ಸಾರಾಂಶ
ದೇಶ ವಿಭಜನೆಯ ದುರಂತ ಕಥೆ ಸಾರುವ ಪ್ರದರ್ಶಿನಿಯನ್ನು ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತದಲ್ಲಿ ದೇಶ ವಿಭಜನೆಗೆ ಹಾಗೂ ನಂತರದ ವಿದ್ಯಮಾನಗಳಿಗೆ ನೇರ ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಮನಸ್ಸು ಮಾಡಿದರೆ ದೇಶಸ ವಿಭಜನೆಯನ್ನು ತಪ್ಪಿಸಬಹುದಿತ್ತು.ಇದು ನಿವೃತ್ತ ಉಪನ್ಯಾಸಕ, ಚಿಂತಕ ಡಾ.ಶಿಕಾರಿಪುರ ಕೃಷ್ಣಮೂರ್ತಿ ಅವರ ಅಭಿಪ್ರಾಯ.
ನಗರದ ಭುವನೇಂದ್ರ ಸಭಾಂಗಣದಲ್ಲಿ ಬುಧವಾರ ‘ಭಾರತ ವಿಭಜನೆಯ ಕರಾಳ ದಿನ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ರಾಜಕೀಯ ಮುಖಂಡ ವಿಕಾಸ್ ಪುತ್ತೂರು, ಪ್ರತ್ಯೇಕತಾವಾದ ಕೇವಲ ಮುಸ್ಲಿಂ ಲೀಗ್‌ಗೆ ಸೀಮಿತವಾಗಿಲ್ಲ. ಶೇ.40ಕ್ಕಿಂತ ಜಾಸ್ತಿ ಮುಸ್ಲಿಂ ಜನಸಂಖ್ಯೆ ಆಗಿರುವಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬರಲಾರಂಭಿಸಿದೆ. ಕೇರಳದ ಮಲಪ್ಪುರಂ, ಮಲಬಾರ್ ಬಳಿಕ ಈಗ ಅಸ್ಸಾಂ, ಮಹಾರಾಷ್ಟ್ರ, ಬಿಹಾರ್, ತೆಲಂಗಾಣಗಳಲ್ಲಿ ಇದೇ ಪರಿಸ್ಥಿತಿ ಕಾಣಿಸಲಾರಂಭಿಸಿದೆ ಎಂದರು. ಸಮನ್ವಯಕಾರ ಸುನಿಲ್ ಕುಲಕರ್ಣಿ ಮಾತನಾಡಿ, ರಾಷ್ಟ್ರೀಯತೆಯ ಕೊರತೆ ಇರುವಲ್ಲಿ ಪ್ರತ್ಯೇಕತಾ ವಾದ ಕಂಡುಬರುತ್ತಿದೆ ಎಂದರು.
ಭಾರತಕ್ಕೆ ಮುಸ್ಲಿಂ ಆಕ್ರಮಣ ಜೊತೆ ಕ್ರಿಶ್ಚಿಯನ್ನರ ಆಗಮನ ಶುರುವಾದಾಗ ಆತಂಕ ಶುರುವಾಯಿತು. ನಂಬಿಕೆಗಳ ವಿರುದ್ಧ ಮುಸ್ಲಿಂ ನೇರ ಆಕ್ರಮಣ ಮಾಡಿದರೆ, ಕ್ರಿಶ್ಚಿಯನ್ನರು ವೈಚಾರಿಕೆಯನ್ನು ಎಳೆದು ತಂದರು. ನಿಜವಾಗಿ ಕುರಾನ್ ಅರ್ಥೈಸದವರು ಧರ್ಮಾಂಧತೆಯನ್ನು ಮಾಡುತ್ತಾರೆ ಎಂದು ಶಿಕಾರಿಪುರ ಕೃಷ್ಣಮೂರ್ತಿ ಹೇಳಿದರು.ವಿಕಾಸ್ ಪುತ್ತೂರು ಮಾತನಾಡಿ, ಇಸ್ಲಾಂನಿಂದಾಗಿ ಭಾರತ ತುಂಡಾಯಿತು. ಮುಸ್ಲಿಮರು ಪ್ರತ್ಯೇಕ ರಾಜ್ಯ, ರಾಷ್ಟ್ರದ ಜೊತೆಗೆ ಪಕ್ಷವನ್ನೂ ಬೇಡಿದರು. ಅದರ ಫಲವಾಗಿ ಮುಸ್ಲಿಂ ಲೀಗ್ ಜನ್ಮತಳೆಯಿತು. ಆಗಲೂ ಅದು ಮುಂದುವರಿದೇ ಇದೆ ಎಂದರು.
ಪ್ರಾಂಶುಪಾಲೆ ಅಕ್ಷತಾ ಪೈ ನಿರೂಪಿಸಿದರು. ದೇಶ ವಿಭಜನೆಯ ದುರಂತ ಕಥೆ ಸಾರುವ ಪ್ರದರ್ಶಿನಿಯನ್ನು ಏರ್ಪಡಿಸಲಾಗಿತ್ತು.