ಭ್ರಷ್ಟಾಚಾರದಲ್ಲಿ ಮುಳುಗಿದ ಕಾಂಗ್ರೆಸ್‌

| Published : Aug 24 2024, 01:27 AM IST

ಸಾರಾಂಶ

ಜಿಂದಾಲ್‌ ಮಾತ್ರವಲ್ಲದೇ ಬೆಂಗಳೂರು ಟನಲ್‌ಗಾಗಿ ₹ 14 ಸಾವಿರ ಕೋಟಿ ಎಂದು ಹೇಳುತ್ತಿದ್ದಾರೆ. ಆದರೆ, ಅದು ₹ 30ರಿಂದ ₹ 40 ಸಾವಿರ ಕೋಟಿಯ ಟನಲ್ ಇರುವ ಮಾಹಿತಿ ಎಂದು ವಿಜಯೇಂದ್ರ ಹೇಳಿದರು.

ಧಾರವಾಡ:

ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಭ್ರಷ್ಟಾಚಾರಕ್ಕೆ ಅವಿನಾಭಾವ ಸಂಬಂಧವಿದೆ. ಭ್ರಷ್ಟಾಚಾರ ಇಲ್ಲದೇ ಅವರ ಆಡಳಿತ ಕೊಡಲು ಅಸಾಧ್ಯವೆಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಇಲ್ಲಿಯ ನರೇಂದ್ರ ಕ್ರಾಸ್‌ ಬಳಿ ಆರಂಭವಾಗಿರುವ ಮಾಸ್ಟಿಫ್‌ ಗ್ರ್ಯಾಂಡ್‌ ಹೋಟೆಲ್‌ನ್ನು ಶುಕ್ರವಾರ ಸಂಜೆ ಉದ್ಘಾಟಿಸಿದ ಅವರು, ರಾಜ್ಯದಲ್ಲಿ 15 ತಿಂಗಳಿಂದ ಅಭಿವೃದ್ಧಿಯಾಗಿಲ್ಲ. ರಾಜ್ಯದ ರೈತರಿಗೆ ಬಡವರಿಗೆ ಈ ಸರ್ಕಾರ ಶಾಪವಾಗಿ ಪರಿಣಮಿಸಿದೆ. ಇಂತಹ ಭ್ರಷ್ಟ ಸರ್ಕಾರದ‌ ವಿರುದ್ಧ ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ. ಪರಿಣಾಮವಾಗಿ ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಮುಖ್ಯಮಂತ್ರಿಗಳ ಸರದಿ ಬಂದಿದ್ದು, ಇಂದಲ್ಲಾ ನಾಳೆ ಅವರೂ‌ ರಾಜೀನಾಮೆ ಕೊಡಲಿದ್ದಾರೆ ಎಂದರು.

ಜಿಂದಾಲ್‌ ಮಾತ್ರವಲ್ಲದೇ ಬೆಂಗಳೂರು ಟನಲ್‌ಗಾಗಿ ₹ 14 ಸಾವಿರ ಕೋಟಿ ಎಂದು ಹೇಳುತ್ತಿದ್ದಾರೆ. ಆದರೆ, ಅದು ₹ 30ರಿಂದ ₹ 40 ಸಾವಿರ ಕೋಟಿಯ ಟನಲ್ ಇರುವ ಮಾಹಿತಿ ಎಂದು ವಿಜಯೇಂದ್ರ ಹೇಳಿದರು.

ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಅವರ ಸಂಬಂಧಿ ಪ್ರಶಾಂತ ಬೆಲ್ಲದ ಅವರಿಗೆ ಸೇರಿರುವ ಈ ಸಮಾರಂಭಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ ಮಸೂತಿ ಸೇರಿದಂತೆ ಹಲವು ಗಣ್ಯರು ಇದ್ದರು.