ಸರಗೂರಿನ ಅಭಿವೃದ್ಧಿಗಾಗಿ ಕೋಟ್ಯಂತರ ರು. ವೆಚ್ಚ

| Published : Nov 28 2024, 12:32 AM IST

ಸಾರಾಂಶ

ಸರಗೂರು ಭಾಗಕ್ಕೆ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಿದ್ದು, ಮಿನಿ ವಿಧಾನಸೌಧಕ್ಕೆ 8.50 ಕೋಟಿ ಹಣ ಬಿಡುಗಡೆ, ನೂರು ಬಿಡ್ ಆಸ್ಪತ್ರೆ ನಿರ್ಮಾಣಕ್ಕೆ ಹಣ ಬಿಡುಗಡೆ ಹಾಗೂ ಫೈರ್ ಬ್ರಿಗೇಡ್, ಕೋರ್ಟ್ ನಿರ್ಮಾಣ ಕಾಮಗಾರಿಗೆ ಮಂಜುರಾತಿ

ಕನ್ನಡಪ್ರಭ ವಾರ್ತೆ ಸರಗೂರು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಕೋಟ್ಯಂತರ ರು. ಗಳ ವೆಚ್ಚದಲ್ಲಿ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಲಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ಪಟ್ಟಣದ ಪಪಂ ಮುಂಭಾಗದಲ್ಲಿ ಪಟ್ಟಣದ ವಿನಾಯಕ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಅವರು ಮಾತನಾಡಿದರು.ಸರಗೂರು ಭಾಗಕ್ಕೆ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಿದ್ದು, ಮಿನಿ ವಿಧಾನಸೌಧಕ್ಕೆ 8.50 ಕೋಟಿ ಹಣ ಬಿಡುಗಡೆ, ನೂರು ಬಿಡ್ ಆಸ್ಪತ್ರೆ ನಿರ್ಮಾಣಕ್ಕೆ ಹಣ ಬಿಡುಗಡೆ ಹಾಗೂ ಫೈರ್ ಬ್ರಿಗೇಡ್, ಕೋರ್ಟ್ ನಿರ್ಮಾಣ ಕಾಮಗಾರಿಗೆ ಮಂಜುರಾತಿ ಹಾಗೂ ಸರಗೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲ ಇಪ್ಪತ್ತೈದು ಕಿ.ಮೀ. ವರೆಗೆ ಪ್ರತಿನಿತ್ಯ ಕುಡಿಯುವ ನೀರಿಗೆ ಸುಮಾರು 16 ಕೋಟಿಗೂ ಹೆಚ್ಚು ಹಣ ಮಂಜುರಾತಿ ಆಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಪಪಂ ಸದಸ್ಯ ಶ್ರೀನಿವಾಸ್ ಮಾತನಾಡಿದರು.ಅಧ್ಯಕ್ಷತೆಯನ್ನು ವಿನಾಯಕ ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮಹದೇವ ವಹಿಸಿದ್ದರು. ಪಟ್ಟಣದ ಧ್ರುವತಾರೆ ಮೆಲೋಡಿಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.ಪಪಂ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಶ್ರೀನಿವಾಸ್, ಚೆಲುವಕೃಷ್ಣ, ನೂರಾಳಸ್ವಾಮಿ, ಮಾಜಿ ಸದಸ್ಯ ರಮೇಶ್, ನವೀನ್ ಕುಮಾರ್, ವಾಹನ ಚಾಲಕರ ಸಂಘದ ಅಧ್ಯಕ್ಷ ಬಿರವಾಳ್ ಚಿಕ್ಕಣ್ಣ, ಆರ್ಯ ಈಡಿಗರ ಸಮಾಜದ ಅಧ್ಯಕ್ಷ ಹಾಗೂ ಸರಗೂರು ಟೌನ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್. ನಾಗರಾಜು, ನಾಯಕ ಜನಾಂಗದ ಮುಖಂಡರಾದ ಶಂಭುಲಿಂಗ ನಾಯಕ, ಚೆಲುರಾಜು, ಪುಟ್ಟರಾಜು ಬೀದಿ ಬದಿ ವ್ಯಾಪಾರಿ ಸಂಘದ ಗೌರವಾಧ್ಯಕ್ಷ ಬೈರನಾಯಕ, ಸಂಘದ ಖಜಾಂಚಿ ರಂಗಸ್ವಾಮಿ, ಉಪಾಧ್ಯಕ್ಷ ಗೋವಿಂದರಾಜು, ಮಹದೇವಮ್ಮ, ಕಾರ್ಯದರ್ಶಿ ಸತೀಶ್, ಮೈಲಾರಿ ಆನಂದ, ನಂದೀಶ್, ಗಾಯಕ ರವಿಕುಮಾರ್ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.