ಆರಂಭದಿಂದಲೇ ಹಿಡಿತ ಸಡಿಲಿಸದ ಕಾಂಗ್ರೆಸ್‌!

| Published : Jun 05 2024, 12:30 AM IST

ಆರಂಭದಿಂದಲೇ ಹಿಡಿತ ಸಡಿಲಿಸದ ಕಾಂಗ್ರೆಸ್‌!
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ಸುತ್ತಿನಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ 2744 ಮತದ ಮುನ್ನಡೆದರೆ, 2ನೇ ಸುತ್ತಿನಲ್ಲಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಪೈಪೋಟಿ ನೀಡಿದರೂ, ಡಾ.ಪ್ರಭಾ 1477 ಮತದ ಮುನ್ನಡೆ ಸಾಧಿಸಿದರು. 3ನೇ ಸುತ್ತಿನಲ್ಲಿ ಕಾಂಗ್ರೆಸ್ 4387 ಮುನ್ನಡೆ ಸಾಧಿಸಿಸಿತು. 4ನೇ ಸುತ್ತಿನಲ್ಲಿ 3980ಕ್ಕೆ ಮತಗಳ ಅಂತರ ಕಡಿಮೆಯಾಯಿತು.

- ಮೊದಲ ಸುತ್ತಿನಿಂದಲೇ ಶುಭಾರಂಭ, ಆಗಾಗ ಏರಿಳಿತ, ಮತ್ತೆ ಚೇತರಿಕೆ - - - ದಾವಣಗೆರೆ: ಮೊದಲ ಸುತ್ತಿನಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ 2744 ಮತದ ಮುನ್ನಡೆದರೆ, 2ನೇ ಸುತ್ತಿನಲ್ಲಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಪೈಪೋಟಿ ನೀಡಿದರೂ, ಡಾ.ಪ್ರಭಾ 1477 ಮತದ ಮುನ್ನಡೆ ಸಾಧಿಸಿದರು. 3ನೇ ಸುತ್ತಿನಲ್ಲಿ ಕಾಂಗ್ರೆಸ್ 4387 ಮುನ್ನಡೆ ಸಾಧಿಸಿಸಿತು. 4ನೇ ಸುತ್ತಿನಲ್ಲಿ 3980ಕ್ಕೆ ಮತಗಳ ಅಂತರ ಕಡಿಮೆಯಾಯಿತು.

5ನೇ ಸುತ್ತಿಗೆ 15,693ಕ್ಕೆ ಡಾ.ಪ್ರಭಾ ಮುನ್ನಡೆ ಸಾಧಿಸಿದರು. 6ನೇ ಸುತ್ತಿನಲ್ಲಿ ಬರೋಬ್ಬರಿ 24709ರ ಮುನ್ನಡೆ, 7ನೇ ಸುತ್ತಲ್ಲಿ ಮತ್ತೆ 4 ಸಾವಿರ ಮುನ್ನಡೆ ಹೆಚ್ಚಿಸಿಕೊಂಡು, 7ನೇ ಸುತ್ತಿಗೆ ಗಾಯತ್ರಿ ಸಿದ್ದೇಶ್ವರ ವಿರುದ್ಧ 28,467 ಮತದಿಂದ ಮುನ್ನಡೆ ಪಡೆದಿದ್ದರು. 8ನೇ ಸುತ್ತಿಗೆ 42,317 ಮತಗಳ ಮುನ್ನಡೆ ಪಡೆದ ಡಾ.ಪ್ರಭಾ 9ನೇ ಸುತ್ತಿಗೆ 46,971 ಮತದ ಮುನ್ನಡೆ ಸಾಧಿಸಿದರು. 10ನೇ ಸುತ್ತಿಗೆ ಮುನ್ನಡೆ ಒಂದಿಷ್ಟು ಇಳಿಕೆಯಾಗಿ, 45,152ಕ್ಕೆ ತಲುಪಿತು.

