ಸಾರಾಂಶ
ಜೀವ ಸಂಕುಲ ಮತ್ತು ಪರಿಸರದ ನಡುವಿನ ಹೊಕ್ಕಳ ಸಂಬಂಧವಿದೆ. ಜೀವ ಸಂಕುಲದ ಉಳಿಸಿಕೊಳ್ಳಲು ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ ಎಂದು ಪ್ರಭಾರಿ ಉಪಪ್ರಾಚಾರ್ಯ ಎಚ್.ಎಂ. ಹಾಲನ್ನವರ ಹೇಳಿದರು.
ಕನ್ನಡಪ್ರಭ ವಾರ್ತೆ ಅಮೀನಗಡ
ಜೀವ ಸಂಕುಲ ಮತ್ತು ಪರಿಸರದ ನಡುವಿನ ಹೊಕ್ಕಳ ಸಂಬಂಧವಿದೆ. ಜೀವ ಸಂಕುಲದ ಉಳಿಸಿಕೊಳ್ಳಲು ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ ಎಂದು ಪ್ರಭಾರಿ ಉಪಪ್ರಾಚಾರ್ಯ ಎಚ್.ಎಂ. ಹಾಲನ್ನವರ ಹೇಳಿದರು.ಪರಿಸರ ದಿನಾಚರಣೆ ನಿಮಿತ್ತ ಸಮೀಪದ ಸೂಳೇಬಾವಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌ.ವಿ) ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕತೆಯ ನೆಪದಲ್ಲಿ ವಾತಾವರಣ ತಂಪಾಗಿಡುವ ಸಾಮರ್ಥ್ಯ ಹೊಂದಿದ ಗಿಡ-ಮರಗಳ ಬುಡಕ್ಕೆ ಕೊಡಲಿ ಹಾಕಿ ರಸ್ತೆ, ರೈಲುಮಾರ್ಗ, ನಗರಗಳನ್ನು ಎಗ್ಗಿಲ್ಲದೇ ನಿರ್ಮಿಸಲಾಗುತ್ತಿದೆ. ಮರಗಳ ಮಾರಣಹೋಮದಿಂದಾಗಿ ಪರಿಸರ ತೀವೃತರವಾಗಿ ಮಾಲಿನ್ಯಗೊಳ್ಳುತ್ತಿದೆ. ಸಸಿಗಳನ್ನು ನೆಟ್ಟು ಪೋಷಿಸುವುದರಿಂದ ಒಂದಷ್ಟಾದರೂ ಜೀವ ಸಂಕುಲದ ಮೇಲಾಗುವ ದುಷ್ಪರಿಣಾಮಗಳನ್ನು ತಗ್ಗಿಸಬಹುದಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಕ ಸಿಬ್ಬಂದಿ ವಿದ್ಯಾರ್ಥಿಗಳು 20 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.