ಸಾರಾಂಶ
ಸವಣೂರು: ಜೀವನದಲ್ಲಿ ಜ್ಞಾನ ಮತ್ತು ಧ್ಯಾನ ಎರಡೂ ಮುಖ್ಯ. ಇದರಿಂದ ಸ್ಥಿತಪ್ರಜ್ಞೆ ಬರುತ್ತದೆ. ಬದುಕಿನಲ್ಲಿ ದುಃಖವೇ ಬರುವುದಿಲ್ಲ. ಶರಣ ಸಂಸ್ಕೃತಿಯಲ್ಲಿ ಇದರ ಬಗ್ಗೆ ಚರ್ಚೆಯಾಗಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ಪಟ್ಟಣದಲ್ಲಿ ಲಿಂ. ಶ್ರೀ ಗುರು ರಾಚೋಟೇಶ್ವರ ಸ್ವಾಮಿಗಳ 48ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಸಮಾರಂಭ ಹಾಗೂ ಕಲ್ಪವೃಕ್ಷ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಜೀವನದಲ್ಲಿ ಹಳೆಬೇರು ಹೊಸ ಚಿಗುರು ಎನ್ನುವಂತೆ ಇಂದಿನ ಸಮಾರಂಭ ಸೇರಿದೆ. ಹಿರಿಯ ಜಗದ್ಗುರುಗಳ ಶರಣ ಉತ್ಸವ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಸಾಧಕರು, ಜನಪ್ರತಿನಿಧಿಗಳ ನಡುವೆ ಸಮ್ಮಿಲನ ಮಾಡುತ್ತಾರೆ ಎಂದರು.ಸಾಧನೆ ಮಾಡಲು ಗುರು ಇರಬೇಕು. ಮುಂದೆ ಗುರಿ ಇರಬೇಕು. ನಾವು ಹಲವಾರು ಕನಸುಗಳನ್ನು ಕಾಣುತ್ತೇವೆ. ಅದರಲ್ಲಿ ಯಾವುದು ನ್ಯಾಯಸಮ್ಮತ ಇದೆಯೊ ಅದರ ಬಗ್ಗೆ ಯೋಚನೆ ಮಾಡಬೇಕು. ಕನಕದಾಸರು ದಾಯಾದಿಗಳ ಜತೆಗೆ ಎರಡು ಬಾರಿ ಯದ್ಧ ಮಾಡಿದಾಗ ಅವರಿಗೆ ತೀವ್ರ ಗಾಯವಾಗುತ್ತದೆ. ಅವರಿಗೆ ಜ್ಞಾನೋದಯವಾಗಿ ಎಲ್ಲ ಕಡೆಗೆ ತಿರುಗಿ ದಾಸರಾಗುತ್ತಾರೆ. ಅವರು ತಮ್ಮನ್ನು ಕುರಿತು ಒಂದು ಮಾತು ಹೇಳುತ್ತಾರೆ, ಆ ಒಂದು ಸೋಲಿನಲ್ಲಿ ಹಲವಾರು ಗೆಲವು ಕಂಡೆ ನನ್ನನ್ನು ನಾನೆ ಗೆದ್ದುಕೊಂಡೆ ಅಂತ. ತಮ್ಮ ಕುರಿತು ತಾವೇ ಹೇಳಿದ್ದಾರೆ ಎಂದರು.ಡಾ. ಮಲ್ಲಿಕಾರ್ಜುನ ಸ್ವಾಮಿಗಳು, ಚನ್ನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಯಾಸೀರಖಾನ್ ಪಠಾಣ, ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ ಸೇರಿದಂತೆ ಹಲವಾರು ಶ್ರೀಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಉನ್ನತ ವ್ಯಕ್ತಿಗಳ ಆದರ್ಶ ಪಾಲಿಸಲಿ
ಶಿಗ್ಗಾಂವಿ: ವಿದ್ಯಾರ್ಥಿಗಳು ಉನ್ನತ ವ್ಯಕ್ತಿಗಳ ಮಾದರಿ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ನಿವೃತ್ತ ನ್ಯಾಯಾಧೀಶ ಮಲ್ಲಿಕಾರ್ಜುನ ಸಂಶಿ ತಿಳಿಸಿದರು.ಪಟ್ಟಣದ ಐತಿಹಾಸಿಕ ಪಿಎಂಶ್ರೀ ಸರ್ಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ನಂ. ೧ರಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಒಂದೇ ವೃತ್ತಿ ಆಯ್ಕೆ ಮಾಡದೇ ಬೇರೆ ಬೇರೆ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಿ. ಅಂದಾಗ ಜೀವನ ನಿರ್ವಹಣೆ ಸುಗಮವಾಗುತ್ತದೆ. ಅಲ್ಲದೇ ಯಾವುದೇ ವೃತ್ತಿಯನ್ನು ಅಲ್ಲಗಳೆಯದಿರಿ. ಜತೆಗೆ ಮಕ್ಕಳಿಗೆ ಜಿಂಕ್ ಆಹಾರದ ಬದಲು ಪೌಷ್ಟಿಕಾಂಶಯುಕ್ತ ಆಹಾರದ ಕಡೆಗೆ ಪಾಲಕರು ಗಮನ ಹರಿಸಬೇಕು ಎಂದರು.ವಿರಕ್ತಮಠದ ಸಂಗನಬಸವ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಮುಖ್ಯೋಪಾಧ್ಯಾಯ ಎಂ.ಎಂ. ದೇವಕಿಗೌಡ್ರ ವರದಿ ವಾಚಿಸಿದರು. ಪುರಸಭೆ ಸದಸ್ಯ ಪರುಶರಾಮ ಸೊನ್ನದ ಮಾತನಾಡಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪುರಸಭೆ ಸದಸ್ಯರಾದ ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಸಿಆರ್‌ಪಿ ಎಸ್.ವೈ. ಮಿಸಿ, ಬಿ.ಬಿ. ಕಟ್ಟಿಮನಿ, ಸಾವಿತ್ರಿ ಎಸ್‌ಡಿಎಂಸಿ ಅಧ್ಯಕ್ಷ ಮಹಾರುದ್ರಪ್ಪ ಕೊಡ್ಲಿವಾಡ, ಉಪಾಧ್ಯಕ್ಷೆ ಪವಿತ್ರಾ ಹಾವೇರಿ, ಸದಸ್ಯರಾದ ಸಾವಿತ್ರಿ ಕಮ್ಮಾರ, ರಾಜು ಬಿಂದ್ಲಿ, ಪ್ರಕಾಶ ಬಾವಿಕಟ್ಟಿ, ಸಂಕಪ್ಪ ಗಂಟೆಪ್ಪನವರ, ಮಂಜುನಾಥ ಬಂಡಿವಡ್ಡರ, ಹನುಮಂತಪ್ಪ ಧಾರವಾಡ, ರೇಖಾ ಪೂಜಾರ, ಮಮತಾ, ಭಜಂತ್ರಿ, ಮೆಹಬೂಬಿ, ಅಶೋಕ ಓಲೇಕಾರ, ಸಂಜೀವ ಮಣ್ಣಣ್ಣವರ, ವಿ.ಎಸ್. ಭದ್ರಶೆಟ್ಟಿ, ಹೇಮಾ ಪೂಜಾರ, ಧರ್ಮರಾಜ ಬಡಿಗೇರ ಇತರರು ಇದ್ದರು.