ಕೆರೂಟಗಿ ಗ್ರಾಪಂನಿಂದ ಸಂವಿಧಾನ ಜಾಗೃತಿ ಜಾಥಾ

| Published : Feb 20 2024, 01:48 AM IST

ಸಾರಾಂಶ

ದೇವರಹಿಪ್ಪರಗಿ: ಸಂವಿಧಾನದ ಮಹತ್ವ ಹಾಗೂ ಆಶಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕಿನ ಕೆರೂಟಗಿ ಗ್ರಾಮ ಪಂಚಾಯಿತಿ ವತಿಯಿಂದ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಸಂವಿಧಾನ ರಚನೆಯ 75ನೇ ವರ್ಷದ ಅಂಗವಾಗಿ ನಡೆದ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರಕ್ಕೆ ಹೂವಿನ ಮಾಲಾರ್ಪಣೆ ಮಾಡಿ, ಸಂವಿಧಾನ ಪೀಠಿಕೆಯ ಭಿತ್ತಿಪತ್ರಗಳನ್ನು ಹಿಡಿದು, ಪೂರ್ಣಕುಂಭದ ಮೂಲಕ ಸ್ವಾಗತ ಕೋರಲಾಯಿತು.

ದೇವರಹಿಪ್ಪರಗಿ: ಸಂವಿಧಾನದ ಮಹತ್ವ ಹಾಗೂ ಆಶಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕಿನ ಕೆರೂಟಗಿ ಗ್ರಾಮ ಪಂಚಾಯಿತಿ ವತಿಯಿಂದ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಸಂವಿಧಾನ ರಚನೆಯ 75ನೇ ವರ್ಷದ ಅಂಗವಾಗಿ ನಡೆದ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರಕ್ಕೆ ಹೂವಿನ ಮಾಲಾರ್ಪಣೆ ಮಾಡಿ, ಸಂವಿಧಾನ ಪೀಠಿಕೆಯ ಭಿತ್ತಿಪತ್ರಗಳನ್ನು ಹಿಡಿದು, ಪೂರ್ಣಕುಂಭದ ಮೂಲಕ ಸ್ವಾಗತ ಕೋರಲಾಯಿತು. ಗ್ರಾಪಂ ಅಧ್ಯಕ್ಷೆ ಸತ್ಯೆವ್ವ ಪರಶುರಾಮ ದೊಡಮನಿ, ಪಿಡಿಒ ಎ.ಟಿ.ಅಂಗಡಿ ಹಾಗೂ ಸದಸ್ಯರು ಗೌರವ ಸೂಚಿಸಿದರು. ವಿವಿಧ ಸಾಂಸ್ಕೃತಿಕ ತಂಡಗಳಿಂದ ಕಲಾಪ್ರದರ್ಶನ ನಡೆಯಿತು.

ಡಿಎಸ್ಎಸ್ ತಾಲೂಕು ಸಂಚಾಲಕ ರಾಜಕುಮಾರ ಸಿಂದಗೇರಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ಅರಿತು ಇತರರಿಗೂ ತಿಳಿಸುವ ಮೂಲಕ ಪ್ರತಿಯೊಬ್ಬರ ಭಾರತೀಯ ಪ್ರಜೆಯಲ್ಲೂ ಸಂವಿಧಾನದ ಜಾಗೃತಿ ಮೂಡಿಸಬೇಕಿದೆ ಎಂದರು.

ಮುಖಂಡರಾದ ಸಿದ್ದು ಬುಳ್ಳಾ, ಲಕ್ಕಪ್ಪ ಬಡಿಗೇರ, ಶಿಕ್ಷಕ ಎಸ್.ಎಸ್.ಸಾತಿಹಾಳ, ಗ್ರಾಪಂ ಸದಸ್ಯರಾದ ರಾಮನಗೌಡ ಚಟ್ಟರಕಿ, ಬಾಬು ರಾಠೋಡ, ಬಾಬು ಮೇಲಿನಮನಿ, ಯಮನಪ್ಪ ಬೋವಿ, ಪರಶುರಾಮ ಬುಯ್ಯಾರ, ಬಾಬುಗೌಡ ಕುದರಗೊಂಡ, ರವಿ ಪೂಜಾರಿ, ಆನಂದ ರಾಠೋಡ, ಸಿದ್ರಾಮ ಮಾದರ, ಸವಿತಾ ಗುಡಿಸಲಮನಿ, ಮಲ್ಕಪ್ಪ ಭಜಂತ್ರಿ, ರಮೇಶ ಮಜ್ಜಿಗಿ, ಸಾಯಿಬಣ್ಣ ಗುಡಿಮನಿ, ಶಿವಾನಂದ ವಾಲೀಕಾರ, ಅಶೋಕ ಗುಡಿಸಲಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಶಿವಲಿಂಗಪ್ಪ ಹಚಡದ, ದಾನೇಶ ಕಲಕೇರಿ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕ ಎ.ಡಿ.ಶೇಖ ನಿರೂಪಿಸಿದರು, ಸಂತೋಷ ಗುಮಶೇಟ್ಟಿ ನಡೆಸಿಕೊಟ್ಟರು, ಅವಿನಾಶ ಚಿಗರಿ ವಂದಿಸಿದರು.