ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವೆ: ಕಂದಕೂರು

| Published : Mar 06 2024, 02:18 AM IST

ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವೆ: ಕಂದಕೂರು
Share this Article
  • FB
  • TW
  • Linkdin
  • Email

ಸಾರಾಂಶ

ಗುರುಮಠಕಲ್ ಪಟ್ಟಣದಲ್ಲಿ ಆರ್‌ಐಡಿಎಫ್-29 ಯೋಜನೆಯಡಿಯಲ್ಲಿ ನಡೆದ ಸರ್ಕಾರಿ ಆಸ್ಪತ್ರೆಯ ಆವರಣದ ಸಿಸಿ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಶಾಸಕ ಶರಣಗೌಡ ಕಂದಕೂರು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಮತಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.

ಪಟ್ಟಣದ ಹೊರವಲಯದಲ್ಲಿ 2023-24ನೇ ಸಾಲಿನ ಆರ್‌ಐಡಿಎಫ್-29 ಯೋಜನೆಯಡಿ ಅಂದಾಜು 2 ಕೋಟಿ ರು.ಗಳ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ಮತ್ತು ಗೋದಾಮು ಹಾಗೂ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ 35 ಲಕ್ಷ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದ ಸಿಸಿ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ರೈತರಿಗೆ ಅನುಕೂಲವಾಗಲು 3 ರೈತ ಭವನಗಳು ಮಂಜೂರಾಗಿವೆ ಎಂದರು.

ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ರೈತರಿಂದ ಸ್ಪಿಂಕ್ಲರ್ ಬೇಡಿಕೆ ಹಿನ್ನೆಲೆಯಲ್ಲಿ ಕೃಷಿ ಸಚಿವರನ್ನು ಭೇಟಿಯಾಗಿ ಹೆಚ್ಚುವರಿಯಾಗಿ 2 ಸಾವಿರ, ಇನ್ನೊಮ್ಮೆ ಬೆಳಗಾವಿ ಅಧಿವೇಶನದ ಬಳಿಕ 6 ಸಾವಿರ ಸ್ಪಿಂಕ್ಲರ್‌ಗಳನ್ನು ಒದಗಿಸಿ ಅನುಕೂಲ ಕಲ್ಪಿಸಲಾಗಿದೆ. ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಸೂಚಿಸಿದರು.

ಜಿಲ್ಲೆಯ 76 ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ತಕ್ಷಣವೇ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

ಕೃಷಿ ಜಂಟಿ ನಿರ್ದೇಶಕ ಕೆ.ಎಚ್. ರವಿ ಮಾತನಾಡಿ, ರೈತ ಸಂಪರ್ಕ ಕೇಂದ್ರ ಸಾಕಷ್ಟು ಅಗತ್ಯವಿತ್ತು. ಇದರ ನಿರ್ಮಾಣಕ್ಕೆ ಮಾಜಿ ಶಾಸಕ ದಿ. ನಾಗನಗೌಡ ಕಂದಕೂರು ಅವರು ಸ್ಥಳ ಗುರುತಿಸಿಕೊಟ್ಟಿದ್ದು, ಶಾಸಕ ಶರಣಗೌಡ ಕಂದಕೂರು ಅವರು ನಿರ್ಮಾಣಕ್ಕೆ ಚಾಲನೆ ನೀಡಿದ್ದು, ರೈತರಿಗೆ ಅನುಕೂಲವಾಗಲಿದೆ ಎಂದರು.

ಈ ವೇಳೆ ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ನಾಗನಗೌಡ ಕಂದಕೂರು ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.

ಕೆಆರ್ ಐಡಿಎಲ್ ಅಧಿಕಾರಿ ಶಿವರಾಜ್ ಹುಡೇದ, ತಹಸೀಲ್ದಾರ್ ನೀಲಪ್ರಭಾ, ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ವಾರದ, ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ, ಜಿ. ತಮ್ಮಣ್ಣ, ಶರಣು ಆವಂಟಿ, ಪ್ರಕಾಶ್ ನೀರೆಟಿ, ಕೃಷ್ಣಾರೆಡ್ಡಿ ಪೊಲೀಸ್ ಪಾಟೀಲ್, ಬಾಲು ದಾಸರಿ, ಸಿರಾಜ್ ಚಿಂತಕುಂಟಿ, ಆಶನ್ನ ಬುದ್ಧ, ಅಂಬಾದಾಸ ಜೀತ್ರಿ, ನರಸಪ್ಪ ಲಿಕ್ಕಿ, ರವಿಂದ್ರರೆಡ್ಡಿ ಗವಿನೋಳ, ಗುರುನಾಥ ತಲಾರಿ ಸೇರಿದಂತೆ ಇತರರಿದ್ದರು.