ಪಾದರಸದಂತೆ ಪ್ರತಿ ಕ್ಷಣವೂ ಸದಾ ರೋಗಿಗಳ ಬಗ್ಗೆ ಚಿಂತನೆ ಮಾಡುವ ಗುಣವುಳ್ಳ ರೆಡ್ಡಿ ಅವರು ಇನ್ನಷ್ಟು ದಿನ ಇಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಾಗಿತ್ತು

ಕುಷ್ಟಗಿ: ವೈದ್ಯ ವೃತ್ತಿಯನ್ನು ಉದ್ಯೋಗವೆಂದು ಭಾವಿಸದೆ ಸೇವೆಯೆಂದು ಭಾವಿಸುವ ಮೂಲಕ ಉತ್ತಮ ಕಾರ್ಯ ಮಾಡಬೇಕು ಎಂದು ನಿವೃತ್ತ ವೈದ್ಯ ಡಾ. ಕೆ.ಎಸ್.ರೆಡ್ಡಿ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ತಾಲೂಕಾಸ್ಪತ್ರೆಯಲ್ಲಿ ನಡೆದ ಬಿಳ್ಕೋಡುಗೆಯ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು

ಆಸ್ಪತ್ರೆಯ ಸಿಬ್ಬಂದಿ ರೋಗಿಗಳಿಗೆ ಉತ್ತಮ ಆರೈಕೆ ಮಾಡಬೇಕು ಎಂದ ಅವರು, ನಾನು ಇಲ್ಲಿ ಅನೇಕ ವರ್ಷಗಳ ಕೆಲಸ ಮಾಡಿದ್ದು, ಇಲ್ಲಿನ ಸಿಬ್ಬಂದಿಗಳ ಸಹಕಾರ ಉತ್ತಮವಾಗಿತ್ತು ಹೊಸದಾಗಿ ಬಂದಿರುವ ವೈದ್ಯರಿಗೆ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು.

ವೈದ್ಯ ಡಾ.ಚಂದ್ರಶೇಖರ ದಂಡಿ ಮಾತನಾಡಿ ಪಾದರಸದಂತೆ ಪ್ರತಿ ಕ್ಷಣವೂ ಸದಾ ರೋಗಿಗಳ ಬಗ್ಗೆ ಚಿಂತನೆ ಮಾಡುವ ಗುಣವುಳ್ಳ ರೆಡ್ಡಿ ಅವರು ಇನ್ನಷ್ಟು ದಿನ ಇಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಾಗಿತ್ತು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೋಟೂರ, ಬಾಲಾಜಿ ಬಳಿಗಾರ ಮಾತನಾಡಿದರು.

ಈ ಸಂದರ್ಭ ವೈದ್ಯಾಧಿಕಾರಿ ಡಾ. ಚಂದ್ರಕಲಾ,ಡಾ. ಮಹಾಂತೇಶ ಬುಕನಟ್ಟಿ, ಡಾ. ಮನೋಜ ಎಂ, ಡಾ.ರವಿಕುಮಾರ ಪಾಟೀಲ, ಡಾ.ಸುಮಾ ದಂಡಿ, ಡಾ.ಅಕೀಲಾ, ಜಯಶ್ರೀ ಬಿಸನಾಳ, ರಹಿಮಾನಸಾಬ .ಶ್ಯಾಮಲಾ ನಾಯಕ, ಶ್ರೀಶೈಲ ಕೆಳಗಡೆ, ನಾಗರತ್ನ, ಶ್ರೀಶೈಲ, ಫಕ್ರುದ್ದೀನ, ಹುಚ್ಚಿರಪ್ಪ, ಭುವನೇಶ್ವರಿ ಸೇರಿದಂತೆ ಅನೇಕರು ಇದ್ದರು.

ಇಲಾಖೆ ಪರವಾಗಿ ವೈದ್ಯರು ಡಾ.ಕೆ.ಎಸ್.ರೆಡ್ಡಿಯವರನ್ನು ಸನ್ಮಾನಿಸಿ ಗೌರವಿಸಿದರು ಹಾಗೂ ಪತ್ರಕರ್ತರ ಸಂಘದವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರವಿಂದ್ರ ಬಾಕಳೆ, ತಾಲೂಕಾಧ್ಯಕ್ಷ ಪವಾಡೆಪ್ಪ ಚೌಡ್ಕಿ, ಪ್ರಧಾನ ಕಾರ್ಯದರ್ಶಿ ಅನಿಲಕುಮಾ ಕಮ್ಮಾರ, ಶರಣಪ್ಪ ಲೈನದ, ಭೀಮಸೇನರಾವ್‌ ಕುಲಕರ್ಣಿ,ಸಂಗಮೇಶ ಲೂತಿಮಠ, ಭೀಮನಗೌಡ ಮಂಡಲಮರಿ ಸೇರಿದಂತೆ ಅನೇಕರು ಇದ್ದರು.