ಕಾಂಗ್ರೆಸ್‌ ಕಾರ್ಯಕರ್ತರು ಭಯಪಡದೇ ಮತ ಕೇಳಿ: ಸಚಿವ ಮಧು ಬಂಗಾರಪ್ಪ

| Published : Mar 28 2024, 12:45 AM IST

ಕಾಂಗ್ರೆಸ್‌ ಕಾರ್ಯಕರ್ತರು ಭಯಪಡದೇ ಮತ ಕೇಳಿ: ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಧು ಸೋಲು ತಂದೆಗೆ ನೆಮ್ಮದಿ ನೀಡಿರಲಿಲ್ಲ. ನಾನು ಅನೇಕರ ಶಾಸಕನಾಗಿ ಮಾಡಿದ್ದೇನೆ. ಮಧುನ ಶಾಸಕನಾಗಿ ಮಾಡಲು ಆಗಲಿಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದರು. ಪ್ರಾರಂಭದಲ್ಲಿ ಸೋಲು ನೀಡಿದ್ದರೂ, ಸೊರಬದ ಜನರು ಕೊನೆಗೆ ದೊಡ್ಡ ಗೆಲುವು ನೀಡಿ ಮಧುನನ್ನು ಮಂತ್ರಿ ಮಾಡಿದರು ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಆನವಟ್ಟಿ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಕೇಳಲು ಕಾರ್ಯಕರ್ತರು ಹೆದರಬೇಕಿಲ್ಲ, ಏಕೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮನೆ-ಮನೆಗೂ ಹೋಗಿ ಭರವಸೆ ನೀಡಿದ್ದ ಗ್ಯಾರಂಟಿಗಳ ಈಡೇರಿಸಿದ್ದೇವೆ ಎಂದು ಸಚಿವ ಎಸ್.ಮಧು ಬಂಗಾರಪ್ಪ ಕಾರ್ಯಕರ್ತರಿಗೆ ವಿಶ್ವಾಸ ತುಂಬಿದರು.

ಬುಧವಾರ ಕುಬಟೂರು ಗ್ರಾಮದ ಅಮ್ಮ ನಿವಾಸ ಆವರಣದಲ್ಲಿ ಹಮ್ಮಿಕೊಂಡಿದ್ದ, ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ ಪೂಜೆ ಇಲ್ಲದೆ ಪಾಳು ಬಿದ್ದ ರಾಜ್ಯದಲ್ಲಿನ ಹಳ್ಳಿ-ಹಳ್ಳಿಗಳ ದೇವಸ್ಥಾನಗಳ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲಿ ಆರಾಧನಾ ಎಂಬ ಯೋಜನೆ ಜಾರಿಗೆ ತಂದು ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗೊಳಿಸಿ, ಪೂಜೆಗಳು ನಡೆಯುವಂತೆ ಮಾಡಿದ್ದರು. ಅವರು ನೀಡಿರುವ ಯೋಜನೆಗಳ ಫಲ ರಾಜ್ಯದ ಜನರಿಗೆ ಇಂದಿಗೂ ಸಿಗುತ್ತಿವೆ ಎಂದರು.

ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಾತನಾಡಿ, ಮಧು ಸೋಲು ತಂದೆಗೆ ನೆಮ್ಮದಿ ನೀಡಿರಲಿಲ್ಲ. ನಾನು ಅನೇಕರ ಶಾಸಕನಾಗಿ ಮಾಡಿದ್ದೇನೆ. ಮಧುನ ಶಾಸಕನಾಗಿ ಮಾಡಲು ಆಗಲಿಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದರು. ಪ್ರಾರಂಭದಲ್ಲಿ ಸೋಲು ನೀಡಿದ್ದರೂ, ಸೊರಬದ ಜನರು ಕೊನೆಗೆ ದೊಡ್ಡ ಗೆಲುವು ನೀಡಿ ಮಧುನನ್ನು ಮಂತ್ರಿ ಮಾಡಿದರು ಎಂದು ಸಂತಸ ವ್ಯಕ್ತಪಡಿಸಿದರು.

