ದೇಶದ ಸದೃಢತೆಗೆ ವಿನೂತನ ಯೋಜನೆ ರೂಪಿಸಿದ ಹೆಗ್ಗಳಿಕೆ ಕಾಂಗ್ರೆಸ್‌ನದ್ದು-ಆನಂದಸ್ವಾಮಿ ಗಡ್ಡದೇವರಮಠ

| Published : Apr 22 2024, 02:00 AM IST

ದೇಶದ ಸದೃಢತೆಗೆ ವಿನೂತನ ಯೋಜನೆ ರೂಪಿಸಿದ ಹೆಗ್ಗಳಿಕೆ ಕಾಂಗ್ರೆಸ್‌ನದ್ದು-ಆನಂದಸ್ವಾಮಿ ಗಡ್ಡದೇವರಮಠ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯಾ ನಂತರ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿರುವ ಕಾಂಗ್ರೆಸ್ ಆರೂವರೆ ದಶಕಗಳ ಕಾಲ ಸದಾ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಉದ್ಯಮಿಗಳ ಹಿತ ಕಾಯುತ್ತಿದೆ.

ಹಿರೇಕೆರೂರು: ಸ್ವಾತಂತ್ರ್ಯಾ ನಂತರ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿರುವ ಕಾಂಗ್ರೆಸ್ ಆರೂವರೆ ದಶಕಗಳ ಕಾಲ ಸದಾ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಉದ್ಯಮಿಗಳ ಹಿತ ಕಾಯುತ್ತಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಆರೋಪಿಸಿದರು.ತಾಲೂಕಿನ ಚಿಕ್ಕೇರೂರ ಗ್ರಾಮದಲ್ಲಿ ಜರುಗಿದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಬಗೆಗಿನ ಕಾಳಜಿ, ಮಹಿಳೆಯರ ಮೇಲಿನ ಗೌರವ ಮತ್ತು ದೇಶದ ಸದೃಢತೆಗೆ ವಿನೂತನ ಯೋಜನೆ ರೂಪಿಸಿದ ಹೆಗ್ಗಳಿಕೆ ಕಾಂಗ್ರೆಸ್ಸಿನದ್ದು. ನಮ್ಮ ಪಕ್ಷ ಜಾರಿಗೊಳಿಸಿದ ಯೋಜನೆಗಳನ್ನು ಅಪಹಾಸ್ಯ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲು ತಮಗೊಂದು ಅವಕಾಶ ಸಿಕ್ಕಿದೆ. ತಮ್ಮ ಮಧ್ಯೆ ಇದ್ದು ಸೇವೆ ಮಾಡುವ ಸಂಕಲ್ಪ ನನ್ನದು. ಈ ಹಿನ್ನೆಲೆಯಲ್ಲಿ ತಾವೆಲ್ಲರೂ ನನಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.ಶಾಸಕ ಯು.ಬಿ. ಬಣಕಾರ ಮಾತನಾಡಿ, ಕೈಗೆ ಸಿಗುವ ಮತ್ತು ಸಿಗದ ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಮ್ಮ ಕಾಂಗ್ರೆಸ್‌ನ ಆನಂದಸ್ವಾಮಿ ಗಡ್ಡದೇವರಮಠ ತಮ್ಮ ಮಧ್ಯೆ ಇದ್ದು ಕೈಗೆ ಸಿಗುವವರು. ನಿಮ್ಮ ಮತ ಕಾಂಗ್ರೆಸ್ ಅಭ್ಯರ್ಥಿಗೆ ಇದ್ದರೆ ನನಗೂ ಬಲ ನೀಡಿದಂತಾಗುತ್ತದೆ ಎಂದರು. ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಅತಿವೃಷ್ಟಿ, ಕೊರೋನಾ, ಬರಗಾಲದಂಥ ಸಂಕಷ್ಟಗಳ ಸಂದರ್ಭದಲ್ಲಿ ಸ್ಪಂದಿಸದ ಬಿಜೆಪಿ ಸರ್ಕಾರ ಪ್ರಜಾತಂತ್ರ ವ್ಯವಸ್ಥೆಯನ್ನು ಹದಗೆಡಿಸಲು ಯತ್ನಿಸುತ್ತಿದೆ. ಕೋವಿಶಿಲ್ಡ್ ಚಿಕಿತ್ಸೆಯಲ್ಲಿ ಆಗಿರುವ ಹಗರಣ ಕುರಿತು ಸವಾಲು ಹಾಕಿದ್ದರೂ ಬಸವರಾಜ ಬೊಮ್ಮಾಯಿ ಅವರು ಇಂದಿಗೂ ಬಾಯಿ ಬಿಡುತ್ತಿಲ್ಲ. ಇದನ್ನು ಗಮನಿಸಿದರೆ ಎಲೆಕ್ಟ್ರೋಲ್ ಬಾಂಡ್ ಮೂಲಕ ಹಣ ಪಡೆದಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದು ಆರೋಪಿಸಿದರು.ಈ ವೇಳೆ ನಿಂಗಪ್ಪ ಚಳಗೇರಿ, ಹನುಮಗೌಡ್ರ ಹುಡೇದ, ಜೋತಿಬಾ ಜಾಧವ, ವಿಟಪ್ಪ ಬಣಕಾರ, ರಾಘು ಕಲಾಲ, ಪಿ.ಡಿ. ದೊಡ್ಡಮನಿ, ಭರಮಪ್ಪ ಡಮ್ಮಳ್ಳಿ, ಹುಸೇನ್ ಬ್ಯಾಡಗಿ, ಮಲ್ಲೇಶಪ್ಪ ಹರಿಜನ, ಜಾವೇದ್ ಹಿತ್ತಲಮನಿ, ಕರಬಸಪ್ಪ ಬಣಕಾರ, ಬಸೀರಸಾಬ ಪಟ್ಟಣಶೆಟ್ಟಿ, ರಾಜಶೇಖರ ಚೌಟಿ, ಬಸವರಾಜ ಮಂಗಣಿ ಇದ್ದರು.