(ಆರಗ ಮಗ್‌ಶಾಟ್ )
ಕನ್ನಡಪ್ರಭ ವಾರ್ತೆ ಶಿವಮೊಗ್ಗರಾಜ್ಯ ಸರ್ಕಾರ ರಾಜಕೀಯ ವಿರೋಧಿಗಳ ಮೇಲೆ ಪೊಲೀಸ್ ಬಲಪ್ರಯೋಗ ಮಾಡುತ್ತಿದೆ. ಬೆಳಗಾವಿಯಲ್ಲಿ ಸಿ.ಟಿ. ರವಿರನ್ನು ದೈಹಿಕವಾಗಿ ಮುಗಿಸುವ ಪ್ರಯತ್ನವೂ ನಡೆದಿತ್ತು ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2017ರಲ್ಲಿ ಕಾಂಗ್ರೆಸ್ ಸರ್ಕಾರ 23 ಸಾವಿರ ಬಿಜೆಪಿ ಹಾಗೂ ಆರ್ ಎಸ್ಎಸ್ ಕಾರ್ಯಕರ್ತರ ಮೇಲೆ ರೌಡಿ ಲಿಸ್ಟ್ ಓಪನ್ ಮಾಡಿತ್ತು. ರಾಜಕೀಯವಾಗಿ, ಸೈದ್ಧಾಂತಿಕವಾಗಿ ಎದುರಿಸಲಿ ಏನು ತೊಂದರೆಯಿಲ್ಲ. ಆದರೆ, ತನ್ನ ಅಧಿಕಾರವಧಿಯಲ್ಲಿ ಪೊಲೀಸ್ ಬಳಸಿ, ಹೆದರಿಸುವ ಪ್ರಯತ್ನ ಆಗುತ್ತಿದೆ. ಇದು ಕಾಂಗ್ರೆಸ್‌ನ ಹತಾಶ ಪ್ರಯತ್ನ ಎಂದು ತಿರುಗೇಟು ನೀಡಿದರು.ಕೇಸ್ ಹಾಕಿ ಉದ್ಧಾರ ಆಗುತ್ತೇವೆ ಅಂದರೆ ಏನು ಮಾಡೋಕೆ ಆಗಲ್ಲ, ನಾವು ಎದುರಿಸ್ತೇವೆ. ಯಶಪಾಲ್ ಸುವರ್ಣ ಮೇಲೆ ಕೇಸ್ ಹಾಕಿ, ನೋಟಿಸ್ ನೀಡಿದ್ದಾರೆ. ಬೇರೆ ಬೇರೆ ಶಾಸಕರ ಮೇಲೆ ಕೇಸ್ ಹಾಕ್ತಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇಲಾಖೆ ಸುಧಾರಿಸೋ ಬಗ್ಗೆ ನೋಡೋದಿಲ್ಲ.
ರಾಜ್ಯದಲ್ಲಿ ದಿನನಿತ್ಯ ಕ್ರೈಮ್ ನಡೀತಿದೆ. ಅದರ ಬಗ್ಗೆ ಗಮನವಿಲ್ಲ. ರಾಜಕೀಯ ವಿರೋಧಿಗಳ ಮೇಲೆ ದಾಳ ಉರುಳಿಸೋದು ಹೇಗೆ..? ಪೊಲೀಸರನ್ನು ಎತ್ತಿಕಟ್ಟೋದು ಹೇಗೆ ಎಂದು ನೋಡುತ್ತಿದ್ದಾರೆ. ಅವರ ಮಾತನ್ನು ಕೇಳಿ ಪೊಲೀಸರು ಕೆಲಸ ಮಾಡಿದ್ರೇ ಅವರಿಗೂ ಮುಂದೆ ಕಷ್ಟ ಆಗುತ್ತೇ.
ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಆಗಾಗ್ಗೆ ದಾಷ್ಟ್ಯದ ಮಾತು ಆಡ್ತಾ ಇರ್ತಾರೆ. ಅವರ ಪಕ್ಷದವರೇ ಅವರಿಗೆ ಸಹಕಾರ ನೀಡಲ್ಲ. ಅವರದ್ದು ವಿಚಿತ್ರವಾದ ವರ್ತನೆ. ಇವರೊಬ್ಬ ಹೋಮ್ ಮಿನಿಸ್ಟರ್ ಎಂದು ಕೇಳಬೇಕಾಗುತ್ತೆ.. ?ಪ್ರತಿಯೊಬ್ಬ ನಾಗರೀಕನ ರಕ್ಷಣೆ ಗೃಹ ಇಲಾಖೆಯ ಜವಾಬ್ದಾರಿ. ಮಾನ, ಪ್ರಾಣ ಕಾಪಾಡಬೇಕಾದ ಜವಾಬ್ದಾರಿ ಇಲಾಖೆಯದ್ದು ಎಂದು ಆರಗ ಹೇಳಿದರು.
--------------ಬಾಕ್ಸ್...
ಇಡೀ ಸರ್ಕಾರ ದೆಹಲಿಯಲ್ಲಿದೆ!2-3 ತಿಂಗಳು ಸಿಎಂ ಬದಲಾವಣೆಗೆ ಹೋಯ್ತು. ಈಗ ಕ್ಯಾಬಿನೆಟ್ ರಚನೆಗೆ ಸರ್ಕಸ್ ನಡೀತಿದೆ. ಇಡೀ ಸರ್ಕಾರ ದೆಹಲಿಯಲ್ಲಿ ಕುಳಿತಿದೆ. ಕರ್ನಾಟಕದಲ್ಲಿ ಸರ್ಕಾರವೇ ಇಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದು ಆರಗ ಜ್ಞಾನೇಂದ್ರ ಟೀಕಿಸಿದರು.
ಜನರು ಬಹುಮತ ಕೊಟ್ಟಾಗ ಕೂಡ ಅಸಹಾಯಕರಾಗಿ ಸರ್ಕಾರ ನಡೆಸುತ್ತಿದ್ದಾರೆ. ಅಧಿಕಾರ ಬೇಕು. ಆದರೆ, ಆಡಳಿತ ನಡೆಸಲಿಕ್ಕೆ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಎಂದು ಹರಿಹಾಯ್ದರು.