ನೇಣು ಬಿಗಿದು ವಕೀಲೆ ಆತ್ಮಹತ್ಯೆ

| Published : Aug 24 2024, 01:27 AM IST

ಸಾರಾಂಶ

ನೇಣು ಬಿಗಿದು ವಕೀಲೆ ಆತ್ಮಹತ್ಯೆ

ಮಾಗಡಿ: ಪಟ್ಟಣದ ಹೊಸಪೇಟೆ ಮುಖ್ಯರಸ್ತೆ ನಿವಾಸಿ ವಕೀಲೆ ವಾಸುಕಿ (24) ಗುರುವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಕೀಲೆ ಅವಿವಾಹಿತೆಯಾಗಿದ್ದರು. ಅವರ ತಾಯಿ ಕೂಡ ವಕೀಲರಾಗಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.