ಪ್ರಜ್ಞಾವಂತರು ರಕ್ತದಾನದ ಅರಿವು ಹೊಂದಿ

| Published : Nov 28 2024, 12:32 AM IST

ಸಾರಾಂಶ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜನ್ಮದಿನದ ಪ್ರಯುಕ್ತ ಬಿಜೆಪಿ ಹಾಗೂ ರಕ್ತನಿಧಿ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದು, ಪ್ರಹ್ಲಾದ ಜೋಶಿ ಅವರು ಯಾವುದೇ ಅದ್ಧೂರಿ ಕಾರ್ಯಕ್ರಮ ಆಯೋಜಿಸುವುದು ಬೇಡ. ಸಮಾಜಮುಖಿ ಕಾರ್ಯ ಆಗಬೇಕು ಎಂಬುದು ಅವರ ಇಚ್ಛೆಯಾಗಿದೆ.

ಹುಬ್ಬಳ್ಳಿ:

ಪ್ರಜ್ಞಾವಂತರು ರಕ್ತದಾನದ ಕುರಿತು ಅರಿವು ಹೊಂದುವುದು ಅವಶ್ಯವಾಗಿದೆ. ಜನ್ಮದಿನಾಚರಣೆ, ಶುಭ-ಸಮಾರಂಭ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ರಕ್ತದಾನ ಮಾಡುವ ಇಚ್ಛಾಶಕ್ತಿ ಬೆಳೆಸಿಕೊಳ್ಳುವಂತೆ ಕ್ಷಮತಾ ಸಂಸ್ಥೆಯ ಅಧ್ಯಕ್ಷ ಗೋವಿಂದ ಜೋಶಿ ಹೇಳಿದರು.

ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬುಧವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಹೋದರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜನ್ಮದಿನದ ಪ್ರಯುಕ್ತ ಬಿಜೆಪಿ ಹಾಗೂ ರಕ್ತನಿಧಿ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದು, ಪ್ರಹ್ಲಾದ ಜೋಶಿ ಅವರು ಯಾವುದೇ ಅದ್ಧೂರಿ ಕಾರ್ಯಕ್ರಮ ಆಯೋಜಿಸುವುದು ಬೇಡ. ಸಮಾಜಮುಖಿ ಕಾರ್ಯ ಆಗಬೇಕು ಎಂಬುದು ಅವರ ಇಚ್ಛೆಯಾಗಿದೆ. ಹೀಗಾಗಿ ಇಂತಹ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ರಕ್ತದಾನದ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಓರ್ವ ವ್ಯಕ್ತಿ ರಕ್ತದಾನ ಮಾಡುವುದರಿಂದ ಅದು ಮೂವರಿಗೆ ಅನುಕೂಲವಾಗುತ್ತದೆ. ಈ ಕುರಿತು ಪ್ರತಿಯೊಬ್ಬರೂ ಅರಿವು ಹೊಂದುವುದರೊಂದಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.

ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪ್ರತಿ ವರ್ಷ ತಮ್ಮ ಜನ್ಮದಿನದ ಪ್ರಯುಕ್ತ ಇಂತಹ ಕಾರ್ಯಗಳಿಗೆ ಒತ್ತು ನೀಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.

ಬೆಳಗ್ಗೆ 9ರಿಂದ ಸಂಜೆಯ ವರೆಗೆ ನಡೆದ ರಕ್ತದಾನ ಶಿಬಿರದಲ್ಲಿ 65 ಜನರು ರಕ್ತದಾನ ಮಾಡಿದರು. ಈ ವೇಳೆ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ರಾಜು ಕೋರ‍್ಯಾಣಮಠ, ಮುರಗೇಶ ಹೊರಡಿ, ಚಂದ್ರಶೇಖರ ಮನಗುಂಡಿ, ಡಾ. ರವೀಂದ್ರ ಯಲ್ಕಾನ, ರಾಜು ಜರತಾರಘರ, ಚಂದ್ರ ನೂಲ್ವಿ, ಅಣ್ಣಪ್ಪ ಗೋಕಾಕ, ರಾಜೇಶ್ವರಿ ಸಾಲಗಟ್ಟಿ, ಜಗದೀಶ ಕಂಬಳಿ, ಸೀಮಾ ಲದ್ವಾ, ರೂಪಾ ಶೆಟ್ಟಿ, ವಿಜಯಲಕ್ಷ್ಮೀ, ಭಾರತಿ ಯಲ್ಕಾನ್, ಅಕ್ಕಮ್ಮಾ ಹೆಗಡೆ ಸೇರಿದಂತೆ ಹಲವರಿದ್ದರು.