ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಕೈ ಸರ್ಕಾರ: ಶಾಸಕ ಯತ್ನಾಳ

| N/A | Published : Apr 22 2025, 01:52 AM IST / Updated: Apr 22 2025, 01:08 PM IST

Basanagouda patil Yatnal
ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಕೈ ಸರ್ಕಾರ: ಶಾಸಕ ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಸಿಇಟಿ ಪರೀಕ್ಷೆ ವೇಳೆ ರಾಜ್ಯದ ಶಿವಮೊಗ್ಗ, ಬೀದರ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದನ್ನು ನೋಡಿದರೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.

ವಿಜಯಪುರ :  ಸಿಇಟಿ ಪರೀಕ್ಷೆ ವೇಳೆ ರಾಜ್ಯದ ಶಿವಮೊಗ್ಗ, ಬೀದರ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದನ್ನು ನೋಡಿದರೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.

ಪ್ರತಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಮುಸ್ಲಿಂ ಓಲೈಕೆಗಾಗಿ ಒಂದು ಧರ್ಮದ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂ ಆಚರಣೆಗಳು, ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ತರುವ ಕೆಲಸದಲ್ಲಿ ತೊಡಗಿದೆ. ಹಿಂದೂ ಸಮುದಾಯವನ್ನು ಒಡೆಯುವ ದೃಷ್ಟಿಯಿಂದ ಜಾತಿ ಗಣತಿ ಮಾಡಿರುವ ಈ ಕಾಂಗ್ರೆಸ್ ಸರ್ಕಾರ, ಇದೀಗ ವಿದ್ಯಾರ್ಥಿಗಳ ಜನಿವಾರ ತೆಗೆಸುವ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ. ಜನಿವಾರ ಧರಿಸುವ ಬ್ರಾಹ್ಮಣ, ಕ್ಷತ್ರೀಯ ಸಮಾಜದ ರಜಪೂತ, ಕಲಾಲ, ಮರಾಠಾ, ವಿಶ್ವಕರ್ಮ ಸೇರಿದಂತೆ ಮತ್ತಿತರೆ ಸಮಾಜಗಳಿಗೆ ಅವಮಾನ ಮಾಡಿರುವುದನ್ನು ಉಗ್ರವಾಗಿ ಖಂಡಸಿದರು.

ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಯುವ ಮೂಲಕ ಹಿಂದೂ ಭಾವನೆಗಳಿಗೆ ಘಾಸಿ ಗೊಳಿಸಿದವರ ವಿರುದ್ಧ ಸರ್ಕಾರ ತಕ್ಷಣ ಕಾನೂನು ಕ್ರಮ ಜರುಗಿಸಿ, ಸೇವೆಯಿಂದ ವಜಾ ಮಾಡಬೇಕು. ಪರೀಕ್ಷೆಯಿಂದ ವಂಚಿತಗೊಂಡ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಪರೀಕ್ಷಾ ನಿಯಮಾವಳಿಯಲ್ಲಿ ಇಲ್ಲದ, ಮಹಿಳೆಯರ ಮಾಂಗಲ್ಯ ತೆಗೆಸುವ ಕೆಲಸ, ಜನಿವಾರ, ಉಡುದಾರ, ಶಿವದಾರ, ತೆಗೆಯಲು ಹೇಳುವುದು, ಕಿವಿಯೋಲೆ ತೆಗೆಯುವಂತಹ ಅತಾರ್ಕಿಕ ನಿಯಮ ನಿಬಂಧನೆಗಳನ್ನು ಈ ಸರ್ಕಾರ ಮಾಡಿದ್ದು, ಸಮಸ್ತ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು, ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು. ಇಲ್ಲದಿದ್ದರೇ ರಾಜ್ಯಾದ್ಯಂತ ಹಿಂದು ಧರ್ಮವಿರೋಧಿ ಸರ್ಕಾರದ ವಿರುದ್ಧ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತಮ ಕಾಲೇಜಿನಲ್ಲಿ ತಮಗಿಷ್ಟವಾದ ಪದವಿಯನ್ನು ಪಡೆಯಲು ಓದುವ ಮಕ್ಕಳ ಭಾವನೆಯನ್ನು, ಕಷ್ಟ, ಕಾರ್ಪಣ್ಯಗಳನ್ನು ಪರೀಕ್ಷಾ ಮಂಡಳಿ ಗುರುತಿಸಿ ವಿದ್ಯಾರ್ಥಿ ಸ್ನೇಹಿಯಾಗಿ ನಿಯಮ ನಿಬಂಧನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.