ಆರ್ಥಿಕ ಪ್ರಗತಿ ಆ ದೇಶದ ಕಾರ್ಮಿಕ ವರ್ಗದ ಮೇಲೆ ಅವಲಂಬಿತ

| Published : May 02 2024, 12:20 AM IST

ಸಾರಾಂಶ

ಕಾರ್ಮಿಕರ ಬೆವರ ಹನಿ ನಿಸ್ವಾರ್ಥ ಸೇವೆಗೆ ಗೌರವ ನೀಡುವ ಸಲುವಾಗಿ ಮೇ 1ರಂದು ಕಾರ್ಮಿಕರ ದಿನವನ್ನು ಆಚರಣೆ ನಡೆಸಲಾಗುತ್ತಿದೆ. ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ದಿ ನಿಂತಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಜಾರಿಯಾಗಿದ್ದರೂ ಸಹ ನಿರಂತರವಾಗಿ ನಡೆಯುತ್ತಿರುವ ಕಾರ್ಮಿಕರ ಶೋಷಣೆಯಿಂದ ಇನ್ನೂ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವಿಸುವಂತಾಗಿದೆ.

- ಕಾಂಗ್ರೆಸ್ ನ ಕಾರ್ಮಿಕ ವರ್ಗದ ಅಧ್ಯಕ್ಷ ಗೋವಿಂದರಾಜು ಅಭಿಮತ

ಕನ್ನಡಪ್ರಭ ವಾರ್ತೆ ನಂಜನಗೂಡುಪ್ರತಿಯೊಂದು ದೇಶದ ಆರ್ಥಿಕ ಪ್ರಗತಿ ಆ ದೇಶದ ಕಾರ್ಮಿಕ ವರ್ಗದ ಮೇಲೆ ಅವಲಂಬಿತವಾಗಿದೆ, ಸರ್ಕಾರಗಳು ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಸಹ ಕಾರ್ಮಿಕರ ಶೋಷಣೆಯಿಂದಾಗಿ ಕಾರ್ಮಿಕ ವರ್ಗ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವಿಸುವಂತಾಗಿದೆ ಎಂದು ಕಾಂಗ್ರೆಸ್ ನ ಕಾರ್ಮಿಕ ವರ್ಗದ ಅಧ್ಯಕ್ಷ ಗೋವಿಂದರಾಜು ಹೇಳಿದರು.ಪಟ್ಟಣದ ಆರ್.ಪಿ. ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕಾರ್ಮಿಕರ ಬೆವರ ಹನಿ ನಿಸ್ವಾರ್ಥ ಸೇವೆಗೆ ಗೌರವ ನೀಡುವ ಸಲುವಾಗಿ ಮೇ 1ರಂದು ಕಾರ್ಮಿಕರ ದಿನವನ್ನು ಆಚರಣೆ ನಡೆಸಲಾಗುತ್ತಿದೆ. ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ದಿ ನಿಂತಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಜಾರಿಯಾಗಿದ್ದರೂ ಸಹ ನಿರಂತರವಾಗಿ ನಡೆಯುತ್ತಿರುವ ಕಾರ್ಮಿಕರ ಶೋಷಣೆಯಿಂದ ಇನ್ನೂ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವಿಸುವಂತಾಗಿದೆ. ಅಲ್ಲದೆ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರುವ ರೈತರು, ನಗರ ಪ್ರದೇಶದಲ್ಲಿ ದುಡಿಯುವ ಹೋಟೆಲ್ ಕಾರ್ಮಿಕರು, ಕೂಲಿ ಕಾರ್ಮಿಕರ ಪರಿಸ್ಥಿತಿ ಹೇಳತೀರದಾಗಿದೆ. ಕನಿಷ್ಠ ಕೂಲಿ ಕಾಯ್ದೆ ಜಾರಿಯಾಗಿದ್ದರೂ ಸಹ ಅದು ಸಮರ್ಪಕವಾಗಿ ಜಾರಿಯಾಗದ ಕಾರಣ ಶೋಷಣೆಯಲ್ಲೇ ಬದುಕು ಸಾಗಿಸುವಂತಾಗಿದೆ. ಆದ್ದರಿಂದ ಸರ್ಕಾರಗಳು ದುಡಿಯುವ ಶ್ರಮಿಕ ವರ್ಗಕ್ಕೆ ಉಪಯೋಗವಾಗುವಂತಹ ಕಲ್ಯಾಣ ಕಾರ್ಮಿಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಶ್ರಮಿಕರಿಗೆ ಗೌರವ ಸಲ್ಲಿಸಬೇಕಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್ ಮಾತನಾಡಿ, ಕಾರ್ಮಿಕರ ಕಲ್ಯಾಣ ನಿಧಿಯನ್ನು ಸ್ಥಾಪಿಸುವ ಜೊತೆಗೆ ಕಾರ್ಮಿಕರ ಪರಿಶ್ರಮಕ್ಕೆ ಬೆಲೆ ನೀಡಿದ್ದು, ಕಾಂಗ್ರೆಸ್ ಸಕಾರ ಮಾತ್ರ. ಕಾರ್ಮಿಕರ ಆರೋಗ್ಯ ಕಾಳಜಿ ದೃಷ್ಟಿಯಿಂದ ಇಎಸ್.ಐ ಆಸ್ಪತ್ರೆಗಳನ್ನು ಸ್ಥಾಪಿಸಿದೆ. ಕಾರ್ಮಿಕರ ಹೋರಾಟದಿಂದ ಬಂದ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಮಂತ್ರಿಯಾಗಿದ್ದ ವೇಳೆ ಇಎಸ್.ಐ ಆಸ್ಪತ್ರೆಗಳನ್ನು ಉನ್ನತ ದರ್ಜೆಗೆ ಏರಿಸಿದರು. ಅಲ್ಲದೆ ದಿ. ಆರ್. ಧ್ರುವನಾರಾಯಣ್ ಅವರ ಶ್ರಮದಿಂದ ನಂಜನಗೂಡಿನಲ್ಲಿ 5 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಇಎಸ್.ಐ ಆಸ್ಪತ್ರೆ ಸ್ಥಾಪನೆಯಾಗಿದೆ. ಜೊತೆಗೆ ಅಸಂಘಟಿತ ಕಾರ್ಮಿಕರ ಅನುಕೂಲಕ್ಕಾಗಿ ಹಿಜ್ಜತ್ ಪಾಸ್ ಗಳನ್ನು ವಿತರಿಸಿ ರೈಲಿನಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿದ್ದರು ಎಂದರು.

ಕಾರ್ಮಿಕ ದಿನಾಚರಣೆ ಅಂಗವಾಗಿ ನಿವೃತ್ತ ಕಾರ್ಮಿಕರ ಸತೀಶ್ ಮತ್ತು ನಿವೃತ್ತ ಪೌರ ಕಾರ್ಮಿಕರಾದ ಗೌರಮ್ಮ ಅವರನ್ನು ಸನ್ಮಾನಿಸುವ ಮೂಲಕ ಕಾರ್ಮಿಕ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ದೊರೆಸ್ವಾಮಿನಾಯಕ, ಶಿವಪ್ಪದೇವರು, ಅಶೋಕ್, ಉಪ್ಪಿನಹಳ್ಳಿ ಶಿವಣ್ಣ, ರಂಗಸ್ವಾಮಿ, ವೀರೇಂದ್ರ, ಶ್ರೀಕಂಠ, ರಾಜೇಶ್, ನಂದೀಶ್, ಪುಟ್ಟಸ್ವಾಮಿ, ಕೃಷ್ಣ, ಶಿವಕುಮಾರ್, ಬಸವರಾಜು, ಸತೀಶ್, ರಮೇಶ್ ಇದ್ದರು.