ಬಡಜನರ ಹಿತರಕ್ಷಿಸುವಲ್ಲಿ ಕಾಂಗ್ರೆಸ್ ಪಕ್ಷ ಸದಾಮುಂದು: ಶಾಸಕ ರಘುಮೂರ್ತಿ

| Published : Apr 22 2024, 02:02 AM IST

ಬಡಜನರ ಹಿತರಕ್ಷಿಸುವಲ್ಲಿ ಕಾಂಗ್ರೆಸ್ ಪಕ್ಷ ಸದಾಮುಂದು: ಶಾಸಕ ರಘುಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಳೆದ 11 ತಿಂಗಳಿನಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕಸ ಕಡುಬಡವರ ಬದುಕಿಗೆ ಆಧಾರವಾಗಿದೆ.

ಚಳ್ಳಕೆರೆ: ರಾಜ್ಯದಲ್ಲಿ ಕಳೆದ 11 ತಿಂಗಳಿನಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕಸ ಕಡುಬಡವರ ಬದುಕಿಗೆ ಆಧಾರವಾಗಿದೆ. ಬಿಜೆಪಿ ಪಕ್ಷದಂತೆ ಸುಳ್ಳು ಆಶ್ವಾನೆಯನ್ನು ನೀಡದೆ ಜನರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡಲು ಪಕ್ಷ ಸದಾ ಮುಂದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರಿಗೆ ಮತ ನೀಡುವ ಮೂಲಕ ಚಿತ್ರದುರ್ಗ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.

ನಗರಂಗೆರೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಗರಂಗೆರೆ, ಸಿದ್ದಾಪುರ, ನರಹರಿ ನಗರ, ಗಾನಪ್ಪನಹಟ್ಟಿ, ಲಕ್ಷ್ಮಿಪುರ, ಹೊಟ್ಟೆಪ್ಪನಹಳ್ಳಿ ಮುಂತಾದ ಗ್ರಾಮಗಳಲ್ಲಿ ಅಭ್ಯರ್ಥಿಪರ ಮತಯಾಚನೆ ಮಾಡಿದರು. ಲೋಕಸಭಾ ಚುನಾವಣೆ ಮತದಾನ ನಡೆಯಲು ಇನ್ನೂ ಕೇವಲ ಆರು ದಿನ ಬಾಕಿ ಇವೆ. ಈಗಾಗಲೇ ಕ್ಷೇತ್ರದಾದ್ಯಂತ ಎರಡು ಸುತ್ತಿನ ಪ್ರಚಾರವನ್ನು ಮುಗಿಸಿ ಮತದಾರರ ಒಲವುಗಳಿಸಲು ಕಾಂಗ್ರೆಸ್ ಸಫಲವಾಗಿದೆ. ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅಭಿವೃದ್ಧಿ ಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿ ಅವರಿಗೆ ಮತ ನೀಡಿ ಎಂದರು.

ಕಾಂಗ್ರೆಸ್ ಹಿರಿಯ ಮುಖಂಡ ಸಿ.ಓಬಯ್ಯ ಮಾತನಾಡಿ, ಸುಮಾರು 120 ವರ್ಷಗಳ ಇತಿಹಾಸವಿರುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ. ಇಂದಿರಾ ಗಾಂಧಿ ಅವರ ಗರೀಬಿ ಹಠಾವೋ ದೇಶದಲ್ಲಿ ಬಡತನ ನಿರ್ಮೂಲನೆಗೆ ನಾಂದಿಯಾಯಿತು. ಕಾಂಗ್ರೆಸ್ ಪಕ್ಷ ಮಾಡಿದ ಯಾವುದೇ ಅಭಿವೃದ್ಧಿ ಕಾರ್ಯವನ್ನು ಬಿಜಪಿ ಇಂದಿಗೂ ಮಾಡಿಲ್ಲ. ಸುಳ್ಳು ಪ್ರಚಾರಕ್ಕೆ ಜನರು ಮರುಳಾಗದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಹಿರಿಯ ಕಾಂಗ್ರೆಸ್ ಮುಖಂಡ ಟಿ.ಪ್ರಭುದೇವ್, ಕೆಎಂಎಫ್ ನಿರ್ದೇಶಕ ಸಿ.ವೀರಭದ್ರ ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶ್‍ ಮೂರ್ತಿ, ಟಿ.ರವಿಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಟಿ.ಗಿರಿಯಪ್ಪ, ಸಮರ್ಥರಾಯ, ಮೈಲಾರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಕುಮಾರಸ್ವಾಮಿ, ಅಂಗಡಿ ರಮೇಶ್, ಎಂ.ಹಿದಾಯಿತ್‍ವುಲ್ಲಾ, ಎನ್.ಮಂಜುನಾಥ, ತಿಪ್ಪೇರುದ್ರಪ್ಪ, ಜಯಕುಮಾರ್, ಒ.ರಂಗಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಸಿದ್ದಾಪುರ ಮಂಜುನಾಥ, ಮೈನಾಬಾಬು, ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ಶೈಲಜಾ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.