ಬೊಬ್ಬೆ ಹೊಡೆಯುವ ಮುಖ್ಯಮಂತ್ರಿಗಳು ಎಸ್ಸಿ ಮತ್ತು ಎಸ್ಟಿ ಸೇರಿದಂತೆ ಅಹಿಂದ ವರ್ಗಕ್ಕೆ ಮೀಸಲಿಟ್ಟಿದ್ದ ಅನುದಾನ ಬಳಕೆ ಮಾಡಿಕೊಂಡು ಸರ್ಕಾರ ನಡೆಸುವಂತಹ ಸ್ಥಿತಿಗೆ ಬಂದಿದ್ದಾರೆ. ಹಿಂದುಳಿದ ವರ್ಗದ ಹಣ ದುರುಪಯೋಗ ಮಾಡಿಕೊಂಡ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ನಾಚಿಕೇಗೇಡಿನ ಸಂಗತಿ ಎಂದರು.ಸಂಘಟನೆಗೆ ಸಮಯ ಮೀಸಲಿಡಿ: ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಬಿಜೆಪಿ ವಿವಿಧ ಮಂಡಳಕ್ಕೆ ನೂತನವಾಗಿ ಆಯ್ಕೆಯಾದ ಎಲ್ಲಾ ಅಧ್ಯಕ್ಷರು ಉಪಾಧ್ಯಕ್ಷರು ಪಕ್ಷದ ಸಂಘಟನೆ ಮಾಡಲು ಸಮಯನ್ನು ಮೀಸಲಿಡಬೇಕು, ಬಿಜೆಪಿ ನಿಮಗೆ ಕೊಟ್ಟಿರುವ ಆದೇಶ ಪ್ರತಿ ಕೇವಲ ಕಾಗದವಲ್ಲ ಬದಲಾಗಿ ಜನರು ಗುರುತಿಸಲು ನೀಡಿದ ಟ್ರಂಪ ಕಾರ್ಡ ಇದನ್ನ ಬಳಸಿ ಪಕ್ಷದ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮವಹಿಸಬೇಕು ಬಿಜೆಪಿ ಇದೊಂದು ಕಾರ್ಯಕರ್ತರ ಪಕ್ಷ ಹೀಗಾಗಿ ಪಕ್ಷ ಸಂಘಟನೆಗೆ ನಿಮ್ಮ ಕೊಡುಗೆ ನಿಮ್ಮಿಲ್ಲಿರುವ ಕಾರ್ಯಕ್ಷಮತೆ ಗುರ್ತಿಸಲಿದೆ ಎಂದರು.
ಮುಖಂಡರಾದ ಹಾಲೇಶ ಜಾಧವ, ಮುರಿಗೆಪ್ಪ ಶೆಟ್ಟರ, ಶಂಕ್ರಣ್ಣ ಅಕ್ಕಿ, ಶಂಕರಗೌಡ ಪಾಟೀಲ, ಶಿವಣ್ಣ ಕುಮ್ಮೂರ ಮಾತನಾಡಿದರು, ತಾಲೂಕಾ ಉಪಾಧ್ಯಕ್ಷರಾಗಿ ವಿಜಯಭರತ ಬಳ್ಳಾರಿ, ಭರಮಣ್ಣ ಉರಮಿ, ಸಿದ್ದಯ್ಯ ಪಾಟೀಲ, ಶಿವನಗೌಡ ಬಸನಗೌಡ್ರ, ಪ್ರಕಾಶ ಸಿದ್ದಣ್ಣನವರ, ಖಜಾಂಚಿಯಾಗಿ ವಿಜಯ ಮಾಳಗಿ, ಕಾರ್ಯದರ್ಶಿಯಾಗಿ ಜ್ಯೋತಿ ಕುದ್ರಿಹಾಳ, ಸತೀಶ ಸಂದಿಮನಿ, ಮಂಜು ತಳಮನಿ, ಮಂಜುನಾಥ ಜಾಧವ, ಗುತ್ತೆಮ್ಮ ಮಾಳಗಿ, ಶಶಿಧರ ಯತ್ನಳ್ಳಿ ಯುವ ಮೋರ್ಚಾ ಅಧ್ಯಕ್ಷರಾಗಿ ವರುಣ ಮಲ್ಲಿಗಾರ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸರೋಜಾ ಉಳ್ಳಾಗಡ್ಡಿ, ಕಾರ್ಯರ್ಶಿಯಾಗಿ ಕಲಾವತಿ ಬಡಿಗೇರ, ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ದ್ಯಾವಪ್ಪ ಭರಡಿ, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ನಾಗರಾಜ ದೊಡ್ಡಮನಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಶಿವರಾಯಪ್ಪ ಅಪ್ಪಣ್ಣನವರ, ರೈತ ಮೋರ್ಚಾ ಅಧ್ಯಕ್ಷರಾಗಿ ಶಿವಾನಂದ ಕಡಗಿ ಸೇರಿದಂತೆ ವಿವಿಧ ಸ್ಥಾನಗಳಿಗೆ 61 ಜನರು ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಶೇಖರಗೌಡ ಗೌಡ್ರ, ಜಯಪ್ಪ ಸುಂಕಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿನಯ ಹಿರೇಮಠ ಸ್ವಾಗತಿಸಿದರು, ಮಾರುತಿ ಪಾಸಿ ನಿರೂಪಿಸಿದರು.