ಸಾರಾಂಶ
ಪೂರ್ವಭಾವಿ ಸಭೆ । ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಮಾಹಿತಿ । ತಾಲೂಕು ಕಚೇರಿಯಲ್ಲಿ ಸಭೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಸಂವಿಧಾನ ಜಾರಿಯಾಗಿ ೭೫ ವರ್ಷಗಳಾದ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ ಸಂವಿಧಾನದ ಬಗ್ಗೆ ನಾಗರಿಕರಲ್ಲಿ ಹೆಚ್ಚಿನ ಅರಿವನ್ನು ಮೂಡಿಸುವ ಜತೆಗೆ ವೈಭವದ ಸಂಭ್ರಮಾಚರಣೆ ನಡೆಸುವ ಉದ್ದೇಶದಿಂದ ಜಾಗೃತಿ ರಥವು ಫೆ.೨ ರಿಂದ ತಾಲೂಕಿನಲ್ಲಿ ಸಂಚರಿಸಲಿದೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಸಂವಿಧಾನ ರಥ ಸಂಚಾರ ಹಾಗೂ ಅದ್ಧೂರಿಯಾಗಿ ಸ್ವಾಗತಿಸುವ ಮತ್ತು ಕಾರ್ಯಕ್ರಮಗಳ ಕುರಿತು ಆಯೋಜನೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫೆ.೨ ರಂದು ತಾ. ಹಂಗರಹಳ್ಳಿ ಮೂಲಕ ಆಗಮಿಸುವ ರಥವನ್ನು ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನದೊಂದಿಗೆ ಬರಮಾಡಿಕೊಂಡು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ಆಯೋಜನೆ ಮಾಡುವ ಮೂಲಕ ಜನರಲ್ಲಿ ಸಂವಿಧಾನದ ಆಶಯಗಳ ಅರಿವನ್ನು ಮೂಡಿಸುವ ಜತೆಗೆ ಸರ್ಕಾರದ ಮಹತ್ವದ ಅರಿವು ಮತ್ತು ಜಾಗೃತಿಯ ಅಭಿಯಾನವು ಯಶಸ್ವಿಗೊಳಿಸುವುದು ಅಗತ್ಯವಾಗಿದೆ ಎಂದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಪಿ.ಆರ್. ಮಾತನಾಡಿ, ರಥ ಸಂಚಾರ ಕುರಿತು ಈಗಾಗಲೇ ಗ್ರಾಮ ಪಂಚಾಯಿತಿ ಪಿಇಒ ಹಾಗೂ ಅಧಿಕಾರಿಗಳ ಸಭೆ ನಡೆಸಿ, ಕಾರ್ಯಕ್ರಮದ ಅಯೋಜನೆ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಹಂಗರಹಳ್ಳಿ ಮೂಲಕ ತಾಲೂಕಿಗೆ ಆಗಮಿಸುವ ಸಂವಿಧಾನ ಜಾಗೃತಿ ರಥವು ಹಂಗರಹಳ್ಳಿ, ಪಡುವಲಹಿಪ್ಪೆ ಗ್ರಾ.ಪಂ. ಮಟ್ಟದಲ್ಲಿ ವ್ಯವಸ್ಥಿತ ಕಾರ್ಯಕ್ರಮ ಜರುಗಿದ ನಂತರ ಪಟ್ಟಣಕ್ಕೆ ಆಗಮಿಸಲಿದೆ ಎಂದರು.
ಫೆ. ೩ ರಂದು ಐಚನಹಳ್ಳಿ, ಹಳೇಕೋಟೆ, ಕಟ್ಟೆಬೆಳಗುಲಿ, ಭಾಗೀವಾಳು, ಮಲ್ಲಪ್ಪನಹಳ್ಳಿ ಮೂಡಲಹಿಪ್ಪೆಯ ಕಾರ್ಯಕ್ರಮ ನಂತರ ಮೂಡಲಹಿಪ್ಪೆ ವಿದ್ಯಾರ್ಥಿ ನಿಲಯದಲ್ಲಿ ತಂಗಲಿದ್ದಾರೆ. ಫೆ. ೪ ರಂದು ಕೋಡಿಹಳ್ಳಿ, ದೊಡ್ಡಕುಂಚೆ, ಹರಿಹರಪುರ, ಮಳಲಿಯ ಕಾರ್ಯಕ್ರಮ ನಂತರ ಮಳಲಿ ವಿದ್ಯಾರ್ಥಿ ನಿಲಯದಲ್ಲಿ ತಂಗಲಿದ್ದು, ಫೆ. ೫ ರಂದು ಚನ್ನರಾಯಪಟ್ಟಣ ತಾಲೂಕಿಗೆ ರಥ ಸಾಗಲಿದೆ. ಫೆ.೨೦ ರಿಂದ ಹಳ್ಳಿಮೈಸೂರು ಹೋಬಳಿಯಲ್ಲಿ ರಥ ಸಂಚರಿಸಲಿದ್ದು, ಬಿದರಕ್ಕ, ನಿಡುವಣಿ, ಓಡನಹಳ್ಳಿ, ಕೆರಗೋಡಿನಲ್ಲಿ ಕಾರ್ಯಕ್ರಮದ ನಂತರ ವಿದ್ಯಾರ್ಥಿ ನಿಲಯದಲ್ಲಿ ತಂಗಲಿದ್ದಾರೆ. ಫೆ. ೨೧ ರಂದು ತಾತನಹಳ್ಳಿ, ಹಳ್ಳಿಮೈಸೂರು, ಕ್ಯಾತನಹಳ್ಳಿ, ಆನೆಕನ್ನಂಬಾಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಫೆ.೨೨ ರಂದು ದೊಡ್ಡಹಳ್ಳಿ, ನಗರನಹಳ್ಳಿ, ಶ್ರವಣೂರು, ದೊಡ್ಡಕಾಡನೂರು, ಮತ್ತು ಫೆ.೨೩ ರಂದು ಹಾಸನ ನಗರಕ್ಕೆ ರಥ ಸಂಚರಿಸಲಿದೆ ಎಂದರು.ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೌಸರ್ ಅಹಮದ್, ನಗರ ಪೊಲೀಸ್ ಠಾಣೆ ಪಿಎಸ್ಸೈ ಅರುಣ್, ಗ್ರಾ. ಪೊಲೀಸ್ ಠಾಣೆ ಪಿಎಸ್ಸೈ ವಿನಯ್ ಕುಮಾರ್, ಬಿಇಒ ಸೋಮಲಿಂಗೇಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜ್ಯೋತಿ ಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ಚಿಕ್ಕೇಗೌಡ, ಪುರಸಭೆ ಅಧಿಕಾರಿ ರಮೇಶ್, ಸಂಘ ಸಂಸ್ಥೆಗಳ ಸದಸ್ಯರು ಇದ್ದರು.ಹೊಳೆನರಸೀಪುರ ಪಟ್ಟಣದ ತಾಲೂಕು ಕಚೇರಿಯಲ್ಲಿ ಸಂವಿಧಾನ ರಥ ಸಂಚಾರ ಕುರಿತು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಆಯೋಜನೆ ಮಾಡಲಾಗಿತ್ತು.