ರಾಜ್ಯದಲ್ಲಿ ಕಾಂಗ್ರೆಸ್ ಬಲಾಢ್ಯ: ಡಾ.ಪ್ರಭಾ ಮಲ್ಲಿಕಾರ್ಜುನ್‌

| Published : Apr 28 2024, 01:16 AM IST

ರಾಜ್ಯದಲ್ಲಿ ಕಾಂಗ್ರೆಸ್ ಬಲಾಢ್ಯ: ಡಾ.ಪ್ರಭಾ ಮಲ್ಲಿಕಾರ್ಜುನ್‌
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಚುನಾವಣಾ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬಲಾಢ್ಯವಾಗಿದ್ದು 20ರಿಂದ 22ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಜಯಸಾಧಿಸಿ ಲೋಕಸಭೆ ಪ್ರವೇಶಸಲಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಶನಿವಾರ ಕ್ಷೇತ್ರದ ಆಗರಬನ್ನಿಹಟ್ಟಿ, ಮುದಿಗೆರೆ, ಹಿರೇಮಳಲಿ, ಚನ್ನೇಶಪುರ, ಜೋಳದಾಳ್, ಹರೋನಹಳ್ಳಿ, ಅಜ್ಜಿಹಳ್ಳಿ, ದುರ್ವಿಗೆರೆ, ಗೋಪ್ಪೇನಹಳ್ಳಿ, ಮಲಹಾಳ್, ಕಂಚಿಗನಾಳ್, ವಡ್ನಾಳ್ ಈ ಗ್ರಾಮಗಳಲ್ಲಿ ಪ್ರಚಾರ ನಡೆಸಿ ನಂತರ ಚನ್ನಗಿರಿ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ದಾವಣಗೆರೆ ಕ್ಷೇತ್ರದಲ್ಲಿ 4ಬಾರಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಕಳಿಸಿದ್ದೀರಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಮತ ನೀಡಿ ಗೆಲ್ಲಿಸಿ ಕಳಿಸಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಬಾಪೂಜಿ ಟ್ರಸ್ಟ್ ಮೂಲಕ ಹಲವಾರು ಸೇವಾ ಕಾರ್ಯ ಮಾಡುತ್ತಿದ್ದೇವೆ, ಕೂಲಿ ಕಾರ್ಮಿಕರಿಂದ ಹಿಡಿದು ಅಡಿಕೆ ಬೆಳೆಗಾರ, ಬಡವರ ಹೀಗೆ ಎಲ್ಲಾ ಸ್ತರದ ಜನರ ಸಮಸ್ಯೆ ಈಡೇರಿಸಿ ಕೂಡುವುದಾಗಿ ಹೇಳಿದರು.

ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದಂತಹ ಯಾವ ಸರ್ಕಾರಗಳು ಜಾರಿಗೆ ತರದಂತಹ ಐದು ಗ್ಯಾರಂಟಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು ಇದರಿಂದ ಬಡವರಿಗೆ ಅನುಕೂಲತೆ ಯಾಗಿದೆ. ರಾಜ್ಯದ ಜನರು ಕಾಂಗ್ರೆಸ್ ಪರವಾಗಿದ್ದು, ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಶತಸಿದ್ಧ ಎಂದರು.

ಪ್ರಚಾರ ಸಭೆಯಲ್ಲಿ ತಾಲೂಕು ಅಧ್ಯಕ್ಷ ಸಿ.ಎಚ್.ಶ್ರೀನಿವಾಸ್, ಪಕ್ಷದ ಮುಖಂಡ ಹೊದಿಗೆರೆ ರಮೇಶ್, ಅಮಾನುಲ್ಲಾ, ಜಬೀಉಲ್ಲಾ, ಮುದಿಗೆರೆ ರಾಜು, ಚಿಕ್ಕುಲಿಕೆರೆ ಶಿವಲಿಂಗಪ್ಪ, ಮಾವಿನಕಟ್ಟೆ ಶ್ರೀಕಾಂತ್, ವಿಜಯಗೌಡ, ತಿಮ್ಮೇಶ್ ಸೇರಿ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.