ಕಡೂರುಬಡವರ ಮತ್ತು ದೀನ ದಲಿತರ ಉದ್ಧಾರಕ್ಕೋಸ್ಕರ ಮಾಡುತ್ತಿರುವ ಅಭಿವೃದ್ಧಿಯಿಂದ ನಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರ ದೇಶದಲ್ಲಿಯೇ ಮಾದರಿಯಾಗಿದೆ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಬಣ್ಣಿಸಿದರು.
- ಸಖರಾಯಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆ
ಕನ್ನಡಪ್ರಭ ವಾರ್ತೆ, ಕಡೂರುಬಡವರ ಮತ್ತು ದೀನ ದಲಿತರ ಉದ್ಧಾರಕ್ಕೋಸ್ಕರ ಮಾಡುತ್ತಿರುವ ಅಭಿವೃದ್ಧಿಯಿಂದ ನಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರ ದೇಶದಲ್ಲಿಯೇ ಮಾದರಿಯಾಗಿದೆ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಬಣ್ಣಿಸಿದರು.ಮಂಗಳವಾರ ತಾಲೂಕಿನ ಸಖರಾಯಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಬಡವರಿಗೆ ಅನುಕೂಲವಾಗಿದ್ದ ಮನರೇಗಾ ಯೋಜನೆ ಹೆಸರನ್ನು ಬದಲಾವಣೆ ಮಾಡಿರುವುದು ಖಂಡನೀಯ. 1991ರಲ್ಲಿ ಪ್ರಧಾನಿ ಮನಮೋಹನಸಿಂಗ್ ಬಡವರಿಗೆ ಅನುಕೂಲವಾಗುವಂತೆ ಮನರೇಗಾ ಯೋಜನೆ ರೂಪುಗೊಳಿಸಿದರು. ಆದರೆ ಬಿಜೆಪಿ ಸರ್ಕಾರ ದಲ್ಲಿ ಹಣವಿಲ್ಲವೇನೋ ಗೊತ್ತಿಲ್ಲ. ಹೆಸರನ್ನು ಬದಲಾವಣೆ ಮಾಡಿ ಇದ್ದ ನಿಯಮಗಳನ್ನು ಬಿಗಿ ಗೊಳಿಸಿ ಕೆಲಸ ಮಾಡದ ರೀತಿಯಲ್ಲಿ ಮಾಡಿದ್ದಾರೆ ಇದರ ವಿರುದ್ಧ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳ ಬೇಕಾಗುತ್ತದೆ ಎಂದು ಹೇಳಿದರು.
ದೇಶಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧೀ ಪ್ರಾಣವನ್ನೇ ತೆತ್ತಿದ್ದಾರೆ. ಅಂದು ಮಹಾತ್ಮ ಗಾಂಧೀಯ ವರನ್ನೇ ಕೊಲೆ ಮಾಡಿದವರು ಇಂದು ಗಾಂಧೀಜೀ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 5 ಗ್ಯಾರೆಂಟಿಗಳನ್ನು ಕೊಟ್ಟು ಅಭಿವೃದ್ಧಿ ಮಾಡುತ್ತಿದೆ. ಕಾರ್ಯಕರ್ತರು ಇದನ್ನು ಜನರಿಗೆ ತಿಳಿಸಿ ಮುಂಬರುವ ಚುನಾವಣೆಯಲ್ಲಿ ಗೆಲುವು ನಮ್ಮದಾಗಲಿ ಎಂದರು.ಗ್ಯಾರೆಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, 1991ರಲ್ಲಿ ಕಾಂಗ್ರೆಸ್ ಸರಕಾರ ಬಡವರ ಕಷ್ಟಗಳನ್ನು ಅರಿತು ಮನರೇಗಾ ಯೋಜನೆ ಜಾರಿಗೆ ತಂದಿತ್ತು. ಇದೀಗ ಏಕಾಏಕಿ ಬಿಜೆಪಿ ಸರ್ಕಾರ ಹೆಸರನ್ನು ಬದಲಾವಣೆ ಮಾಡಿ ಜನರ ಮನಸ್ಸಿಗೆ ಮೋಸ ಮಾಡುತ್ತಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ ಅನುಕೂಲವಾಗಿದೆ. ಆದರೆ ಮನರೇಗಾ ಯೋಜನೆಯಲ್ಲಿ ಅನೇಕ ಬದಲಾವಣೆಗಳಿಂದ ಕೆಲಸ ವಾಗುತ್ತಿಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಪಾದಯಾತ್ರೆ ಮಾಡಿ ಪ್ರತಿಭಟನೆ ಮಾಡಲಾಗುವುದು. ಇದನ್ನು ಎಚ್ಚೆತ್ತುಕೊಂಡು ಸದರಿ ಯೋಜನೆಗೆ ಕೇಂದ್ರ ಸರಕಾರ ಹಳೇ ಹೆಸರನ್ನೇ ಮುಂದುವರಿಸಬೇಕು. ಕಾರ್ಯಕರ್ತರು ಮುಂಬರುವ ಗ್ರಾಮಪಂಚಾಯ್ತಿ, ತಾಲೂಕು ಪಂಚಾಯ್ , ಜಿಪಂ ಚುನಾವಣೆಗಳಿಗೆ ಒಗ್ಗಟ್ಟಾಗಿ ಚುನಾವಣೆ ಎಂದುರಿಸಲು ಮುಂದಾಗಿ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಂಕರನಾಯ್ಕ, ಮೋಹನಕುಮಾರ್, ರುದ್ರಮೂರ್ತಿ ಹಾಗೂ ಲಕ್ಯಾ ಮತ್ತು ಸಖರಾಯಪಟ್ಟಣ ಹೋಬಳಿಯ ಮುಖಂಡರು ಹಾಗು ಕಾರ್ಯಕರ್ತರು ಹಾಜರಿದ್ದರು.20ಕೆಕೆಡಿಯು2.
. ಕಡೂರು ತಾಲೂಕಿನ ಸಖರಾಯಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ತಮ್ಮಯ್ಯ ಮಾತನಾಡಿದರು.