ಕಾಂಗ್ರೆಸ್ ಸಂವಿಧಾನ ವಿರೋಧಿ ಸರ್ಕಾರ: ಸುಧಾಕರ ಶೆಟ್ಟಿ ಆರೋಪ

| Published : Jul 06 2025, 01:48 AM IST

ಸಾರಾಂಶ

ನರಸಿಂಹರಾಜಪುರ, ಕಾಂಗ್ರೆಸ್‌ ಸರ್ಕಾರ ಎಸ್.ಟಿ.ಜನಾಂಗಕ್ಕೆ ಮೀಸಲಿಟ್ಟ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು ಸಂವಿಧಾನ ವಿರೋಧಿ ಸರ್ಕಾರವಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಆರೋಪಿಸಿದರು.

- ತಾಲೂಕು ಕಚೇರಿ ಎದುರು ಸರ್ಕಾರದ ವಿರುದ್ದ ಜೆಡಿಎಸ್‌ ಪಕ್ಷದಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಾಂಗ್ರೆಸ್‌ ಸರ್ಕಾರ ಎಸ್.ಟಿ.ಜನಾಂಗಕ್ಕೆ ಮೀಸಲಿಟ್ಟ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು ಸಂವಿಧಾನ ವಿರೋಧಿ ಸರ್ಕಾರವಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಆರೋಪಿಸಿದರು.

ಶನಿವಾರ ತಾಲೂಕು ಕಚೇರಿ ಎದುರು ಜೆಡಿಎಸ್‌ ಪಕ್ಷದಿಂದ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಸರ್ಕಾರ ಎಲ್ಲಾ ರಂಗದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ. ವಸತಿ ಸಚಿವರು ಮನೆ ನೀಡುವುದಕ್ಕೆ ಲಂಚ ಪಡೆದಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಶಾಸಕರೇ ಆರೋಪಿಸಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲೂ ಕಳೆದ 7 ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳ ಮೇಲೆ ಶಾಸಕರ ಹಿಡಿತ ಇಲ್ಲವಾಗಿದೆ. ಶಾಸಕರ ನಿಕಟವರ್ತಿಗಳಿಗೆ ಮಾತ್ರ ಸಾಗುವಳಿ ಚೀಟಿ ನೀಡಲಾಗಿದೆ. ತಾಲೂಕು ಕಚೇರಿಯಲ್ಲಿ ಪಹಣಿ ಮಾಡಿಸಬೇಕಾದರೆ ಲಂಚ ನೀಡಬೇಕು.ಮೊದಲು ಶಾಸಕರು ಎಚ್ಚರಗೊಳ್ಳಬೇಕು. ವಿರೋಧ ಪಕ್ಷಗಳು ನೀಡುವ ಸಲಹೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೆಡಿಎಸ್ ಕ್ಷೇತ್ರ ಕೋರ್ ಕಮಿಟಿ ಸದಸ್ಯ ಕಣಿವೆ ವಿನಯ ಮಾತನಾಡಿ, ಸರ್ಕಾರ ವಾಲ್ಮೀಕಿ ನಿಗಮದ ಹಣವನ್ನು ದುರುಪಯೋಗ ಪಡಿಸಿಕೊಂಡಿದೆ. ಶೃಂಗೇರಿ ಕ್ಷೇತ್ರದ ಎಲ್ಲಾ ರಸ್ತೆಗಳಲ್ಲಿ ಹೊಂಡ ಬಿದ್ದಿದೆ. ಕಾಡಾನೆ ಕಾಟದಿಂದ ತೋಟ, ಗದ್ದೆ ಹಾಳಾಗುತ್ತಿದೆ. ವಸತಿ ಸಚಿವ ಜಮೀರ್ ಅಹಮ್ಮದ್ ಮನೆ ನೀಡಲು ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ರಾಜ್ಯ ಸರ್ಕಾರದ 2 ವರ್ಷದ ಭ್ರಷ್ಟಾಚಾರವೇ ಸಾಧನೆ ಯಾಗಿದೆ. ಜಮೀರ್ ಅಹಮ್ಮದ್ ಉಚಿತವಾಗಿ ನೀಡಬೇಕಾದ ಮನೆಗಳನ್ನು ಹಣ ಪಡೆದು ಮನೆ ನೀಡುತ್ತಾರೆ. ವಸತಿ ಯೋಜನೆಯಲ್ಲಿ ನೂರಾರು ಕೋಟಿ ಹಗರಣವಾಗಿದೆ. ಕಾಂಗ್ರೆಸ್‌ ಪಕ್ಷದವರು ಅಂಬೇಡ್ಕರ್ ಹೆಸರು ಹೇಳಿ ಅಧಿಕಾರಕ್ಕೆ ಬಂದವರು.ಈಗ ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದವರು ಶೇ. 60 ರಷ್ಟು ಕಮೀಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ನಂತರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕೆ.ಶಿವದಾಸ್‌, ಬಿ.ಟಿ.ರವಿ,ಉಪೇಂದ್ರ, ಸುಬೋದ್, ಸುಪ್ರೀತ್, ಸುಬಾನ್, ನಾಗೇಶ್, ಮೇಘರ್ಷ, ಮಡಬೂರು ಸತೀಶ್, ಮನು, ಶಾರದಾ, ಎನ್‌.ಎಂ.ಮರುಳಪ್ಪ, ಚಂದ್ರು, ತಿಮ್ಮಣ್ಣ, ನಾಗೇಶ್, ವಿಜಯನ್ ಮತ್ತಿತರರು ಇದ್ದರು.