ಸಂಸದ ಅನಂತಕುಮಾರ ಹೆಗಡೆ ಹೇಳಿಕೆಗೆ ಕಾಂಗ್ರೆಸ್ ಖಂಡನೆ

| Published : Jan 20 2024, 02:04 AM IST

ಸಾರಾಂಶ

ಹಲವು ದಿನಗಳಿಂದ ಕಣ್ಮರೆಯಾಗಿದ್ದ ಸಂಸದರು ಇದೀಗ ಏಕಾಏಕಿ ಧಾವಿಸಿ ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಕರೆದಿದ್ದಾರೆ. ಅವರ ಹೇಳಿಕೆ ಕೀಳುಮಟ್ಟದ ಸಂಸ್ಕಾರಕ್ಕೆ ನಿದರ್ಶನವಾಗಿದೆ.

ಯಲ್ಲಾಪುರ:

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಅಸಂವಿಧಾನಿಕ ಪದ ಬಳಿಸಿರುವುದನ್ನು ಕಾಂಗ್ರೆಸ್‌ ಖಂಡಿಸಿದೆ. ಈ ಕುರಿತು ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ತಾಲೂಕು ಕಾಂಗ್ರಸ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ್, ಹಲವು ದಿನಗಳಿಂದ ಕಣ್ಮರೆಯಾಗಿದ್ದ ಸಂಸದರು ಇದೀಗ ಏಕಾಏಕಿ ಧಾವಿಸಿ ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಕರೆದಿದ್ದಾರೆ. ಅವರ ಹೇಳಿಕೆ ಕೀಳುಮಟ್ಟದ ಸಂಸ್ಕಾರಕ್ಕೆ ನಿದರ್ಶನವಾಗಿದೆ ಎಂದರು. ದೇಶದ ಅನೇಕ ಪ್ರಾಚೀನ ಮಸೀದಿ ಒಡೆಯುವ ಉದ್ರೇಕಕಾರಿ, ಪ್ರಚೋದನಕಾರಿ ಹೇಳಿಕೆ ನೀಡಿರುವುದು ಕೂಡಾ ಓರ್ವ ರಾಷ್ಟ್ರಮಟ್ಟದ ಜನಪ್ರತಿನಿಧಿಗೆ

ಶೋಭೆಯಲ್ಲ ಎಂದರು.

ಜಾತಿ-ಧರ್ಮಗಳ ನಡುವೆ ವೈಷಮ್ಯ ಹುಟ್ಟಿಸುವ ಕಾರ್ಯ ಮಾಡುತ್ತಿರುವ ಅನಂತಕುಮಾರರ ಕಾರ್ಯವನ್ನು ಕಾಂಗ್ರೆಸ್ ಸೇರಿದಂತೆ ರಾಜ್ಯದ ಪ್ರಜ್ಞಾವಂತ ನಾಗರಿಕರು ವಿರೋಧಿಸುವ ಕಾರ್ಯ ಸನ್ನಿಹಿತವಾಗಿದೆ. ಬಿಜೆಪಿ ರಾಷ್ಟ್ರವನ್ನು ಹಿಂದೂ ದೇಶವನ್ನಾಗಿ ಮಾಡುವ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿದೆಯಾದರೂ ಮತ ನೀಡಿದ ಮುಸ್ಲಿಂರನ್ನು ವಾಚಾಮಗೋಚರವಾಗಿ ಬೈಯ್ಯುವ ಕೆಲಸ ಮಾಡುತ್ತಿರುವುದು ಪಕ್ಷದ ಹೀನಾಯ ಮನಃಸ್ಥಿತಿಗೆ ಸಾಕ್ಷಿಯಾಗಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಉಲ್ಲಾಸ ಶಾನಭಾಗ ಮಾತನಾಡಿ, ಸತತ ೬ ಬಾರಿ ಸಂಸದರಾಗಿ ಆಯ್ಕೆಗೊಂಡ ಅನಂತಕುಮಾರ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಗಳೇನು? ಎಂಬುದಕ್ಕೆ ಉತ್ತರಿಸಬೇಕು. ಅನೇಕ ವರ್ಷಗಳ ಹಿಂದೆ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ಮಾಡಿದ್ದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕಾಮಗಾರಿ ಇಂತಹ ಸಂಸದರಿಂದ ಏಕೆ ಸಾಧ್ಯವಾಗಿಲ್ಲ? ಎಂಬುದಕ್ಕೂ ಸ್ಪಷ್ಟನೆ ನೀಡಬೇಕು ಎಂದರು.ಪ್ರಮುಖರಾದ ರಾಘವೇಂದ್ರ ಭಟ್ಟ ಹಾಸಣಗಿ, ಗಣೇಶ ಹೆಗಡೆ, ನರಸಿಂಹ ನಾಯ್ಕ, ಎಂ.ಡಿ. ಮುಲ್ಲಾ, ವಿಜಯಶ್ರೀ ವೈದ್ಯ, ಅನಿಲ ಮರಾಠೆ, ಫೈರೋಝ್ ಸೈಯದ್, ಅನ್ವರ್ ಶೇಖ್, ಎಸ್.ಎಂ. ಭಟ್ಟ ಇದ್ದರು.