ಕಾಂಗ್ರೆಸ್‌ ಸರ್ಕಾರ 5 ಗ್ಯಾರಂಟಿಗಳನ್ನು ಈಡೇರಿಸಿದೆ: ಸಚಿವ ರೆಡ್ಡಿ

| Published : Jan 20 2024, 02:01 AM IST

ಕಾಂಗ್ರೆಸ್‌ ಸರ್ಕಾರ 5 ಗ್ಯಾರಂಟಿಗಳನ್ನು ಈಡೇರಿಸಿದೆ: ಸಚಿವ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸೂಲಿಬೆಲೆ: ಒಂದು ಶತಮಾನದಲ್ಲಿ ಕಂಡು ಕೇಳರಿಯದ ಬರ ರಾಜ್ಯದಲ್ಲಿ ತಾಂಡವಾಡುತ್ತಿದ್ದು ೧೩೦ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೇವೆ. ಗಂಗಾ ಮಾತೆಯ ಕೃಪೆಯಿಂದ ಉತ್ತಮ ಮಳೆಯಾಗಿ ಸಮೃದ್ಧ ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸೂಲಿಬೆಲೆ: ಒಂದು ಶತಮಾನದಲ್ಲಿ ಕಂಡು ಕೇಳರಿಯದ ಬರ ರಾಜ್ಯದಲ್ಲಿ ತಾಂಡವಾಡುತ್ತಿದ್ದು ೧೩೦ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೇವೆ. ಗಂಗಾ ಮಾತೆಯ ಕೃಪೆಯಿಂದ ಉತ್ತಮ ಮಳೆಯಾಗಿ ಸಮೃದ್ಧ ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಹೋಬಳಿಯ ಸಿದ್ದೇನಹಳ್ಳಿ ಗ್ರಾಮದ ಪುರಾತನ ಗಂಗಮ್ಮ ದೇವಿ ದೇವಾಲಯದ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಹೊಸಕೋಟೆ ತಾಲೂಕಿನ ೪೦ ಹಳ್ಳಿಗಳ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ತರಲಿದ್ದೇವೆ. ಇಲ್ಲಿನ ಯುವ ಶಾಸಕ ಶರತ್ ಬಚ್ಚೇಗೌಡರು ಕ್ಷೇತ್ರದ ಜನತೆಗೆ ನೀಡಿರುವ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸುತ್ತಾರೆ. ರಾಜ್ಯ ಕಾಂಗ್ರೆಸ್ ಭರವಸೆ ನೀಡಿದ್ದ ೫ ಗ್ಯಾರಂಟಿಗಳನ್ನು ಈಡೇರಿಸಿದೆ. ಬಜೆಟ್ ನಲ್ಲಿ ನೀಡಿರುವ ಎಲ್ಲಾ ಆಶ್ವಾಸನೆಗಳನ್ನು ನಾವು ಈಡೇರಿಸಲು ಬದ್ದರಾಗಿದ್ದೇವೆ ಎಂದರು

ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, ದೇವರು ಮತ್ತು ದೇವಾಲಯಗಳು ಜನರನ್ನು ಒಗ್ಗೂಡಿಸುವ ಧಾರ್ಮಿಕ ಕೇಂದ್ರಗಳಾಗಬೇಕು. ಧರ್ಮದ ಹೆಸರಿನಲ್ಲಿ ದೇವರ ಹೆಸರಿನಲ್ಲಿ ರಾಜಕೀಯ ಮಾಡಬಾರದು. ಧಾರ್ಮಿಕವಾಗಿ ಯಾವುದೇ ವ್ಯಕ್ತಿಯ ಭಾವನೆಗಳಿಗೆ ಧಕ್ಕೆಯಾಗಬಾರದು. ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.

ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಮಾತನಾಡಿ, ಮಾನವನಲ್ಲಿ ಸ್ವಾರ್ಥ ಅಸೂಯೆ ತಾಂಡವಾಡುತ್ತಿದ್ದು, ಭಗವಂತ ತನ್ನ ಹೃದಯದಲ್ಲಿಯೇ ಅಡಗಿದ್ದಾನೆ, ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಕೆಲಸವಾಗಬೇಕು ಎಂದು ಹೇಳಿದರು.

ಶಿಕ್ಷಕರ ಸಂಘದ ಮಾಜಿಅಧ್ಯಕ್ಷ ಎಸ್.ಎಂ.ಮುನಿರಾಜು ಮಾತನಾಡಿ, ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ನೂರಾರು ದೇವಾಲಯಗಳ ಜೀರ್ಣೊದ್ದಾರವಾಗಿದ್ದು ದಾನಿಗಳಾದ ಬಿ.ವಿ.ಸತೀಶಗೌಡರ ನಿಸ್ವಾರ್ಥ ಸೇವೆ ಅನನ್ಯ ಎಂದರು.

ಈ ವೇಳೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಟಿಎಪಿಸಿಎಂಎಸ್ ಆಧ್ಯಕ್ಷ ಬಾಬುರೆಡ್ಡಿ, ಪದವೀಧರ ಕ್ಷೇತ್ರದ ಅಭ್ಯರ್ಥಿ ರಾಮೋಜಿಗೌಡ, ಜಿಪಂ ಮಾಜಿ ಸದಸ್ಯ ಕೃಷ್ಣಮೂರ್ತಿ, ಬೆಮೂಲ್ ನಿರ್ದೇಶಕ ಮಂಜುನಾಥ್, ಸಿದ್ದೇನಹಳ್ಳಿ ರಮೇಶ್, ಮಮತಮುನಿರಾಜು, ಯುವಮುಖಂಡ ನಾರಾಯಣಗೌಡ, ತಾಪಂ ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಸೂಲಿಬೆಲೆ ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ, ಮಮತಗೋಪಾಲ್, ಗ್ರಾಪಂ ಸದಸ್ಯ ಸುರೇಶ್, ನಗರೇನಹಳ್ಳಿ ನಾಗರಾಜಪ್ಪ, ಬುವನಹಳ್ಳಿ ಗೋಪಾಲಪ್ಪ, ಗಿಡ್ಡಪ್ಪನಹಳ್ಳಿ ಹನುಮರಾಜ್, ಅರಸನಹಳ್ಳಿ ಶಿವಪ್ಪ, ಯನಗುಂಟೆ ರಮೇಶ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಬೆಟ್ಟಹಳ್ಳಿ ನಾರಾಯಣಪ್ಪ, ಮುನಿಸೋಣ್ಣಪ್ಪ, ಚಿಕ್ಕಹರಳಗೆರೆ ಜಗದೀಶ್, ಡೇರಿ ವೆಂಕಟೇಶ್, ಅಂಗಡಿ ಮುನಿರಾಜು ಇತರರಿದ್ದರು.ಚಿತ್ರ; ೧೯ ಎಸ್ ಎಲ್ ಬಿ ೧ ಜೆಪಜೆ ನಲ್ಲಿದೆ