ಸಂವಿಧಾನ ಸರ್ವರಿಗೂ ಸಮಾನ ಅವಕಾಶ ನೀಡಿದೆ

| Published : Jan 27 2025, 12:46 AM IST

ಸಾರಾಂಶ

ಸಂವಿಧಾನವನ್ನು ಗೌರವಿಸಿ ನಡೆದಾಗ ಯಾವುದೇ ಅಹಿತಕರ ಘಟನೆ ಸಂಭವಿಸುವುದಿಲ್ಲ ಎಂದು ಶಾಸಕ ಎ. ಮಂಜು ತಿಳಿಸಿದರು. ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಿಧಾನ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಸಂವಿಧಾನವನ್ನು ಗೌರವಿಸಿ ನಡೆದಾಗ ಯಾವುದೇ ಅಹಿತಕರ ಘಟನೆ ಸಂಭವಿಸುವುದಿಲ್ಲ ಎಂದು ಶಾಸಕ ಎ. ಮಂಜು ತಿಳಿಸಿದರು.

ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಿಧಾನ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ ಎಂದರು.

ಅರಕಲಗೂಡು ಸೂರ್ಯಪ್ರಕಾಶ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಾಗೂ ತಾಲೂಕಿನ ಬಾನುಗುಂದಿ ಗ್ರಾಮದ ಹೊಳೆನರಸೀಪುರ ವೃತ್ತದ ಪೊಲೀಸ್ ಇನ್ಸೆಪೆಕ್ಟರ್ ಬಿ.ಆರ್.ಪ್ರದೀಪ್ ಅವರಿಗೆ ರಾಷ್ಟ್ರಪತಿ ಪದಕ ದೊರೆತಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಶಿಕ್ಷಣ ಇಲಾಖೆ ಹೊಯ್ಸಳೋತ್ಸವ ಎಂಬ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಕಾರ್ಯ ನಡೆಸಿದೆ. 10ನೇ ತರಗತಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕು ಎಂದರು.

ತಹಸೀಲ್ದಾರ್ ಎಚ್. ಮಲ್ಲಿಕಾರ್ಜುನ್ ಧ್ವಜಾರೋಹಣ ನೆರವೇರಿಸಿ ಧ್ವಜಸಂದೇಶ ನೀಡಿದರು. ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಸರ್ಕಾರಿ ಆಯುರ್ವೇದ ವೈದ್ಯಾಧಿಕಾರಿ ಡಾ. ಧನಂಜಯ, ಸಾವಯವ ಕೃಷಿಕ ಎಚ್.ಕೆ.ರಾಮಚಂದ್ರ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ವೀರಭದ್ರಯ್ಯ, ಕೇರಳಾಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು 30 ಲಕ್ಷ ರು. ಬೆಲೆಯ ನಿವೇಶನವನ್ನು ದಾನವಾಗಿ ನೀಡಿದ ಡಿ. ಮಂಜುನಾಥ್, ಕುಡಿಕಾಂಡ ಹೊಸ ತಂತ್ರಜ್ಞಾನ ಬಳಸಿ ಬಿತ್ತನೆ ಆಲೂಗೆಡ್ಡೆ ಬೆಳೆದಿರುವ ಬೈಚನಹಳ್ಳಿ ಗ್ರಾಮದ ಬಿ.ಎಂ.ದಯಾನಂದ್, ಅಂಗನವಾಡಿ ಕಾರ್ಯಕರ್ತೆ ಬಿ.ಎಂ.ಭಾಗ್ಯ, ಪಶುವೈದ್ಯಕೀಯ ಇಲಾಖೆಯ ಎಚ್.ಎಂ.ಆನಂದ್, ಅಗ್ನಿಶಾಮಕ ಠಾಣೆಯ ಎಂ.ಎಸ್. ಮಂಜುನಾಥ್, ಸೆಸ್ಕ್‌ನ ಎಂ.ಸಿ.ಜಗದೀಶ್, ಕಾಲೇನಹಳ್ಳಿ ಪಿಡಿಒ ಕೇಶವನಾಗ್, ಸರ್ವೆ ಇಲಾಖೆಯ ಎಲ್. ಬಿ.ಕುಮಾರ್, ಆರೋಗ್ಯ ಇಲಾಖೆಯ ಡಾ.ಬಿ.ಕೆ. ಸುರೇಶ್, ರಾಮನಾಥಪುರ ಗ್ರಾಪಂ ಆಡಳಿತಾಧಿಕಾರಿ ಕೆ.ಜೆ. ಧರ್ಮೇಶ್, ಪೊಲೀಸ್ ಕಾನ್ಸ್‌ಟೇಬಲ್ ಪರಮೇಶ್, ಪತ್ರಕರ್ತ ಬಿ.ಪಿ. ಗಂಗೇಶ್ ಅವರನ್ನು ಗೌರವಿಸಲಾಯಿತು.

ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಉಪಾಧ್ಯಕ್ಷ ಸುಬಾನ್ ಷರೀಫ್‌, ಸದಸ್ಯ ಅನಿಕೇತನ್, ಕೃಷ್ಣಯ್ಯ, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ,ತಾಪಂ ಇಒ ಪ್ರಕಾಶ್, ಬಿಇಒ ಕೆ.ಪಿ.ನಾರಾಯಣ್ ಉಪಸ್ಥಿತರಿದ್ದರು.

ಶಿಕ್ಷಣ ಇಲಾಖೆ ಆಯೋಜಿಸಿದ್ದ ಪಟ್ಟಣ ವ್ಯಾಪಿಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಒಂದು ಸಾವಿರ ವಿದ್ಯಾರ್ಥಿಗಳು ಸೇರಿ ಪ್ರಸ್ತುತ ಪಡಿಸಿದ ಹೊಯ್ಸಳರ ಆಳ್ವಿಕೆ, ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಹೊಯ್ಸಳ ವೈಭವ ನೃತ್ಯರೂಪಕ ಜನರ ಮೆಚ್ಚುಗೆ ಪಡೆಯಿತು.