ಕಾಂಗ್ರೆಸ್ ಪಕ್ಷ ಜಾತಿಗಳ ಹೆಸರಿನಲ್ಲಿ ಚುನಾವಣೆ: ಸಿಟಿ ರವಿ

| Published : Mar 23 2024, 01:02 AM IST

ಕಾಂಗ್ರೆಸ್ ಪಕ್ಷ ಜಾತಿಗಳ ಹೆಸರಿನಲ್ಲಿ ಚುನಾವಣೆ: ಸಿಟಿ ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷ ಜಾತಿಗಳ ಹೆಸರಿನಲ್ಲಿ ಚುನಾವಣೆ ಮಾಡಲು ಹೊರಟಿದ್ದು, ಯುವಕ,ರೈತ,ಮಹಿಳೆ ಮತ್ತು ಬಡವ ಎಂಬ ನಾಲ್ಕು ಜಾತಿಗಳ ಪರವಾಗಿ ದುಡಿಯುವುದೇ ಮೋದಿಯವರ ನಿಲುವು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

- ಚಿಕ್ಕದೇವನೂರು ಗ್ರಾಮದಲ್ಲಿ ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಪರ ಪ್ರಚಾರಕನ್ನಡಪ್ರಭ ವಾರ್ತೆ, ಕಡೂರುಕಾಂಗ್ರೆಸ್ ಪಕ್ಷ ಜಾತಿಗಳ ಹೆಸರಿನಲ್ಲಿ ಚುನಾವಣೆ ಮಾಡಲು ಹೊರಟಿದ್ದು, ಯುವಕ,ರೈತ,ಮಹಿಳೆ ಮತ್ತು ಬಡವ ಎಂಬ ನಾಲ್ಕು ಜಾತಿಗಳ ಪರವಾಗಿ ದುಡಿಯುವುದೇ ಮೋದಿಯವರ ನಿಲುವು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಶುಕ್ರವಾರ ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಪರವಾಗಿ ಪ್ರಚಾರ ನಡೆಸಿ ಕಾರ್ಯಕರ್ತರ ಮನೆಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದರು. ದೇಶದ ಜನರು ಎಂದಿಗೂ ರಾಷ್ಟ್ರಘಾತುಕರನ್ನು ಗೆಲ್ಲಿಸುವುದಿಲ್ಲ. ಆದ್ದರಿಂದಲೇ ಈ ಚುನಾವಣೆ ರಾಷ್ಟ್ರ ಭಕ್ತರು ಮತ್ತು ರಾಷ್ಟ್ರಘಾತುಕರ ನಡುವೆ ನಡೆಯುವ ಚುನಾವಣೆ ಎಂದು ಬಣ್ಣಿಸಿದರು. ಇದು ನೀತಿ-ಜಾತಿಗಳ ಮಧ್ಯೆ ನಡೆಯುವ ಚುನಾವಣೆ. ನರೇಂದ್ರ ಮೋದಿ ಅವರು ದೇಶದ ಹಿತಕ್ಕಾಗಿ ತಾಳುತ್ತಿರುವ ನೀತಿ ಗಳಾದರೆ. ಕಾಂಗ್ರೆಸ್ ಪಕ್ಷದ್ದು ಹೊಡೆದಾಳುವ ನೀತಿಯಾಗಿದೆ. ಜಾತಿಗಳ ಹೆಸರಿನಲ್ಲಿ ಚುನಾವಣೆ ಮಾಡಲು ಹೊರಟಿವೆ ಎಂದು ಆರೋಪಿಸಿದರು. ಮೋದಿ ಅವರು ದೇಶದ ಏಕಾಗ್ರತೆ, ಸಮಗ್ರತೆಗೆ ದುಡಿಯುತ್ತಿದ್ದು ಭಾರತವನ್ನು ಪ್ರಪಂಚದಲ್ಲಿಯೇ ವಿಶ್ವಗುರುವಿನ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ. ಇತ್ತ ಡಿಎಂಕೆ ಪಕ್ಷದ ಪ್ರಣಾಳಿಕೆಯಲ್ಲಿ, ಸಂವಿಧಾನ ಬದಲಾವಣೆ ಮಾಡಲು ಬಯಸಿ ದೇಶವನ್ನು ತುಂಡು ಮಾಡಿ ಆಳುವ ನೀತಿ ಹೊಂದಿದ್ದು ಆದರೆ, ಮೋದಿ ಅವರದ್ದು ಅಖಂಡ ಭಾರತ ಪರಿಕಲ್ಪನೆ ಎಂದರು. ಕಳೆದ 10 ವರ್ಷಗಳಿಂದ ಮೋದಿ ಅವರು ನೀಡಿರುವ ಆಡಳಿತವನ್ನು ದೇಶದ ಜನ ಮೆಚ್ಚಿದ್ದಾರೆ. ಬಿಜೆಪಿ ಬಡವರ ಪರವಾಗಿ ಕೆಲಸ ಮಾಡುತ್ತಿದ್ದು ಜೆಜೆಎಂ ಯೋಜನೆಯಿಂದ ಕುಡಿಯುವ ನೀರು, ಹೆದ್ದಾರಿಗಳ ಅಭಿವೃದ್ಧಿ, ಚಿಕ್ಕಮಗಳೂರು ಜಿಲ್ಲೆಗೆ ರೈಲ್ವೆಗೆ ಹೆಚ್ಚಿನ ಒತ್ತು ನೀಡಿದ್ದರು. ಮೆಡಿಕಲ್ ಕಾಲೇಜು ಮಂಜೂರಾತಿ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದಾರೆ ಎಂದರು.