ತಂದೆ ಹಾಗೂ ತಮ್ಮ ಬಡವರ ಪರವಾಗಿ ಸೇವೆ ಮಾಡಿದ್ದಾರೆ. ನನಗೂ ಜನರ ಸೇವೆ ಮಾಡುವ ಪಾಲು ಕೊಡಿ, 2014ರ ಚುನಾವಣೆಯಲ್ಲಿ ಜೆಡಿಎಸ್ ಗೆ ಜನರ ಒಲವು ಇರಲಿಲ್ಲ. ಈಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ಎಲ್ಲಾ ಧರ್ಮ, ಜಾತಿ ಜನರನ್ನು ಸಮಾನತೆಯಿಂದ ಕಾಣುವ ಪಕ್ಷವಾಗಿದ್ದು, ನನಗೆ ಜಯಗಳಿಸುವ ವಿಶ್ವಾಸವಿದೆ ಎಂದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ನಾಯಕನಾದವನು ತಮ್ಮ ಕಾರ್ಯಗಳಲ್ಲಿ ಮುನ್ನುಗ್ಗುತ್ತಾ ಹೋಗುವ ಜೊತೆಗೆ ತಾನು ಬಂದಿರುವ ದಾರಿ ತಿರುಗಿ ನೋಡುವ ಅಭ್ಯಾಸ ಇಟ್ಟುಕೊಳ್ಳಬೇಕು ಇಲ್ಲವಾದಲ್ಲಿ ನಮಗೆ ತಿಳಿಯದಂತೆ ನಮ್ಮ ಶ್ರಮದಲ್ಲಿ ಬೇರೊಬ್ಬರು ಲಾಭ ತೆಗೆದುಕೊಂಡು ಬಿಡುತ್ತಾರೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿ ಗೀತಾ ಶಿವಮೊಗ್ಗ ಜಿಲ್ಲೆ ತವರು ಮನೆ ಮಗಳು ಅವಳನ್ನು ಖಾಲಿ ಕೈಲಿ ಕಳಿಸುವುದು ತವರಿಗೆ ಅವಮಾನ ಆದ್ದರಿಂದ ಅವರನ್ನು ಬಹುಮತದಿಂದ ಲೋಕಸಭೆಗೆ ಗೆಲ್ಲಿಸಿ ಕಳಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ ಬಿ. ಪಾಟೀಲ್ ಬಿಳಗಲಿ, ಅಣ್ಣಪ್ಪ, ಶಿವಮೂರ್ತಿ, ಮುಖಂಡರಾದ ಕೆ.ಪಿ ರುದ್ರಗೌಡ, ಆರ್.ಸಿ ಪಾಟೀಲ್, ಜೆ. ಚಂದ್ರಶೇಖರಪ್ಪ, ಎಚ್.ಸಿ ಪಾಟೀಲ್ , ಶಿವಲಿಂಗೇಗೌಡ, ವೀರೇಶ್ ಕೊಟಗಿ, ಮಂಜಪ್ಪ ಮರದರ್, ಎಂ.ಡಿ ಶೇಖರ್, ಗಣಪತಿ ಮತ್ತಿತರಿದ್ದರು.

ಬಗರ್ ಹುಕುಂ, ಸೂಪ್ಪಿನಬೆಟ್ಟಗಳಲ್ಲಿ ಸಾಗುವಳಿ ರೈತರ ಹಾಗೂ ಮನೆ ಕಟ್ಟಿಕೊಂಡಿರುವ ಹಾಗೂ ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸಲು ನಾನು ಬದ್ಧ. ಕೇಂದ್ರ ಸರ್ಕಾರದ ಸಹಕಾರವೂ ಬೇಕಾದ್ದರಿಂದ ಗೀತಾಕ್ಕನನ್ನು ಶಿವಮೊಗ್ಗದಲ್ಲಿ ಗೆಲ್ಲಿಸಬೇಕು.

ಎಸ್.ಮಧು ಬಂಗಾರಪ್ಪ, ಶಿಕ್ಷಣ ಸಚಿವ