ಅಂಕಿತಾಳಿಗೆ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರು ಸನ್ಮಾನ

| Published : May 14 2024, 01:08 AM IST

ಅಂಕಿತಾಳಿಗೆ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರು ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ಟಾಪರ್‌ ಅಂಕಿತಾ ಬಸಪ್ಪ ಕೊಣ್ಣೂರ ಅವರ ವಜ್ಜರಮಟ್ಟಿ ಗ್ರಾಮದಲ್ಲಿನ ಮನೆಗೆ ಬೆಂಗಳೂರಿನ ಇಂಡೋಗ್ಲೋಬ್ ಸಂಸ್ಥೆ ಸಹ ಸಂಸ್ಥಾಪಕ ಹಾಗೂ ಕಾಂಗ್ರೆಸ್‌ ಮುಖಂಡ ಸಿದ್ದು ಕೊಣ್ಣೂರು ಭೇಟಿ ನೀಡಿ ಸಂಸ್ಥೆಯ ಪರವಾಗಿ ವಿದ್ಯಾರ್ಥಿನಿಗೆ ಸನ್ಮಾನಿಸಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 525 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ ಅವರ ವಜ್ಜರಮಟ್ಟಿ ಗ್ರಾಮದಲ್ಲಿನ ಮನೆಗೆ ಬೆಂಗಳೂರಿನ ಇಂಡೋಗ್ಲೋಬ್ ಸಂಸ್ಥೆ ಸಹ ಸಂಸ್ಥಾಪಕ ಹಾಗೂ ಕಾಂಗ್ರೆಸ್‌ ಮುಖಂಡ ಸಿದ್ದು ಕೊಣ್ಣೂರು ಭೇಟಿ ನೀಡಿ ಸಂಸ್ಥೆಯ ಪರವಾಗಿ ವಿದ್ಯಾರ್ಥಿನಿಗೆ ಸನ್ಮಾನಿಸಿದರು.ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ಹಾಗೂ ಗೌರವ ಹೆಚ್ಚಿಸಿದ್ದು, ವಿದ್ಯಾರ್ಥಿನಿಗೆ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಗ್ರಾಮೀಣ ಮಟ್ಟದ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಹೆತ್ತ ತಂದೆ-ತಾಯಿ ಹಾಗೂ ವಿದ್ಯೆ ನೀಡಿದ ಶಿಕ್ಷಕರಿಗೆ ಗೌರವ ತಂದು ಕೊಟ್ಟಿದ್ದಾರೆ.ಅಂಕಿತಾಳ ಸಾಧನೆ ಎಲ್ಲ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ ಎಂದು ಬಣ್ಣಿಸಿದರು.

ಬೆಂಗಳೂರಿನಲ್ಲಿ ನಾನು ಹಾಗೂ ನನ್ನ ಸ್ನೇಹಿತ ಸೇರಿ ಇಂಡೋಗ್ಲೊಬ್ ವಿಜ್ಞಾನ ಪಿಯು ಕಾಲೇಜು ನಡೆಸುತ್ತಿದ್ದು, ಅಂಕಿತಾಳಿಗೆ ಪ್ರವೇಶ ನೀಡಿ ಶಿಕ್ಷಣ, ಹಾಸ್ಟೇಲ್‌ ಸೇರಿ ಖರ್ಚುವೆಚ್ಚಕ್ಕಾಗಿ ಪ್ರತಿವರ್ಷ ₹ 25 ಸಾವಿರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಧೋಳ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರೆಪ್ಪ ಸಾಂಗಲಿಕರ, ತೇರದಾಳ ಮತ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಸಿದ್ದಪ್ಪ ಕೊಣ್ಣೂರ, ಗೀತಾ ಕೊಣ್ಣೂರ, ವಜ್ಜರಮಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ ಕುರಿ, ಸಿರಾಜ ಹೊರಟ್ಟಿ, ಅಶೋಕ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.