ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಫೆ.15ಕ್ಕೆ ಟಿಕೆಟ್ ಘೋಷಣೆ ಸಾಧ್ಯತೆ ಇದ್ದು, ದಾವಣಗೆರೆ ಕ್ಷೇತ್ರದಲ್ಲಿ ತಮಗೆ ಟಿಕೆಟ್ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ಭಾರತೀಯ ಯುವ ಕಾಂಗ್ರೆಸ್‌ನ ಔಟ್‌ರೀಚ್‌ನ ನೂತನ ರಾಜ್ಯ ಉಪಾಧ್ಯಕ್ಷ ಹಾಗೂ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಕ್ಕರಗೊಳ್ಳ ಜಿ.ಬಿ.ವಿನಯಕುಮಾರ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಗ್ರಾಮಕ್ಕೂ ಪಾದಯಾತ್ರೆ ಹೋದಾಗ ಗ್ರಾಮೀಣರೂ ಹೊಸ ಬದಲಾವಣೆ ಬಯಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಸ್ವಯಂ ಪ್ರೇರಿತರಾಗಿ ಜನರು ತಮ್ಮನ್ನು ಬೆಂಬಲಿಸುತ್ತಿರುವುದು ಯುವಕನಾದ ತಮ್ಮಂತಹವರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮೂಡಿಸುತ್ತಿದೆ ಎಂದರು.
ಶಿಕ್ಷಣ ಕ್ಷೇತ್ರ ಮೂಲದಿಂದ ಬಂದ ತಮ್ಮನ್ನು ಈಗಾಗಲೇ ಕ್ಷೇತ್ರಾದ್ಯಂತ ಶೇ.75ರಷ್ಟು ಜನರು ವಿನಯಕುಮಾರ ಅಂತಾ ಗುರುತಿಸುತ್ತಿದ್ದಾರೆ. ಈಗಾಗಲೇ ಟಿಕೆಟ್ ಹಂಚಿಕೆ ಬಗ್ಗೆ ಪಕ್ಷದಿಂದ ಸಮೀಕ್ಷೆ ಮಾಡಲಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ನಿರ್ದಿಷ್ಟ ಸಂಖ್ಯೆ ಹೇಳಿದ್ದು, ಅಷ್ಟೇ ಕ್ಷೇತ್ರ ಗೆದ್ದಿದ್ದೆವು. ಇದೇ ಮಾನದಂಡವನ್ನು ನೆರೆ ರಾಜ್ಯದಲ್ಲೂ ಅಳವಡಿಸಿಕೊಳ್ಳಲಾಗಿತ್ತು ಎಂದರು.ಇನ್ನೂ 30 ವರ್ಷ ಸೇವೆ ಮಾಡುವೆ
ವೃತ್ತಿಪರರಾದ ಸಮೀಕ್ಷಾ ತಂಡದ ಸರ್ವೇ ನೋಡಿ ಶೇ.80ರಷ್ಟು ಹಾಗೂ ನಮ್ಮ ಪ್ರಯತ್ನ ಶೇ.20ರಷ್ಟು ನೋಡಿ ಟಿಕೆಟ್ ನೀಡುವ ಸಾಧ್ಯತೆ ಇದೆ. ನನಗೆ ಟಿಕೆಟ್ ಸಿಗುತ್ತದೆಂದು ನಾನು ಕೆಲಸ ಮಾಡುತ್ತಿಲ್ಲ. ಇನ್ನೂ 30 ವರ್ಷ ನಾನು ಸೇವೆ ಮಾಡುವ ಗುರಿ ಹೊಂದಿದ್ದೇನೆ. ಲೋಕಸಭಾ ಸದಸ್ಯನಾದರೆ ಜನರಿಗೆ ಮತ್ತಷ್ಟು ಹೆಚ್ಚು ಕೆಲಸ ಮಾಡಬಹುದೆಂಬ ಉದ್ದೇಶ ನನ್ನದು. ನಮ್ಮ ಗುರಿ, ಕೆಲಸ ಏನೆಂಬುದು ಜನರ ಬಳಿ ಹೋಗಿ, ಹೇಳಿದ್ದರಿಂದ ಇನ್ ಸೈಟ್ಸ್‌ನಂತಹ ಸಂಸ್ಥೆ ಕಟ್ಟುವುದಕ್ಕೆ ಸಾಧ್ಯವಾಯಿತು ಎಂದು ಜಿ.ಬಿ.ವಿನಯಕುಮಾರ ತಿಳಿಸಿದರು. ಯುವ ಕಾಂಗ್ರೆಸ್ ಔಟ್‌ರೀಚ್ ರಾಜ್ಯ ಉಪಾಧ್ಯಕ್ಷ ಜಿ.ಬಿ.ವಿನಯ್‌ದಾವಣಗೆರೆ: ಭಾರತೀಯ ಯುವ ಕಾಂಗ್ರೆಸ್ ಔಟ್ ರೀಚ್ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ತಮ್ಮನ್ನು ನೇಮಕ ಮಾಡಿ, ರಾಷ್ಟ್ರೀಯ ಅಧ್ಯಕ್ಷ ಊಮನ್ ಚಾಂಡಿ ಆದೇಶ ಹೊರಡಿಸಿ ಪಕ್ಷದಲ್ಲಿ ನನ್ನ ಜವಾಬ್ದಾರಿ ಹೆಚ್ಚಿಸಿದ್ದಾರೆ ಎಂದು ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಕ್ಕರಗೊಳ್ಳದ ಜಿ.