ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಗೆಲುವಿಗೆ ಶ್ರಮಿಸಿ

| Published : May 26 2024, 01:30 AM IST

ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಗೆಲುವಿಗೆ ಶ್ರಮಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ ನಡೆವ ಚುನಾವಣೆಗಾಗಿ ಚಿಂಚೋಳಿ- ಕಾಳಗಿ- ಕೋಡ್ಲಿ ಬ್ಲಾಕ್‌ ಕಮಿಟಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

ಕನ್ನಡಪ್ರಭ ವಾರ್ತೆ ಚಿಂಚೋಳಿ

ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ ಜೂ.೩ರಂದು ನಡೆಯುವ ಚುನಾವಣೆ ನಡೆಯಲಿದ್ದು ಕಾಂಗ್ರೆಸ್‌ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ ಇವರ ಗೆಲುವಿಗೆ ಎಲ್ಲ ಕಾರ್ಯಕರ್ತರು ಶ್ರಮಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಸುಭಾಷ ರಾಠೋಡ ಹೇಳಿದರು.

ಪಟ್ಟಣದ ವೀರೇಂದ್ರ ಪಾಟೀಲ ಪಬ್ಲಿಕ್‌ ಶಾಲೆ ಸಭಾಂಗಣದಲ್ಲಿ ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ ನಡೆವ ಚುನಾವಣೆಗಾಗಿ ಚಿಂಚೋಳಿ- ಕಾಳಗಿ- ಕೋಡ್ಲಿ ಬ್ಲಾಕ್‌ ಕಮಿಟಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಜಾರಿಗೊಳಿಸಿದ ಯುವನಿಧಿ ಯೋಜನೆಯಿಂದ ಅನೇಕ ನಿರುದ್ಯೋಗಿ ಪದವೀಧರರಿಗೆ ೩ ಸಾವಿರ ರು. ಮತ್ತು ಡಿಪ್ಲೊಮಾ ಪದವೀಧರರಿಗೆ ೧೫೦೦ ರು. ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ೧೦ ಸಾವಿರ ಪದವೀಧರರು ಇದರ ಪ್ರಯೋಜನೆ ಪಡೆದುಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಯ ಸಂದರ್ಭದಲಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಪದವೀಧರರಿಗೆ ನೌಕರಿಗೋಸ್ಕರ ತರಬೇತಿ ಮತ್ತು ೮೫೦೦ ರು. ವೇತನ ನೀಡಲಾಗುವುದು ಎಂದು ಪಕ್ಷವು ಘೋಷಣೆ ಮಾಡಿದೆ.

ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಸಂವಿಧಾನ ೩೭೧ನೇ(ಜೆ)ಕಲಂ ಜಾರಿಗೊಳಿಸಿದ್ದರಿಂದ ನಮ್ಮ ಭಾಗದ ಅನೇಕರಿಗೆ ಸರಕಾರಿ ಉದ್ಯೋಗ ಸಿಗುತ್ತಿವೆ. ಅಲ್ಲದೆ ೩೦ಸಾವಿರ ಉದ್ಯೋಗ ನೀಡಲಾಗುವುದು ಹಾಗೂ ಕೆಕೆಆರ್‌ಡಿಬಿಗೆ ೫ ಸಾವಿರ ಕೋಟಿ ರು. ಅನುದಾನ ಸಿಗುತ್ತಿದೆ ಇವೆಲ್ಲವೂ ಕಾಂಗ್ರೆಸ ಪಕ್ಷವು ಮಾಡಿದ ಸಾಧನೆ ಆಗಿದೆ. ನಮ್ಮ ಸರಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಒಲವು ನಮ್ಮ ಪಕ್ಷದ ಮೇಲೆ ಇರುವುದರಿಂದ ಕಾರ್ಯಕರ್ತರು ಡಾ. ಚಂದ್ರಶೇಖರ ಪಾಟೀಲ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ದೀಪಕನಾಥ ಪುಣ್ಯಶೆಟ್ಟಿ, ಪಾಟೀಲ, ತಾಲೂಕ ಬ್ಲಾಕ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಬಸವರಾಜ ಮಲಿ, ಅಬ್ದುಲ್ ಬಾಸೀತ, ರೇವಣಸಿದ್ದಪ್ಪ ಪಾಟೀಲ ಹುಮನಾಬಾದ, ಸೈಯದ ಮಹೆಮೂದ ಪಟೇಲ್ ಸಾಸರಗಾಂವ, ದೇವೇಂದ್ರಪ್ಪ ಸಾಲಹಳ್ಳಿ ಲಿಂಗಶೆಟ್ಟಿ ತಟ್ಟೆಪಳ್ಳಿ ಮಾತನಾಡಿದರು.