ಸಾರಾಂಶ
ಅಜ್ಜಂಪುರ, ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದಡಿ ಅಧಿಕಾರ ನೀಡುವ ಏಕೈಕ ರಾಜಕೀಯ ಪಕ್ಷ ಎಂದು ಮಾಜಿ ಮಂತ್ರಿ ರಮಾನಾಥರೈ ಹೇಳಿದರು.
- ಪಟ್ಟಣ ಪಂಚಾಯ್ತಿ ಚುನಾವಣೆ ಬಗ್ಗೆ ಕಾಂಗ್ರೆಸ್ ಪಕ್ಷದ ಪೂರ್ವಬಾವಿ ಸಭೆ.
ಕನ್ನಡಪ್ರಭ ವಾರ್ತೆ, ಅಜ್ಜಂಪುರಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದಡಿ ಅಧಿಕಾರ ನೀಡುವ ಏಕೈಕ ರಾಜಕೀಯ ಪಕ್ಷ ಎಂದು ಮಾಜಿ ಮಂತ್ರಿ ರಮಾನಾಥರೈ ಹೇಳಿದರು.ಅಜ್ಜಂಪುರದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಪಟ್ಟಣ ಪಂಚಾಯ್ತಿ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತ ನಾಡಿದರು. ಕಾಂಗ್ರೆಸ್ 2 ವರ್ಷದ ಅಭಿವೃದ್ಧಿ ಕಾರ್ಯ, ಪಂಚಗ್ಯಾರಂಟಿಗಳ ಬಗ್ಗೆ ಪ್ರತಿ11 ವಾರ್ಡಿನ ಮತದಾರರಿಗೆ ತಿಳಿಸಿ ಪ್ರಚಾರ ಮಾಡಬೇಕು. ಇದು ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಏಕೈಕ ಚುನಾವಣೆ ಕೇಂದ್ರವಾಗುತ್ತದೆ. ಎಲ್ಲಾ ವೀಕ್ಷಕರು, ಉಸ್ತುವಾರಿ ಸದಸ್ಯರು ಮನೆಮನೆಯಲ್ಲಿ ಶಾಸಕರ ಅಭಿವೃದ್ಧಿ ಕಾರ್ಯ ತಿಳಿಸಬೇಕು.11 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭಿವೃದ್ಧಿ ಗಳನ್ನು ಗೆಲ್ಲಿಸಲು ಸಂಕಲ್ಪ ಮಾಡಬೇಕೆಂದರು.
ಶಾಸಕ ಜಿ. ಎಚ್. ಶ್ರೀನಿವಾಸ್ ಅಜ್ಜಂಪುರದಲ್ಲಿ ಹೊಸ ತಾಲೂಕು ಕೇಂದ್ರವಾಗಲು ನಮ್ಮ ಪ್ರಯತ್ನದಿಂದ ಸಾಧ್ಯವಾಯಿತು. ಕಳೆದ 2 ವರ್ಷದಲ್ಲಿ ರಸ್ತೆ. ಕುಡಿಯುವ ನೀರಿನ ವ್ಯವಸ್ಥೆ, ಉತ್ತಮ ಬಸ್ ನಿಲ್ದಾಣ.ಪುಟ್ಬಾತ್ ರಸ್ತೆ, ಆಸ್ಪತ್ರೆಗೆ ಡಯಾಲಿಸಿಸ್ ಕೇಂದ್ರ, ಇಂದಿರಾ ಕ್ಯಾಂಟೀನ್, ಶಾಲೆಗಳ ದುರಸ್ತಿ, ಒಂದೇ ಸೂರಿನಡಿ ಪ್ರಜಾ ಸರ್ಕಾರ, ಪ್ರಜಾಸೌಧ ಕಟ್ಟಡ, ವಿವಿಧ ಇಲಾಖೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಸಾಮಾಜಿಕ ಪಿಂಚಣಿಯನ್ನು 35ಸಾವಿರ ಜನರಿಗೆ ಮಾಡಿಕೊಡಲಾಗಿದೆ. ಈ ಎಲ್ಲಾ ಅಭಿವೃದ್ಧಿಗಳ ಕೆಲಸವನ್ನು ಪ್ರತಿವಾರ್ಡ್ ಮತದಾರರಿಗೆ ತಿಳಿಸಿ ಎರಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಬೇಕೆಂದು ಪ್ರಚಾರ ಮಾಡಬೇಕೆಂದರು. ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಂ.ಸಿ. ಶಿವಾನಂದ ಸ್ವಾಮಿ, ಜಿಲ್ಲಾ ಅಧ್ಯಕ್ಷ ಡಾ. ಅಂಶುಮಂತು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡರು, ಕೆಪಿಸಿಸಿ ಸದಸ್ಯ ಜಿ. ನಟರಾಜ್, ನಗರ ಘಟಕ ಅಧ್ಯಕ್ಷ ತಿಪ್ಪೇಶ್ ಮಡಿವಾಳ್, ಎಂ.ಜೆ. ಕುಮಾರ್ ಅಶೋಕ್ ಗುಮ್ಮನ ಹಳ್ಳಿ, ದಯಾನಂದ್, ಜೋಗಿ ಪ್ರಕಾಶ್, ಆಯುಬ್ ಖಾನ್, ಪ್ರಕಾಶ್ ವರ್ಮಾ ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಬಿಜೆಪಿಯ ಎ.ವಿ ನವೀನ್ ಕುಮಾರ್ ಮತ್ತು ಗ್ರಾಮ ದೇವತೆ ಕಿರಾಳಮ್ಮ ದೇವಸ್ಥಾನದ ಕನ್ವಿನಿಯರ್ ತೀರ್ಥ ಪ್ರಸಾದ್ ಗೌಡ ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರಿಕೊಂಡರು.