ಯರನಾಳ, ಮುತ್ತಿಗಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ

| Published : Feb 11 2024, 01:46 AM IST

ಯರನಾಳ, ಮುತ್ತಿಗಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಇಲಾಖೆ ಅಧಿಕಾರಿಗಳು, ಕಲಾತಂಡಗಳು, ವಿವಿಧ ಶಾಲೆ ಸಿಬ್ಬಂದಿ, ಮಕ್ಕಳು, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಯರನಾಳ ಮತ್ತು ಮುತ್ತಗಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.

ಮುತ್ತಗಿ ಗ್ರಾಮದಿಂದ ಬಂದ ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧಚಿತ್ರವನ್ನು ಮುತ್ತಗಿ ರಸ್ತೆಯಲ್ಲಿ ಪೂಜೆ ಸಲ್ಲಿಸಿ ಬರ ಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ಸಾರವಾಡದ ಗೊಂಬೆಗಳು ಗಮನ ಸೆಳೆದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದಿದ್ದು, ವಿವಿಧ ಇಲಾಖೆ ಅಧಿಕಾರಿಗಳು, ಕಲಾತಂಡಗಳು, ವಿವಿಧ ಶಾಲೆ ಸಿಬ್ಬಂದಿ, ಮಕ್ಕಳು, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಡಾ.ಮಾಧವ ಗುಡಿ ಸಂವಿಧಾನ ಕುರಿತು ಮಾತನಾಡಿದರು. ಸಿ.ಎಲ್.ನರಗುಂದ ಸ್ವಾಗತಿಸಿದರು. ಶ್ರೀಶೈಲ ಪಟೇದ ನಿರೂಪಿಸಿದರು. ಚಾಂದಸಾಬ ನದಾಫ ವಂದಿಸಿದರು. ನಂತರ ಮನಗೂಳಿ ಪಟ್ಟಣಕ್ಕೆ ಜಾಥಾ ತೆರಳಿತು. ಗ್ರಾಪಂ ಬಳಿಯ ಗೌರಿಶಂಕರ ಬಯಲು ರಂಗಮಂಟಪದಲ್ಲಿ ಜರುಗಿದ ಕಾರ್ಯಕ್ರಮದ ಸಾನಿಧ್ಯವನ್ನು ಬೀರಪ್ಪಮುತ್ಯಾ, ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಶಾಂತವ್ವ ಕೋಲಕಾರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ಧಾರ ಜಿ.ಎಸ್.ನಾಯಕ, ನೋಡಲ್ ಅಧಿಕಾರಿ ಎಂ.ಎಚ್.ಯರಝರಿ, ಬಿಇಓ ವಸಂತ ರಾಠೋಡ, ಬಿಆರ್ಪಿ ಭಾರತಿ ಪಾಟೀಲ, ಸಿಆರ್ಪಿಗಳಾದ ಎಸ್.ಬಿ.ಸಜ್ಜನ, ಆರ್.ಎಂ.ಬೆಳ್ಳುಬ್ಬಿ, ಡಿಎಸ್ಎಸ್ ಮುಖಂಡರಾದ ಅಶೋಕ ಚಲವಾದಿ, ಮಾಂತೇಶ ಸಾಸಾಬಾಳ, ಗುರು ಗುಡಿಮನಿ, ಪರಶುರಾಮ ದಿಂಡವಾರ, ಮುದಕಣ್ಣ ದಿಂಡವಾರ, ಎಸ್.ಎಸ್.ಕೆಂಪೇಗೌಡರು, ಮುಖಂಡರಾದ ಬಸವರಾಜ ಜಾಲಗೇರಿ, ಸಂಗನಗೌಡ ಪಾಟೀಲ, ರಮೇಶ ಬಂಟಗೋಡಿ, ಶಿವಯ್ಯ ಮಣೂರಮಠ, ಪಂಕಜಾ ಚಲವಾದಿ, ಪಿಡಿಓ ರವಿ ಗುಂಡಳ್ಳಿ ಇದ್ದರು.