ಇನ್ನು 11ನೇ ಸುತ್ತಿನಲ್ಲಿ ಮತ್ತೆ ಡಾ.ಪ್ರಭಾ ಮುನ್ನಡೆ 42,186ಕ್ಕೇರಿತು. 12ನೇ ಸುತ್ತಿನಲ್ಲಿ 38,333ಕ್ಕೆ ಇಳಿದಿತ್ತು. ಕಾಂಗ್ರೆಸ್ಸಿನ ಲೀಡ್ 2-3 ಸುತ್ತಿನಲ್ಲಿ ಏರಿಳಿತವಾಗಿ, ಮತ್ತೆ 2009ರ ಫಲಿತಾಂಶ ಮರುಕಳಿಸೀತೇನೋ ಎಂಬ ಆತಂಕ ಸಹಜವಾಗಿಯೇ ಕಾಂಗ್ರೆಸ್ ಪಾಳೆಯದಲ್ಲಿ ಕಂಡುಬಂದಿತ್ತು. ಅಂತಹ ಪವಾಡ ಆಗಬಹುದೆಂಬ ಆಶಾಭಾವನೆ ಬಿಜೆಪಿಯಲ್ಲೂ ಇತ್ತು. ಆದರೆ, ಅದ್ಯಾವ ಚಮತ್ಕಾರವೂ ಆಗದೇ 19ನೇ ಸುತ್ತಿನಲ್ಲಿ ಗಾಯತ್ರಿ ಅವರ ವಿರುದ್ಧ ಡಾ.ಪ್ರಭಾ 26,094 ಮತದ ಅಂತರ ಜಯ ಸಾಧಿಸಿದರು.

- - -

ಬಾಕ್ಸ್‌ * ಸತತ 4 ಕ್ಷೇತ್ರ ಗೆದ್ದ ಬಿಜೆಪಿ ಎಡವಿದ್ದೆಲ್ಲಿ?! - 2004ರಿಂದಲೂ ದಾವಣಗೆರೆ ಕ್ಷೇತ್ರವನ್ನು ಬಿಜೆಪಿ ಸತತವಾಗಿ ಗೆದ್ದಿತ್ತು

- ಎದುರಾಳಿಯ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯುವಲ್ಲಿ ಮನಗಳ ಕೊರತೆ- ಬಿಜೆಪಿ ಭದ್ರಕೋಟೆಯಾದ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ವೈಫಲ್ಯ - ದಾವಣಗೆರೆ ಉತ್ತರವೊಂದರಲ್ಲಿ ಮಾತ್ರ ಗಾಯತ್ರಿಯವರ ಮುನ್ನಡೆ - ಮಾಯಕೊಂಡ, ಹೊನ್ನಾಳಿ, ಚನ್ನಗಿರಿಯಲ್ಲಿ ನಿರೀಕ್ಷಿತ ಮತ ಸಿಗಲಿಲ್ಲ- ಡಾ.ಪ್ರಭಾ, ಗಾಯತ್ರಿ ಒಂದೇ ಜಾತಿಯವರು, ಮತಗಳಲ್ಲೂ ಹಂಚಿಕೆ- ಜಾತಿವಾರು ಸಮಬಲವಿದ್ದರೂ ಪಕ್ಷವಾರು ಮತಗಳ ಹಂಚಿಕೆ ಆಗಿವೆ - ಕಾಂಗ್ರೆಸ್ಸಿಗೆ ಗ್ಯಾರಂಟಿ ಕೈ ಹಿಡಿದಿದ್ರೆ, ಬಿಜೆಪಿಗೆ ಸ್ವಪಕ್ಷೀಯರದ್ದೇ ಅಡ್ಡಗಾಲು - ಆರು ಸಲ ಗೆದ್ದ, ಸತತ 4 ಸಲ ಅಬೇಧ್ಯ ಕೋಟೆ ಕೈ ತಪ್ಪಿದ್ದಕ್ಕೆ ಆತ್ಮವಿಮರ್ಶೆ - ಲೋಕಸಭೆ ಚುನಾವಣೆಯೇ ಹೀಗಾಯ್ತು, ಮುಂದೆ ಸ್ಥಳೀಯ ಸಂಸ್ಥೆಗಳ ಕಥೆ?

- - -