ಸಾರಾಂಶ
ಕಾಗಲವಾಡಿ, ಕಾಗಲವಾಡಿಮೋಳೆ, ಅಮ್ಮನಪುರ ಹಾಗೂ ವಿವಿಧ ಗ್ರಾಮಗಳಲ್ಲಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ಪರ ಕಾರ್ಯಕರ್ತರು ಹಾಗೂ ಮುಖಂಡರ ಜೊತೆಗೆ ತೆರಳಿ ಶಾಸಕ ಸಿ,ಪುಟ್ಟರಂಗಶೆಟ್ಟಿ ಮತಯಾಚಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಕಾಗಲವಾಡಿ, ಕಾಗಲವಾಡಿಮೋಳೆ, ಅಮ್ಮನಪುರ ಹಾಗೂ ವಿವಿಧ ಗ್ರಾಮಗಳಲ್ಲಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ಪರ ಕಾರ್ಯಕರ್ತರು ಹಾಗೂ ಮುಖಂಡರ ಜೊತೆಗೆ ತೆರಳಿ ಶಾಸಕ ಸಿ,ಪುಟ್ಟರಂಗಶೆಟ್ಟಿ ಮತಯಾಚಿಸಿದರು.ಈ ವೇಳೆ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಮಾಡಿದ ಸಾಧನೆ ಅಪಾರವಾಗಿದ್ದು, ಸಂವಿಧಾನದ ಚೌಕಟ್ಟಿನಲ್ಲಿ ದೇಶದ ಎಲ್ಲಾ ಬಡವರು,ನಿರ್ಗತಿಕರು ಹಾಗೂ ಶೋಷಿತರ ಪರವಾಗಿ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗಿದೆ. ಇಂದಿನ ಬಿಜೆಪಿ ಸರ್ಕಾರವು ಜನರಿಗೆ ಆಶ್ವಾಸನೆಗಳನ್ನು ನೀಡಿ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಕೇಂದ್ರದಲ್ಲಿ ಮತ್ತೊಮ್ಮೆ ಯುಪಿಎ ಸರ್ಕಾರವು ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ ಎಂದರು. ಚಾಮರಾಜನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಮತದಾರರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ಗೆಲ್ಲಿಸಿ ಆಶೀರ್ವಾದಿಸಬೇಕೆಂದು ಮನವಿ ಮಾಡಿದರು,
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿಕೆ.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕ ಮಹದೇವ್, ಆರ್,ಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಜಿಪಂ ಮಾಜಿ ಸದಸ್ಯ ಸದಾಶಿವಮೂರ್ತಿ,ಬಾಲರಾಜು, ಎಪಿಎಂಸಿಸದಸ್ಯ ಆಲೂರು ಪ್ರದೀಪ್, ಕಾಗಲವಾಡಿಚಂದ್ರ, ತಾಪಂ ಮಾಜಿ ಸದಸ್ಯ ಶಿವಸ್ವಾಮಿ, ಮರಿಸ್ವಾಮಿ, ನಂಜುಂಡಸ್ವಾಮಿ, ಕೋಡಿ ಮೋಳೆಪ್ರಕಾಶ್, ಅಸಂಘಟಿತ ಕಾರ್ಮಿಕ ಸಂಘಧ ಅಧ್ಯಕ್ಷ ಸ್ವಾಮಿ, ಸುರೇಶ್, ರಮೇಶ್,ಜೋಗಶೆಟ್ಟಿ,ರವಿಗೌಡ, ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರಿದ್ದರು. =