ಬಿ.ವಿನಯಕುಮಾರ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಆಂತರಿಕ ಗ್ಯಾರಂಟಿ ಅಭಿಯಾನ ಆರಂಭಿಸಿದ್ದೇನೆ. ಪ್ರತಿ ಲೋಕಸಭಾ ಕ್ಷೇತ್ರಕ್ಕೆ 10 ಜನರ ತಂಡ ಮಾಡಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಜನರ ಅಭಿಪ್ರಾಯ ಕಲೆ ಹಾಕಲಾಗುವುದು. ತಾವು ಹಮ್ಮಿಕೊಂಡಿರುವ ಪಾದಯಾತ್ರೆ ಜೊತೆಗೆ ಗ್ಯಾರಂಟಿ ಯೋಜನೆಗಳ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಬಗ್ಗೆಯೂ ಗಮನ ಹರಿಸಲಾಗುವುದು ಎಂದರು.ಬೃಹತ್ ಪಾದಯಾತ್ರೆ 29ಕ್ಕೆ ಸಮಾರೋಪ:
ದಾವಣಗೆರೆ ಜನತೆ ರಾಜಕೀಯದಲ್ಲಿ ಹೊಸ ಬದಲಾವಣೆ ಬಯಸುತ್ತಿದ್ದು, ಹೋದಲ್ಲೆಲ್ಲಾ ನನಗೆ ಆಶೀರ್ವದಿಸಿ ಪ್ರೋತ್ಸಾಹದ ಮಾತುಗಳನ್ನಾಡುತ್ತಿದ್ದಾರೆ. ವಿನಯ್ ಮಾರ್ಗ ಟ್ರಸ್ಟ್‌ನಿಂದ ಡಿ.18ರಂದು ಜಗಳೂರು ತಾಲೂಕಿನ ಗಡಿ ಗ್ರಾಮ ಚಿಕ್ಕ ಉಜ್ಜಿನಿ ಗ್ರಾಮದಿಂದ ವಿನಯ ನಡಿಗೆ ಹಳ್ಳಿ ಕಡೆಗೆ ವಿನೂತನ ಬೃಹತ್ ಪಾದಯಾತ್ರೆ ಆರಂಭಿಸಿದ್ದು, ಇದೀಗ ಮಾಯಕೊಂಡದಲ್ಲಿ ಸಾಗುತ್ತಿದ್ದೇವೆ. ಜ.29ರಂದು ದಾವಣಗೆರೆ ತಾಲೂಕು ಕೊಗ್ಗನೂರು ಗ್ರಾಮದಲ್ಲಿ ಜ.29ರ ರಾತ್ರಿ 8.30ಕ್ಕೆ ಸಮಾರೋಪ ನಡೆಯಲಿದೆ. ಪಕ್ಷದ ಎಲ್ಲಾ ಜನ ಪ್ರತಿನಿಧಿಗಳು, ಪದಾಧಿಕಾರಿಗಳು, ಗ್ರಾಮೀಣ ಮುಖಂಡರು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಜಿ.ಬಿ.ವಿನಯಕುಮಾರ ವಿವರಿಸಿದರು.ಪಕ್ಷದ ಮುಖಂಡರಾದ ರಾಘು ದೊಡ್ಮನಿ, ಶರತ್ ಕುಮಾರ, ರಂಗಸ್ವಾಮಿ, ತಿಮ್ಮಾರೆಡ್ಡಿ ಇತರರಿದ್ದರು.ಗ್ರಾಮೀಣ ಸಮಸ್ಯೆ ಅರಿಯುವ ಪ್ರಯತ್ನ
ಗ್ರಾಮೀಣ ಭಾಗದ ಶಾಲಾ, ಕಾಲೇಜುಗಳು, ಅಂಗನವಾಡಿ ಕೇಂದ್ರ, ಗ್ರಂಥಾಲಯಗಳ ಸ್ಥಿತಿಗತಿ, ಮೂಲ ಸೌಲಭ್ಯಗಳ ಬಗ್ಗೆ ಅವಲೋಕನ ಮಾಡಲಾಗುತ್ತಿದೆ. ಈಗಾಗಲೇ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಸುತ್ತಾಡಿದ್ದು, ಒಂದು ತಿಂಗಳ ಅವಧಿಯಲ್ಲಿ ಸುಮಾರು 650 ಕಿಮೀ ಪಾದಯಾತ್ರೆ ಮಾಡಿ, 224 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಾ ಕಡೆ ಜನರೂ ಆತ್ಮೀಯವಾಗಿ ಬರ ಮಾಡಿ, ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಪಾದಯಾತ್ರೆ ಮೂಲಕ ಗ್ರಾಮೀಣರ ಸಮಸ್ಯೆ ಅರಿಯುವ ಪ್ರಯತ್ನ ಮಾಡಿದ್ದೇನೆ.ಜಿ.ಬಿ.ವಿನಯಕುಮಾರ, ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