ಬಿಜೆಪಿ ಅಜೆಂಡಾ ಎಂದರೆ ಉದ್ಯಮಿಯಾಗು ಉದ್ಯೋಗ ನೀಡು ಎಂಬುದಾಗಿದ್ದು, ಇಂತಹ ಅನೇಕ ಯೋಜನೆಗಳನ್ನು ತಂದು ಬೀದಿ ಬದಿ ವ್ಯಾಪಾರಿಗಳ ಜೀವನಕ್ಕೆ ಸಹಕಾರಿಯಾಗಿದೆ. ಆದರೆ ಜನೋಪಯೋಗಿ ಯೋಜನೆಗಳನ್ನು ಕೊಟ್ಟಿದ್ದು ನಮ್ಮ ಪಕ್ಷ. ಹಗರಣಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು. ನಮ್ಮ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಸರಳರು ಹಂತ ಹಂತವಾಗಿ ಮೇಲೆ ಬಂದವರು ಎರಡು ಜಿಲ್ಲೆಯ ಮತದಾರರು ದಾಖಲೆ ಮತ ನೀಡಿ ಅವರನ್ನು ಗೆಲ್ಲಿಸಿ, ಸಂಸತ್ತಿಗೆ ಕಳುಹಿಸಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡೋಣ ಎಂದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಭಾರತದ ಭದ್ರತೆಗೆ ಮತ್ತು ಅಖಂಡ ಭಾರತದ ಪರಿಕಲ್ಪನೆಗೆ ಮತ್ತು ಭಾರತದ ಭವಿಷ್ಯ ಬರೆಯುವ ಚುನಾವಣೆಯಾಗಿದೆ. ಮೋದಿ ಆಡಳಿತದಲ್ಲಿ ಬಡವರಿಗೆ ಹೆಚ್ಚಿನ ಅನುಕೂಲಗಳಾಗಿವೆ. ಉಜ್ವಲ್ ಯೋಜನೆಯಿಂದ 18 ಸಾವಿರ ಹಳ್ಳಿಗಳ ಜನರಿಗೆ ಸಹಾಯ ವಾಗಿದೆ. ಸ್ವಚ್ಛ ಭಾರತ್ ಯೋಜನೆ, ಸಾಲ ಸೌಲಭ್ಯ ವಿತರಣೆ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಲಪಡಿಸಲು ಎರಡು ಜಿಲ್ಲೆಗಳ ಮತದಾರರು ನನ್ನನ್ನು ಗೆಲ್ಲಿಸಬೇಕು ಎಂದು ಕೋರಿದರು. ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ರು, ಬಿಜೆಪಿ ಜಿಲ್ಲಾ ವಕ್ತಾರ ಕೆ.ಆರ್.ಮಹೇಶ್‌ ಒಡೆಯರ್, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ. ಕಲ್ಮರುಡಪ್ಪ, ಚಿಕ್ಕಮಗಳೂರು ಬಿಜೆಪಿ ಮಂಡಲದ ಗ್ರಾಮಾಂತರ ಅಧ್ಯಕ್ಷ ವಿಜಯಕುಮಾರ್, ಬಿಜೆಪಿ ಮುಖಂಡ ರಾದ ಚಿಕ್ಕದೇವನೂರು ರವಿ,ಪುಷ್ಪ್ಪರಾಜ್,ರಂಗನಾಥ್,ಕಾಯಿರವಿ,ಕಡೂರು ಎ ಮಣಿ,ಶಾಮಿಯಾನ ಚಂದ್ರು ಮತ್ತಿತರರು ಇದ್ದರು. 22ಕೆಕೆಡಿಯು1. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಕಡೂರು ತಾಲೂಕು ಚಿಕ್ಕದೇವನೂರು ಗ್ರಾಮದಲ್ಲಿ ಮತ ಯಾಚಿಸಿದರು.ಸಿ.ಟಿ.ರವಿ,ಕಲ್ಮರುಡಪ್ಪ,ದೇವರಾಜ್ ಶೆಟ್ಟಿ ಮತ್ತಿತರರು ಇದ್ದರು.